ಸಚಿನ್‌ರನ್ನ ಹೆಗಲ ಮೇಲೆ ಕೊಹ್ಲಿ ಹೊತ್ತು ತಿರುಗಿದ್ದೇಕೆ..? ರಹಸ್ಯ ಬಿಚ್ಚಿಟ್ಟ ಸೆಹ್ವಾಗ್
2011ರ ಏಕದಿನ ವಿಶ್ವಕಪ್ ಗೆದ್ದು ಬೀಗಿದ್ದ ಟೀಂ ಇಂಡಿಯಾ
ಸಚಿನ್ ತೆಂಡುಲ್ಕರ್‌ಗಾಗಿ ವಿಶ್ವಕಪ್ ಜಯಿಸಿದ್ದ ಧೋನಿ ಪಡೆ
ಸಚಿನ್‌ರನ್ನ ವಿರಾಟ್ ಕೊಹ್ಲಿ ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ಇಡೀ ಸ್ಟೇಡಿಯಂ ಸುತ್ತಿದ್ದರು
ಬೆಂಗಳೂರು(ಜೂ.30): ಸಚಿನ್ ತೆಂಡೂಲ್ಕರ್, ಭಾರತದ ಕ್ರಿಕೆಟ್ ದೇವರು. ಮಾಸ್ಟರ್ ಬ್ಲಾಸ್ಟರ್, ಲಿಟ್ಲ್ ಮಾಸ್ಟರ್, ರನ್ ಮಿಷನ್. ಸೆಂಚುರಿ ಸ್ಟಾರ್. ವಿಶ್ವ ದಾಖಲೆಗಳ ವೀರ. ಹೀಗೆ ಅನೇಕ ಬಿರುದುಗಳು ಇರುವುದು ಸಚಿನ್ಗೆ ಮಾತ್ರ. ಆಡು ಮುಟ್ಟದ ಸೊಪ್ಪಿಲ್ಲ. ಸಚಿನ್ ಮಾಡದಿರುವ ದಾಖಲೆಗಳಿಲ್ಲ ಅನ್ನೋ ಮಾತೂ ಇದೆ. ಟೆಸ್ಟ್ ಮತ್ತು ಒನ್ಡೇ ಕ್ರಿಕೆಟ್ನಲ್ಲಿ ವಿಶ್ವ ದಾಖಲೆಗಳ ವೀರ ಸಚಿನ್ ತೆಂಡುಲ್ಕರ್.
2011ರ ಏಕದಿನ ವಿಶ್ವಕಪ್ ಸಚಿನ್ ತೆಂಡೂಲ್ಕರ್ ಪಾಲಿಗೆ 6ನೇ ಮತ್ತು ಕೊನೆ ವಿಶ್ವಕಪ್ ಆಗಿತ್ತು. ಸಚಿನ್ಗಾಗಿ ವಿಶ್ವಕಪ್ ಗೆಲ್ಲಬೇಕು ಅನ್ನೋ ಶ್ಲೋಕದೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿದಿತ್ತು. ಅದರಂತೆ ಫೈನಲ್ನಲ್ಲಿ ಶ್ರೀಲಂಕಾವನ್ನ ಸೋಲಿಸಿ, 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಗೆದ್ದ ಸಾಧನೆ ಮಾಡಿತ್ತು.
ಪತ್ನಿಗೆ ಬಿಗಿದಪ್ಪಿ ಚುಂಬಿಸಿದ ಹಾರ್ದಿಕ್ ಪಾಂಡ್ಯ; ವಿಶ್ವಕಪ್ ಕಡೆ ಗಮನ ಕೊಡಿ ಎಂದು ಟ್ರೋಲ್ ಮಾಡಿದ ನೆಟ್ಟಿಗರು..!
ಭಾರತ ತಂಡ ವಿಶ್ವಕಪ್ ಗೆದ್ದ ಬಳಿಕ ಸಚಿನ್ ಅವರನ್ನ ವಿರಾಟ್ ಕೊಹ್ಲಿ ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ಇಡೀ ಸ್ಟೇಡಿಯಂ ಸುತ್ತಿದ್ದರು. ಕೊಹ್ಲಿಗೆ ಸಹ ಆಟಗಾರರು ಸಾಥ್ ನೀಡಿದ್ರು. ಆದ್ರೆ ಸಚಿನ್ ಪೂರ್ತಿ ಕೂತಿದ್ದು ಕೊಹ್ಲಿ ಮೇಲೆಯೇ. ಎರಡು ದಶಕಗಳ ಕಾಲ ಭಾರತೀಯ ಕ್ರಿಕೆಟ್ ಅನ್ನ ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದ ಸಚಿನ್, ಮೊದಲ ಸಲ ವಿಶ್ವಕಪ್ ಗೆದ್ದಿದ್ದರು. 20 ವರ್ಷಗಳಿಂದ ಭಾರತೀಯ ಕ್ರಿಕೆಟ್ ಅನ್ನ ಉತ್ತುಂಗಕ್ಕೇರಿಸಿದ ತೆಂಡುಲ್ಕರ್ಗೆ ಇಡೀ ತಂಡ ಗೌರವ ಸೂಚಿಸಿತ್ತು. ಹೀಗಾಗಿ ವಿಶ್ವಕಪ್ ಗೆದ್ದ ಬಳಿಕ ಸಚಿನ್‌ರನ್ನ ಹೆಗಲ ಮೇಲೆ ಹೊತ್ತುಕೊಂಡು ಸ್ಟೇಡಿಯಂ ಸುತ್ತಲೂ ಪ್ಲಾನ್ ಮಾಡಲಾಗಿತ್ತು. ಅದರಂತೆ ಟೀಂ ಇಂಡಿಯಾ ಮಾಡಿತ್ತು ಕೂಡ.
