Asianet Suvarna News Asianet Suvarna News

ಟಿ20 ವಿಶ್ವಕಪ್‌ ಬಳಿಕ ನ್ಯೂಯಾರ್ಕ್‌ ಸ್ಟೇಡಿಯಂ ಸಂಪೂರ್ಣ ಧ್ವಂಸ?

ಈ ಕ್ರೀಡಾಂಗಣವನ್ನು ವಿಶ್ವಕಪ್‌ ಪಂದ್ಯಗಳಿಗಾಗಿ 30 ಮಿಲಿಯನ್‌ ಅಮೆರಿಕನ್‌ ಡಾಲರ್‌ (ಅಂದಾಜು 250 ಕೋಟಿ ರು.) ವೆಚ್ಚದಲ್ಲಿ, 40 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿತ್ತು. ಕೇವಲ 4 ತಿಂಗಳಲ್ಲೇ ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಂಡಿದ್ದು, 35 ಸಾವಿರ ಆಸನ ಸಾಮರ್ಥ್ಯ ಹೊಂದಿತ್ತು.

What Will Happen To Nassau Stadium After T20 World Cup 2024 kvn
Author
First Published Jun 13, 2024, 10:14 AM IST

ನ್ಯೂಯಾರ್ಕ್‌: ಟಿ20 ವಿಶ್ವಕಪ್‌ಗಾಗಿಯೇ ನಿರ್ಮಿಸಲಾಗಿದ್ದ ನ್ಯೂಯಾರ್ಕ್‌ನ ನಾಸೌ ಕ್ರೀಡಾಂಗಣವನ್ನು ಟೂರ್ನಿಯ ಬಳಿಕ ಆಯೋಜಕರು ನೆಲಕ್ಕುರುಳಿಸಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಈ ಕ್ರೀಡಾಂಗಣವನ್ನು ವಿಶ್ವಕಪ್‌ ಪಂದ್ಯಗಳಿಗಾಗಿ 30 ಮಿಲಿಯನ್‌ ಅಮೆರಿಕನ್‌ ಡಾಲರ್‌ (ಅಂದಾಜು 250 ಕೋಟಿ ರು.) ವೆಚ್ಚದಲ್ಲಿ, 40 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿತ್ತು. ಕೇವಲ 4 ತಿಂಗಳಲ್ಲೇ ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಂಡಿದ್ದು, 35 ಸಾವಿರ ಆಸನ ಸಾಮರ್ಥ್ಯ ಹೊಂದಿತ್ತು.

ಭಾರತ-ಪಾಕಿಸ್ತಾನ ಸೇರಿದಂತೆ ಟೂರ್ನಿಯ ಒಟ್ಟು 8 ಪಂದ್ಯಗಳಿಗೆ ಈ ಕ್ರೀಡಾಂಗಣ ಆತಿಥ್ಯ ವಹಿಸಿದೆ. ಬುಧವಾರ ಭಾರತ-ಅಮೆರಿಕ ಪಂದ್ಯ ಇಲ್ಲಿ ನಡೆದ ಕೊನೆ ಪಂದ್ಯ ಎಂದು ಹೇಳಲಾಗುತ್ತಿದೆ. ಈ ಕ್ರೀಡಾಂಗಣಕ್ಕೆ ಆಸ್ಟ್ರೇಲಿಯಾದಿಂದ ತರಿಸಲಾದ ಡ್ರಾಪ್‌ ಇನ್‌ ಪಿಚ್‌ಗಳನ್ನು ಅಳವಡಿಸಲಾಗಿತ್ತು.

ಭಾರೀ ಮಳೆಯಿಂದ ರದ್ದಾದ ಶ್ರೀಲಂಕಾ-ನೇಪಾಳ ಪಂದ್ಯ! ಲಂಕಾ ಸೂಪರ್-8 ಕನಸು ಬಹುತೇಕ ಭಗ್ನ

₹1.36 ಲಕ್ಷ ಕೋಟಿಗೆ ಏರಿದ ಐಪಿಎಲ್‌ ಮೌಲ್ಯ!

