ಪಾಕಿಸ್ತಾನ ಪೌರತ್ವಕ್ಕೆ ಅರ್ಜಿ ಹಾಕಿದ 2 ವಿಶ್ವಕಪ್ ಗೆದ್ದುಕೊಟ್ಟ ನಾಯಕ..!
ಟಿ20 ವಿಶ್ವಕಪ್ ಎರಡು ಬಾರಿ ಗೆಲ್ಲಿಸಿಕೊಟ್ಟ ನಾಯಕ ಇದೀಗ ಪಾಕಿಸ್ತಾನದ ಪೌರತ್ವ ಪಡೆಯಲು ಮುಂದಾಗಿದ್ದಾರೆ. ಯಾರು ಆ ಯಶಸ್ವಿ ನಾಯಕ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ..
ಕರಾಚಿ(ಫೆ.22): ಅಚ್ಚರಿಯ ಬೆಳವಣಿಗೆಯಲ್ಲಿ ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡದ ಮಾಜಿ ನಾಯಕ ಡ್ಯಾರೆನ್ ಸ್ಯಾಮಿ, ಪಾಕಿಸ್ತಾನದ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್ ಟಿ20ಯಲ್ಲಿ ತಾವು ನೇತೃತ್ವ ವಹಿಸಿದ ಪೇಶಾವರ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಸ್ಯಾಮಿ, ಸದ್ಯದಲ್ಲೇ ಪಾಕಿಸ್ತಾನದ ಪ್ರಜೆಯಾಗಲಿದ್ದಾರೆ ಎಂದು ತಂಡದ ಮಾಲಿಕ ಜಾವೆದ್ ಅಫ್ರಿದಿ ತಿಳಿಸಿದ್ದಾರೆ.
‘ಸ್ಯಾಮಿಗೆ ಪಾಕಿಸ್ತಾನದ ಮೇಲೆ ಅಪಾರ ಒಲವಿದ್ದು, ಅವರಿಗೆ ಪೌರತ್ವ ನೀಡುವಂತೆ ಮನವಿ ಸಲ್ಲಿಸಿದ್ದೇವೆ. ಅರ್ಜಿ ರಾಷ್ಟ್ರಾಧ್ಯಕ್ಷರ ಬಳಿ ಇದೆ. ಸ್ಯಾಮಿ ಹೆಸರನ್ನು ಶಿಫಾರಸು ಮಾಡುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷರನ್ನೂ ಕೇಳಿಕೊಂಡಿದ್ದೇವೆ’ ಎಂದು ಜಾವೆದ್ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.
ಡ್ಯಾರೆನ್ ಸ್ಯಾಮಿ ನೇತೃತ್ವದಲ್ಲಿ ವಿಂಡೀಸ್ ತಂಡ 2 ಬಾರಿ ಟಿ20 ವಿಶ್ವಕಪ್ ಗೆದ್ದು ಇತಿಹಾಸ ಬರೆದಿದೆ. 2012ರಲ್ಲಿ ಶ್ರೀಲಂಕಾ ವಿರುದ್ಧ ಸ್ಯಾಮಿ ಪಡೆ ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಜಯಿಸಿತ್ತು. ಇನ್ನು 2016ರಲ್ಲಿ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ರೋಚಕ ಜಯ ಸಾಧಿಸಿತ್ತು. ಸ್ಯಾಮಿ 2016ರ ಆಗಸ್ಟ್‌ನಲ್ಲಿ ಟಿ20 ನಾಯಕತ್ವದಿಂದ ಕೆಳಗಿಳಿದಿದ್ದರು.
#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"