ಮೊದಲ ದಿನದಾಟದಂತ್ಯದ ವೇಳೆಗೆ 257 ಎಸೆತಗಳನ್ನು ಎದುರಿಸಿ 179 ರನ್ ಗಳಿಸಿದ್ದ ಜೈಸ್ವಾಲ್, ಎರಡನೇ ದಿನದಾಟದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಮಿಂಚಿದರು. ಕೇವಲ 277 ಎಸೆತಗಳನ್ನು ಎದುರಿಸಿ ದ್ವಿಶತಕ ಪೂರೈಸುವಲ್ಲಿ ಯಶಸ್ವಿ ಜೈಸ್ವಾಲ್ ಯಶಸ್ವಿಯಾದರು. ಅವರು ದ್ವಿಶತಕ ಸಿಡಿಸಲು 18 ಬೌಂಡರಿ ಹಾಗೂ 7 ಮುಗಿಲೆತ್ತರದ ಶತಕ ಸಿಡಿಸಿದರು.
ವಿಶಾಖಪಟ್ಟಣ(ಫೆ.03): ಟೀಂ ಇಂಡಿಯಾ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಚೊಚ್ಚಲ ದ್ವಿಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್‌ನ ಎರಡನೇ ದಿನದಾಟದಲ್ಲಿ ಯಶಸ್ವಿ ಜೈಸ್ವಾಲ್ ಆಕರ್ಷಕ ಬೌಂಡರಿ ಬಾರಿಸುವ ಮೂಲಕ ದ್ವಿಶತಕ ಪೂರೈಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೊದಲ ದಿನದಾಟದಂತ್ಯದ ವೇಳೆಗೆ 257 ಎಸೆತಗಳನ್ನು ಎದುರಿಸಿ 179 ರನ್ ಗಳಿಸಿದ್ದ ಜೈಸ್ವಾಲ್, ಎರಡನೇ ದಿನದಾಟದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಮಿಂಚಿದರು. ಕೇವಲ 277 ಎಸೆತಗಳನ್ನು ಎದುರಿಸಿ ದ್ವಿಶತಕ ಪೂರೈಸುವಲ್ಲಿ ಯಶಸ್ವಿ ಜೈಸ್ವಾಲ್ ಯಶಸ್ವಿಯಾದರು. ಅವರು ದ್ವಿಶತಕ ಸಿಡಿಸಲು 18 ಬೌಂಡರಿ ಹಾಗೂ 7 ಮುಗಿಲೆತ್ತರದ ಶತಕ ಸಿಡಿಸಿದರು.
ಅಂ-19 ವಿಶ್ವಕಪ್ : ನೇಪಾಳ ಮಣಿಸಿ ಸೆಮೀಸ್‌ಗೆ ಭಾರತ ಲಗ್ಗೆ
ಮೊದಲ ದಿನ ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಇಂಗ್ಲೆಂಡ್ ಸ್ಪಿನ್ನರ್‌ಗಳ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿ ಕ್ರೀಸ್‌ನಲ್ಲಿ ನೆಲೆಯೂರಿದ್ದ ಯಶಸ್ವಿ ಜೈಸ್ವಾಲ್ ಮಾತ್ರ. ರಕ್ಷಣಾತ್ಮಕ ಆಟದ ಜೊತೆಗೆ ನಡುನಡುವೆ ಚೆಂಡನ್ನು ಬೌಂಡರಿಗಟ್ಟಿ ಪ್ರೇಕ್ಷಕರ ಮನರಂಜಿಸಿದ ಜೈಸ್ವಾಲ್ 257 ಎಸೆತಗಳಲ್ಲಿ ಔಟಾಗದೆ 179 ರನ್ ಸಿಡಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 17 ಬೌಂಡರಿ, 5 ಸಿಕ್ಸರ್ ಒಳಗೊಂಡಿವೆ. 70ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸುವಲ್ಲಿ ಯಶಸ್ವಿಯಾದರು. ಮೊದಲ ದಿನದಾಟದಂತೆ ಎರಡನೇ ದಿನದಾಟದಲ್ಲೂ ಜೈಸ್ವಾಲ್, ಪ್ರೇಕ್ಷಕರ ನಿರೀಕ್ಷೆ ಹುಸಿ ಮಾಡಲಿಲ್ಲ.