ಕ್ರಿಕೆಟಿಗ ಮಯಾಂಕ್ ಅಗರ್‌ವಾಲ್ ವಿಮಾನದಲ್ಲಿ ಕುಡಿದಿದ್ದೇನು..? ಅಸ್ವಸ್ಥರಾಗಲು ಏನು ಕಾರಣ?
ಸೋಮವಾರ ತ್ರಿಪುರಾ ವಿರುದ್ಧದ ರಣಜಿ ಪಂದ್ಯವನ್ನು ಗೆದ್ದ ಬಳಿಕ, ಮಂಗಳವಾರ ಮಧ್ಯಾಹ್ನ ರಾಜ್ಯ ತಂಡವು ತನ್ನ ಮುಂದಿನ ಪಂದ್ಯವನ್ನಾಡಲು ನವದೆಹಲಿ ಮಾರ್ಗವಾಗಿ ಸೂರತ್‌ಗೆ ತೆರಳುತಿತ್ತು. ಈ ವೇಳೆ ಇಂಡಿಗೋ ವಿಮಾನದಲ್ಲಿ ದ್ರವ ಪದಾರ್ಥವನ್ನು ಸೇವಿಸುತ್ತಿದ್ದಂತೆ ಮಯಾಂಕ್‌ಗೆ ಹೊಟ್ಟೆ ನೋವು ಶುರುವಾಗಿದ್ದು, ಎರಡು ಬಾರಿ ವಾಂತಿ ಸಹ ಮಾಡಿಕೊಂಡಿದ್ದಾರೆ.
ಅರ್ಗತಾಲಾ: ಕರ್ನಾಟಕ ಕ್ರಿಕೆಟ್ ತಂಡದ ನಾಯಕ ಮಯಾಂಕ್ ಅಗರ್‌ವಾಲ್ ವಿಮಾನದಲ್ಲಿ ಬಾಟಲಿಯಲ್ಲಿದ್ದ ಸ್ಪಿರಿಟ್ (ಶೌಚಾಲಯ ಶುಚಿಗೊಳಿಸಲು ಬಳಸುವ ದ್ರಾವಣ) ಅನ್ನು ನೀರೆಂದು ಭಾವಿಸಿ ಕುಡಿದು ಅಸ್ವಸ್ಥರಾದ ಘಟನೆ ಮಂಗಳವಾರ ನಡೆದಿದೆ.
ಸೋಮವಾರ ತ್ರಿಪುರಾ ವಿರುದ್ಧದ ರಣಜಿ ಪಂದ್ಯವನ್ನು ಗೆದ್ದ ಬಳಿಕ, ಮಂಗಳವಾರ ಮಧ್ಯಾಹ್ನ ರಾಜ್ಯ ತಂಡವು ತನ್ನ ಮುಂದಿನ ಪಂದ್ಯವನ್ನಾಡಲು ನವದೆಹಲಿ ಮಾರ್ಗವಾಗಿ ಸೂರತ್‌ಗೆ ತೆರಳುತಿತ್ತು. ಈ ವೇಳೆ ಇಂಡಿಗೋ ವಿಮಾನದಲ್ಲಿ ದ್ರವ ಪದಾರ್ಥವನ್ನು ಸೇವಿಸುತ್ತಿದ್ದಂತೆ ಮಯಾಂಕ್‌ಗೆ ಹೊಟ್ಟೆ ನೋವು ಶುರುವಾಗಿದ್ದು, ಎರಡು ಬಾರಿ ವಾಂತಿ ಸಹ ಮಾಡಿಕೊಂಡಿದ್ದಾರೆ. ಕೂಡಲೇ ಮಯಾಂಕ್‌ರನ್ನು ವಿಮಾನದಿಂದ ಕೆಳಗಿಳಿಸಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಯಿತು. ಅವರಿಗೆ ಯಾವುದೇ ಅಪಾಯವಿಲ್ಲ ಎಂದು ತಿಳಿದುಬಂದಿದ್ದು, ಬುಧವಾರ ಬೆಂಗಳೂರಿಗೆ ಬರಲಿದ್ದಾರೆ. ಮಯಾಂಕ್ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.
ವೈಜಾಗ್‌ನಲ್ಲಿ ಇಂಗ್ಲೆಂಡ್ ಎದುರು ಟೀಂ ಇಂಡಿಯಾ 3 ಬದಲಾವಣೆಗಳೊಂದಿಗೆ ಕಣಕ್ಕಿಳಿಯೋದು ಪಕ್ಕಾ..!
