ವಿಜಯ್‌ ಹಜಾರೆ ಟ್ರೋಫಿ: ಮಯಾಂಕ್, ಸಮರ್ಥ್ ಭರ್ಜರಿ ಶತಕ, ರಾಜ್ಯಕ್ಕೆ 222 ರನ್‌ ಬೃಹತ್‌ ಗೆಲುವು

ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ 2 ವಿಕೆಟ್‌ಗೆ 402 ರನ್ ಗಳಿಸಿತು. ನಾಯಕ ಮಯಾಂಕ್‌ (133 ಎಸೆತದಲ್ಲಿ 157 ರನ್‌) ಹಾಗೂ ಆರ್‌.ಸಮರ್ಥ್‌ (120 ಎಸೆತದಲ್ಲಿ 123 ರನ್) ಮೊದಲ ವಿಕೆಟ್‌ಗೆ 38.5 ಓವರಲ್ಲಿ 267 ರನ್‌ ಜೊತೆಯಾಟವಾಡಿದರು.

Vizay Hazare Trophy Mayank Agarwal R Samarth Century powers Karnataka thrash Jammu Kashmir by 222 runs kvn

ಅಹಮದಾಬಾದ್‌(ನ.24): 2019-20ರ ಬಳಿಕ ಚೊಚ್ಚಲ ಬಾರಿ ಚಾಂಪಿಯನ್‌ ಆಗುವ ಕನಸಿನೊಂದಿಗೆ 2023-24ರ ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಕಣಕ್ಕಿಳಿದಿರುವ ಕರ್ನಾಟಕ, ಬೃಹತ್‌ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಗುರುವಾರ ‘ಸಿ’ ಗುಂಪಿನ ಮೊದಲ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ವಿರುದ್ಧ 222 ರನ್‌ ಜಯಗಳಿಸಿತು.

ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ 2 ವಿಕೆಟ್‌ಗೆ 402 ರನ್ ಗಳಿಸಿತು. ನಾಯಕ ಮಯಾಂಕ್‌ (133 ಎಸೆತದಲ್ಲಿ 157 ರನ್‌) ಹಾಗೂ ಆರ್‌.ಸಮರ್ಥ್‌ (120 ಎಸೆತದಲ್ಲಿ 123 ರನ್) ಮೊದಲ ವಿಕೆಟ್‌ಗೆ 38.5 ಓವರಲ್ಲಿ 267 ರನ್‌ ಜೊತೆಯಾಟವಾಡಿದರು. ದೇವದತ್‌ ಪಡಿಕ್ಕಲ್‌ (35 ಎಸೆತದಲ್ಲಿ ಔಟಾಗದೆ 71) ಹಾಗೂ ಮನೀಶ್‌ ಪಾಂಡೆ (ಔಟಾಗದೆ 23) ತಂಡವನ್ನು 400ರ ಗಡಿ ದಾಟಿಸಿದರು. ಬೃಹತ್‌ ಗುರಿ ಬೆನ್ನತ್ತಿದ ಜಮ್ಮು-ಕಾಶ್ಮೀರ 30.4 ಓವರಲ್ಲಿ 180ಕ್ಕೆ ಆಲೌಟಾಯಿತು. 9ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು ಯುಧ್‌ವೀರ್‌ ಸಿಂಗ್‌ ಗಳಿಸಿದ 64 ರನ್‌ ತಂಡದ ಪರ ದಾಖಲಾದ ಗರಿಷ್ಠ ಸ್ಕೋರ್‌. ವೈಶಾಖ್‌ 4 ವಿಕೆಟ್ ಕಿತ್ತರು. ರಾಜ್ಯಕ್ಕೆ ಶನಿವಾರ ಉತ್ತರಾಖಂಡ ಸವಾಲು ಎದುರಾಗಲಿದೆ.