ನವದೆಹಲಿ: ವಿಶ್ವದ ಶ್ರೀಮಂತ ಲೀಗ್‌ಗಳಲ್ಲಿ ಒಂದಾಗಿರುವ ಐಪಿಎಲ್‌ನ ಮೌಲ್ಯ 17ನೇ ಆವೃತ್ತಿ ಬಳಿಕ ಸುಮಾರು 16.4 ಬಿಲಿಯನ್‌ ಡಾಲರ್‌(ಸುಮಾರು 1.36 ಲಕ್ಷ ಕೋಟಿ ರು.)ಗೆ ಏರಿಕೆಯಾಗಿದೆ ಎಂದು ಜಾಗತಿಕ ಹೂಡಿಕೆ ಬ್ಯಾಂಕ್ ಹೌಲಿಹಾನ್ ಲೋಕಿ ವರದಿ ಮಾಡಿದೆ. ಕಳೆದ ವರ್ಷ ಐಪಿಎಲ್ ಮೌಲ್ಯ 15.4 ಬಿಲಿಯನ್‌ ಡಾಲರ್‌(1.28 ಲಕ್ಷ ಕೋಟಿ ರು.) ಇತ್ತು. ಆದರೆ ಈ ವರ್ಷ ಶೇ.6.5ರಷ್ಟು ಹೆಚ್ಚಳವಾಗಿದೆ. 

ಇನ್ನು ಟೂರ್ನಿಯ ಬ್ರ್ಯಾಂಡ್‌ ಮೌಲ್ಯ ಕೂಡಾ ಶೇಕಡಾ 6.3ರಷ್ಟು ಏರಿಕೆಯಾಗಿದ್ದು, ಒಟ್ಟು 3.4 ಬಿಲಿಯನ್‌ ಡಾಲರ್‌(₹28,000 ಕೋಟಿ)ಗೆ ಹೆಚ್ಚಳವಾಗಿದೆ. ಇನ್ನು, ಫ್ರಾಂಚೈಸಿಗಳ ಪೈಕಿ ಚೆನ್ನೈ ಸೂಪರ್‌ ಕಿಂಗ್ಸ್‌ ಹೆಚ್ಚಿನ ಮೌಲ್ಯ ಹೊಂದಿದ್ದು, ಆರ್‌ಸಿಬಿ, ಹಾಲಿ ಚಾಂಪಿಯನ್‌ ಕೋಲ್ಕತಾ, ಮುಂಬೈ ಇಂಡಿಯನ್ಸ್‌ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ ಎಂದು ವರದಿ ತಿಳಿಸಿದೆ.

T20 World Cup 2024 ಅಮೆರಿಕ ಮಣಿಸಿದ ಭಾರತ ಭರ್ಜರಿಯಾಗಿ ಸೂಪರ್ 8 ಹಂತಕ್ಕೆ ಲಗ್ಗೆ..!

ಕ್ರಿಕೆಟಿಗ ಮಯಾಂಕ್‌ರಿಂದ ಸರ್ಪಸಂಸ್ಕಾರ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಅವರು ಸರ್ಪಸಂಸ್ಕಾರ ಸೇವೆಯನ್ನು ಮಂಗಳವಾರ ಆರಂಭಿಸಿದ್ದಾರೆ. ಸೋಮವಾರ ಕ್ಷೇತ್ರಕ್ಕೆ ಪತ್ನಿ ಆಶಿತಾ ಸೂದ್ ಅವರೊಂದಿಗೆ ಆಗಮಿಸಿ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದರು. ಮಂಗಳವಾರ ಬೆಳಗ್ಗೆ ಕುಟುಂಬ ಸಮೇತರಾಗಿ ದೇವಳದಲ್ಲಿ ಸರ್ಪಸಂಸ್ಕಾರ ಸೇವೆ ಆರಂಭಿಸಿ, ವೈದಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು. ಬುಧವಾರ ಗೋಪೂಜೆ, ಬ್ರಹ್ಮಚಾರಿ ಆರಾಧನೆ ಮತ್ತು ನಾಗಪ್ರತಿಷ್ಠಾ ಸೇವೆ ನೆರವೇರಿಸಿ ಸರ್ಪಸಂಸ್ಕಾರ ಸೇವೆಯನ್ನು ಸಂಪೂರ್ಣಗೊಳಿಸಲಿದ್ದಾರೆ.

ಮಯಾಂಕ್‌ ಅಗರ್ವಾಲ್‌, ಕರ್ನಾಟಕದ ರಣಜಿ ತಂಡ, ಐಪಿಎಲ್‌ನಲ್ಲಿ ಸನ್‌ರೈಸರ್ ಹೈದರಾಬಾದ್ ತಂಡ ಮತ್ತು ಇರಾನಿ ಟ್ರೋಪಿಯಲ್ಲಿ ರೆಸ್ಟ್ ಆಫ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸಿದ್ದರು.
 

Latest Videos
Follow Us:
Download App:
  • android
  • ios