ವಾಂಖೆಡೆ ಸ್ಟೇಡಿಯಂನ ಗುಟ್ಟು ರಟ್ಟು ಮಾಡಿದ ಸೆಹ್ವಾಗ್..!
ಅಂದು ವಿಶ್ವಕಪ್ ಫೈನಲ್ನಲ್ಲಿ ಆಡಿದ್ದ ಟೀಂ ಇಂಡಿಯಾದಲ್ಲಿ ಯುವರಾಜ್, ಶ್ರೀಶಾಂತ್ರಂಥ ಅನೇಕ ಸ್ಟಾರ್ ಆಟಗಾರರಿದ್ರು. ಆದ್ರೆ, ಆವತ್ತು ಭಾರತ ತಂಡ ಫೈನಲ್ನಲ್ಲಿ ಗೆದ್ದಾಗ, ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಅವರನ್ನು ಕಿಂಗ್ ಕೊಹ್ಲಿ, ತನ್ನ ಹೆಗಲ ಮೇಲೇರಿಸಿಕೊಂಡು ಮೈದಾನದಲ್ಲಿ ರೌಂಡ್ ಹೊಡೆದು ಸೆಲೆಬ್ರೇಟ್ ಮಾಡಿದ್ರು. ಅವತ್ತು, ಅದ್ಯಾಕೆ ಸಚಿನ್ನನ್ನು ಕೊಹ್ಲಿಯೇ ಹೆಗಲಿಗೇರಿಸಿಕೊಂಡ್ರು ಅನ್ನೋದರ ಹಿಂದಿನ ಸ್ವಾರಸ್ಯವನ್ನು ಆ ವಿಶ್ವಕಪ್ ಆಡಿದ್ದ ವಿರೇಂದ್ರ ಸೆಹ್ವಾಗ್ ಬಿಚ್ಚಿಟ್ಟಿದ್ದಾರೆ ನೋಡಿ.
ನೀವೆಂದು ಕೇಳಿರದ ಧೋನಿಯ ಮೂಢನಂಬಿಕೆ ಬಗ್ಗೆ ತುಟಿಬಿಚ್ಚಿದ ಸೆಹ್ವಾಗ್..!
ಬಹಳ ತೂಕವಿದ್ದ ಸಚಿನ್ ತೆಂಡುಲ್ಕರ್ ಅವರನ್ನು ಹೊತ್ತುಕೊಳ್ಳುವ ವಿಚಾರದಲ್ಲಿ ನಾವೆಲ್ರೂ ರಿಜೆಕ್ಟ್ ಆಗಿದ್ವಿ. ನಮ್ಮಿಂದ ಅವರನ್ನ ಎತ್ತಿಕೊಳ್ಳಲು ಆಗುತ್ತಿರಲಿಲ್ಲ. ನಮಗೆಲ್ಲ ವಯಸ್ಸಾಗಿತ್ತು. ಕೆಲವರಿಗೆ ಭುಜನೋವು ಇತ್ತು. ಧೋನಿಗೆ ಮೊಣಕಾಲು ಗಾಯವಿದ್ರೆ, ಕೆಲವರಿಗೆ ಗಾಯದ ಸಮಸ್ಯೆ ಇತ್ತು. ಅದಕ್ಕೆ ನಾವು ಸಚಿನ್ ತೆಂಡುಲ್ಕರ್ ಅವರನ್ನು ಹೊತ್ತು ಮೈದಾನದಲ್ಲಿ ತಿರುಗುವ ಕೆಲಸವನ್ನು ಯುವಕರಿಗೆ, ಅದರಲ್ಲೂ ವಿರಾಟ್ ಕೊಹ್ಲಿಗೆ ನೀಡಿದ್ವಿ ಅಂತ ವಿರೇಂದ್ರ ಸೆಹ್ವಾಗ್ ಅಂದಿನ ಕ್ಷಣವನ್ನು ಸ್ಮರಿಸಿಕೊಂಡಿದ್ದಾರೆ.
ಅಂದು ಕ್ರಿಕೆಟ್ ದೇವರನ್ನ ಹೆಗಲ ಮೇಲೆ ಹೊತ್ತುಕೊಂಡು ತಿರುಗಿದ್ದ ವಿರಾಟ್ ಕೊಹ್ಲಿ, ಇಂದು ವಿಶ್ವ ಕ್ರಿಕೆಟ್ ಕಿಂಗ್ ಆಗಿದ್ದಾರೆ. ಕೊಹ್ಲಿಯನ್ನ 2ನೇ ದೇವರು ಅಂತ ಕರೆಯೋರು ಇದ್ದಾರೆ. ಸಚಿನ್ ರೆಕಾರ್ಡ್ಗಳನ್ನ ಒಂದೊಂದಾಗಿ ಬ್ರೇಕ್ ಮಾಡ್ತಿರೋದು ಇದೇ ಕೊಹ್ಲಿನೇ.