ಇಂದಿನಿಂದ ವಿಜಯ್ ಹಜಾರೆ ಏಕದಿನ ಟೂರ್ನಿ ಆರಂಭ: ಕರ್ನಾಟಕಕ್ಕೆ ಜಮ್ಮು-ಕಾಶ್ಮೀರ ಎದುರಾಳಿ

ಮೊದಲ ಬಾರಿ ರಾಜ್ಯ 400+ ರನ್‌

ಕರ್ನಾಟಕ ಇದೇ ಮೊದಲ ಬಾರಿ ಲಿಸ್ಟ್‌ ‘ಎ’ ಮಾದರಿಯಲಲಿ 400+ ರನ್‌ ಕಲೆಹಾಕಿತು. ಈ ಮೊದಲು 2024-15ರಲ್ಲಿ ಪಂಜಾಬ್‌ ವಿರುದ್ಧ 7 ವಿಕೆಟ್‌ಗೆ 359 ರನ್‌ ಗಳಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು.

ಕಿರಿಯ ಮಹಿಳೆಯರ ಟಿ20: ಕರ್ನಾಟಕ ಚಾಂಪಿಯನ್‌

ಆಮ್ಟರ್‌(ಹಿಮಾಚಲ ಪ್ರದೇಶ): ರಾಷ್ಟ್ರೀಯ ಅಂಡರ್‌-19 ಮಹಿಳೆಯರ ಟಿ20 ಟೂರ್ನಿಯಲ್ಲಿ ಕರ್ನಾಟಕ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಇದರೊಂದಿಗೆ ಮಹಿಳೆಯರ ವಿಭಾಗದಲ್ಲಿ ಕರ್ನಾಟಕ 2019-20ರ ಬಳಿಕ ಎದುರಿಸುತ್ತಿದ್ದ ಪ್ರಶಸ್ತಿ ಬರ ನೀಗಿಸಿತು.

ಫೈನಲ್‌ನಲ್ಲಿ ಆಸೀಸ್‌ನ ರಣತಂತ್ರ ಕೇಳಿ ಶಾಕ್‌ ಆಗಿತ್ತು, ವಿಶ್ವಚಾಂಪಿಯನ್‌ಗೆ ಸೆಲ್ಯುಟ್‌ ಹೊಡೆದ ಆರ್‌ ಅಶ್ವಿನ್‌!

ಗುರುವಾರ ಇಲ್ಲಿ ನಡೆದ ಫೈನಲ್‌ನಲ್ಲಿ ರಾಜ್ಯ ತಂಡಕ್ಕೆ ಆಂಧ್ರ ಪ್ರದೇಶ ವಿರುದ್ಧ 30 ರನ್‌ ಗೆಲುವು ಲಭಿಸಿತು. ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾಗಿ 8 ವಿಕೆಟ್‌ಗೆ ಕೇವಲ 92 ರನ್‌ ಗಳಿಸಿತು. ಮಿಥಿಲಾ ವಿನೋದ್‌ 23, ನಾಯಕಿ ನಿಕಿ ಪ್ರಸಾದ್‌ 19, ತೇಜಶ್ವಿನಿ 19 ರನ್‌ ಸಿಡಿಸಿದರು. ಸುಲಭ ಗುರಿ ನೀಡಿದರೂ ರಾಜ್ಯದ ಬೌಲರ್‌ಗಳು ಮಾರಕ ದಾಳಿ ಸಂಘಟಿಸಿ, ಆಂಧ್ರ ತಂಡವನ್ನು 18 ಓವರಲ್ಲಿ 62 ರನ್‌ಗೆ ನಿಯಂತ್ರಿಸಿದರು. ಬೌಲಿಂಗ್‌ನಲ್ಲೂ ಮಿಂಚಿದ ಮಿಥಿಲಾ 6 ರನ್‌ಗೆ 3 ವಿಕೆಟ್‌ ಕಿತ್ತು ಗೆಲುವಿನ ರೂವಾರಿಯಾದರು.

Latest Videos
Follow Us:
Download App:
  • android
  • ios