ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡಿದ್ದರೂ, ಮೆಲ್ಬರ್ನ್‌ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದರ ಬಗೆಗಿನ ಸೀಕ್ರೇಟನ್ನು ಟೀಂ ಇಂಡಿಯಾ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಬಿಚ್ಚಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಮುಂಬೈ(ಜ.25): ಆಸ್ಟ್ರೇಲಿಯಾ ವಿರುದ್ದ ಐತಿಹಾಸಿಕ ಗೆಲುವಿನ ಬಳಿಕ, ಸರಣಿಯ ಪ್ರಮುಖಾಂಶಗಳ ಬಗ್ಗೆ ಮಾತನಾಡಿರುವ ಭಾರತ ಟೆಸ್ಟ್ ತಂಡದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ರೋಚಕ ವಿಚಾರವೊಂದನ್ನು ಬಹಿರಂಗ ವಿಚಾರವೊಂದನ್ನು ಬಹಿರಂಗ ಪಡಿಸಿದ್ದಾರೆ.

ಅಡಿಲೇಡ್ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಕೇವಲ 36 ರನ್‌ಗಳಿಗೆ ಆಲೌಟ್‌ ಆಗಿ ಭಾರೀ ಒತ್ತಡಕ್ಕೊಳಗಿದ್ದ ಬಳಿಕವೂ ಮೆಲ್ಬರ್ನ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಸಮಬಲ ಸಾಧಿಸಿತ್ತು. ಆ ಪಂದ್ಯದಲ್ಲಿ ನಾಯಕ ಅಜಿಂಕ್ಯ ರಹಾನೆ ಆಕರ್ಷಕ ಶತಕ ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೂ ಮುನ್ನ 1999ರಲ್ಲಿ ಸಚಿನ್ ತೆಂಡುಲ್ಕರ್‌ ನಾಯಕರಾಗಿದ್ದಾಗ ಮೆಲ್ಬರ್ನ್‌ನಲ್ಲಿ ಆಸೀಸ್‌ ವಿರುದ್ದ ಶತಕ ಬಾರಿಸಿದ್ದರು. ಆ ಶತಕದ ವಿಡಿಯೋವನ್ನು ಹಲವು ಬಾರಿ ವೀಕ್ಷಿಸಿ, ಹೇಗೆ ಆಡಬೇಕು ಎಂದು ತಿಳಿದುಕೊಂಡಿದ್ದೆ. ಪಂದ್ಯ ಆರಂಭಗೊಳ್ಳುವ ಹಿಂದಿನ ರಾತ್ರಿ 10 ಬಾರಿ, ಪಂದ್ಯದ ದಿನ ಬೆಳಗ್ಗೆ 6-7 ಬಾರಿ ವಿಡಿಯೋ ವೀಕ್ಷಿಸಿದ್ದೆ ಎಂದು ರಹಾನೆ ಹೇಳಿದ್ದಾರೆ.

ಇದೇ ಕಾರಣಕ್ಕೆ ರಹಾನೆ ಇಷ್ಟ; ಕಾಂಗರೂ ಕೇಕ್ ಕತ್ತರಿಸಲು ನಿರಾಕರಿಸಿದ ಅಜಿಂಕ್ಯ!

ವಿರಾಟ್ ಕೊಹ್ಲಿ, ವೇಗಿಗಳಾದ ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ ಅನುಪಸ್ಥಿತಿಯ ಹೊರತಾಗಿಯೂ ಅಜಿಂಕ್ಯ ರಹಾನೆ ನೇತೃತ್ವದ ಟೀಂ ಇಂಡಿಯಾ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿಕೊಂಡಿತ್ತು. ಇದರ ಜತೆಗೆ ಗಾಬಾ ಮೈದಾನದಲ್ಲಿ 32 ವರ್ಷಗಳ ಬಳಿಕ ಆಸ್ಟ್ರೇಲಿಯಾ ತಂಡಕ್ಕೆ ಟೀಂ ಇಂಡಿಯಾ ಸೋಲಿನ ಕಹಿಯುಣಿಸಿತ್ತು.