ಲಾಹೋರ್(ಜೂ.07); ವಿಶ್ವ ಕ್ರಿಕೆಟ್ ಹಲವು ದಿಗ್ಗಜ ಕ್ರಿಕೆಟಿಗರನ್ನು ಕಂಡಿದೆ. ಇದರಲ್ಲಿ ಟಾಪ್ ಬ್ಯಾಟ್ಸ್‌ಮನ್‌ಗಳನ್ನು ಹೆಸರಿಸುವುದು ಕಷ್ಟ. ಇದೀಗ  ಪಾಕಿಸ್ತಾನ ದಿಗ್ಗಜ ಕ್ರಿಕೆಟಿಗ ವಾಸಿಮ್ ಅಕ್ರಂ ಅಗ್ರ ಬ್ಯಾಟ್ಸ್‌ಮನ್ ಪಟ್ಟಿ ಬಿಡುಗಡೆ ಮಾಡಿದ್ದಾರೆ. ವೆಸ್ಟ್ ಇಂಡೀಸ್ ಲೆಜೆಂಡ್ ವಿವ್ ರಿಚರ್ಡ್ಸ್‌ಗೆ ಅಗ್ರಸ್ಥಾನ ನೀಡಿದ್ದಾರೆ. ಹಲವು ದಿಗ್ಗಜ ಕ್ರಿಕೆಟಿಗರ ಜೊತೆ ಆಡಿದ್ದೇನೆ. ಇದರಲ್ಲಿ ವಿವ್ ರಿಚರ್ಡ್ಸ್ ಸರ್ವ ಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ಅಕ್ರಂ ಹೇಳಿದ್ದಾರೆ.

ಪುತ್ರನಿಗೆ ಹೇರ್‌ ಕಟ್‌ ಮಾಡಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಜೊತೆ ನಾನು ಹಾಗೂ ವಕಾರ್ ಯೂನಿಸ್ ಹೆಚ್ಚು ಟೆಸ್ಟ್ ಕ್ರಿಕೆಟ್ ಆಡಿಲ್ಲ. 16 ವರ್ಷ ವಯಸ್ಸಿಗೆ ಪಾಕಿಸ್ತಾನಕ್ಕೆ ಆಗಮಿಸಿದ್ದ ಸಚಿನ್ ತೆಂಡುಲ್ಕರ್ ಟೆಸ್ಟ್ ಕ್ರಿಕೆಟ್ ಆಡಿದ್ದರು. ಇದು 1989ರಲ್ಲಿ ಆಡಿದ ಬಳಿಕ ಬರೋಬ್ಬರಿ 10 ವರ್ಷಗಳ ಬಳಿಕ ಅಂದರೆ 1999ರಲ್ಲಿ. ಹೀಗಾಗಿ ಸಚಿನ್ ಜೊತೆ ನಾವು ಹೆಚ್ಚು ಟೆಸ್ಟ್ ಕ್ರಿಕೆಟ್ ಆಡಿಲ್ಲ. ಹೀಗಾಗಿ ಸಚಿನ್ ತೆಂಡುಲ್ಕರನ್ನು ಅಳೆಯಲು ಕಷ್ಟ ಎಂದು ಅಕ್ರಂ ಹೇಳಿದ್ದಾರೆ.

4 ಸಾವಿರ ನಿರ್ಗತಿಕರಿಗೆ ಆರ್ಥಿಕ ನೆರವು ನೀಡಿದ ಸಚಿನ್ ತೆಂಡುಲ್ಕರ್!

ವಿವ್ ರಿಚರ್ಡ್ಸ್ ಬಳಿಕ ನ್ಯೂಜಿಲೆಂಡ್ ಮಾಜಿ ನಾಯಕ ಮಾರ್ಟಿನ್ ಕ್ರೋವ್‌ಗೆ 2ನೇ ಸ್ಥಾನ ನೀಡಿದ್ದಾರೆ. ಮಾರ್ಟಿನ್ ಬ್ಯಾಟಿಂಗ್ ಟೆಕ್ನಿಕ್‌ನಿಂದ 2ನೇ ಸ್ಥಾನ ನೀಡಲಾಗಿದೆ ಎಂದಿದ್ದಾರೆ. ವೆಸ್ಟ್ ಇಂಡೀಸ್ ಮತ್ತೊಬ್ಬ ದಿಗ್ಗಜ ಬ್ರಿಯಾನ್ ಲಾರಾಗೆ 3ನೇ ಸ್ಥಾನ ನೀಡಿದ್ದಾರೆ. ಪಾಕಿಸ್ತಾನ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ 4ನೇ ಸ್ಥಾನ ನೀಡಿದ್ದಾರೆ.