ರೈಲ್ವೇಸ್ ವಿರುದ್ದದ ಪಂದ್ಯದಿಂದ ಔಟ್
ಮಯಾಂಕ್ ಫೆ.2ರಿಂದ ಸೂರತ್‌ನಲ್ಲಿ ನಡೆಯಲಿರುವ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ಆಡುವುದಿಲ್ಲ ಎಂದು ತಿಳಿದುಬಂದಿದೆ. ಮಯಾಂಕ್‌ರನ್ನು ಅಗರ್ತಾಲಾದಲ್ಲಿ ಇಳಿಸಿ ತನ್ನ ಪ್ರಯಾಣ ಮುಂದುವರಿಸಿದ ತಂಡ, ಸೂರತ್ ತಲುಪಿದೆ. ಉಪನಾಯಕ ನಿಕಿನ್ ಜೋಸ್ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ವೈಜಾಗ್ ಟೆಸ್ಟ್‌ನಲ್ಲಿ ವೇಗಿಗಳೇ ಇಲ್ಲದೇ ಇಂಗ್ಲೆಂಡ್ ಕಣಕ್ಕೆ?
ವಿಶಾಖಪಟ್ಟಣಂ: ಭಾರತ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಅವಶ್ಯಕತೆ ಬಿದ್ದರೆ ವೇಗದ ಬೌಲರ್ರೇ ಇಲ್ಲದೆ ಆಡಲು ನಾವು ಸಿದ್ಧ ಎಂದು ಇಂಗ್ಲೆಂಡ್ ತಂಡದ ಕೋಚ್ ಬ್ರೆಂಡನ್ ಮೆಕ್ಕಲಂ ಹೇಳಿದ್ದಾರೆ. ಮೊದಲ ಪಂದ್ಯದಲ್ಲಿ ಕೇವಲ ಒಬ್ಬ ವೇಗಿಯನ್ನು ಆಡಿಸಿದ್ದ ನಾವು, ಇಲ್ಲಿನ ಎಸಿಎ ಕ್ರೀಡಾಂಗಣದ ಪಿಚ್ ಸ್ಪಿನ್ ಸ್ನೇಹಿ ಎನಿಸಿದರೆ ವೇಗಿಯನ್ನು ಹೊರಗಿಟ್ಟು ಮತ್ತೊಬ್ಬ ಸ್ಪಿನ್ನರನ್ನು ಆಡಿಸಲು ಸಿದ್ಧ ಎಂದಿದ್ದಾರೆ.
'ನಂಗೆ ಹುಡುಗೀರಂದ್ರೆ ಇಷ್ಟ': ಮೂರನೇ ಮದುವೆ ಬೆನ್ನಲ್ಲೇ ಶೋಯೆಬ್ ಮಲಿಕ್ ಹಳೇ ವಿಡಿಯೋ ವೈರಲ್..!
ಹೈದರಾಬಾದ್‌ನಲ್ಲಿ ವುಡ್ ಇಂಗ್ಲೆಂಡ್ ತಂಡದಲ್ಲಿದ್ದ ಏಕೈಕ ವೇಗಿ. ವಿಶಾಖಪಟ್ಟಣಂ ಟೆಸ್ಟ್‌ನಲ್ಲಿ ಸ್ಪಿನ್ನರ್‌ಗಳಾದ ಹಾರ್ಟ್ಲಿ, ಲೀಚ್, ಅಹ್ಮದ್, ಬಶೀರ್ ಆಡುವ ಸಾಧ್ಯತೆ ಇದೆ. ರೂಟ್ 5ನೇ ಬೌಲರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ‘ಕೆಲವೊಮ್ಮೆ ಆಟಗಾರರ ಆಯ್ಕೆ ಯಲ್ಲಿ ಹೆಚ್ಚು ಧೈರ್ಯ ತೋರಬೇಕಾಗುತ್ತದೆ. ಆಟಗಾರರ ಕೌಶಲ್ಯದಲ್ಲಿ ವಿಶ್ವಾಸವಿಟ್ಟು ಅವಕಾಶ ನೀಡಬೇಕಾಗುತ್ತದೆ. ವಿಶಾಖಪಟ್ಟಣಂನ ಪಿಚ್ ಸಂಪೂರ್ಣವಾಗಿ ಸ್ಪಿನ್ ಸ್ನೇಹಿಯಾಗಿದೆ ಎನಿಸಿದರೆ, ಬರೀ ಸ್ಪಿನ್ನರ್‌ಗಳನ್ನೇ ಆಡಿಸಲು ಹಿಂದೇಟು ಹಾಕುವುದಿಲ್ಲ’ ಎಂದಿದ್ದಾರೆ.