Asianet Suvarna News Asianet Suvarna News

Asia Cup 2022: ಪಾಕ್ ಎದುರಿನ ಪಂದ್ಯಕ್ಕೂ ಮುನ್ನ ವಿಶೇಷ ಮಾಸ್ಕ್ ಧರಿಸಿ ಪ್ರಾಕ್ಟೀಸ್ ಮಾಡಿದ ಕೊಹ್ಲಿ..!

* ಮತ್ತೊಮ್ಮೆ ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಕ್ಷಣಗಣನೆ
* ಪಾಕಿಸ್ತಾನ ಎದುರಿನ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿಯಿಂದ ಕಠಿಣ ಅಭ್ಯಾಸ
* ವಿಶೇಷ ಮಾಸ್ಕ್ ಧರಿಸಿ ಗಮನ ಸೆಳೆದ ಟೀಂ ಇಂಡಿಯಾ ಮಾಜಿ ನಾಯಕ ಕೊಹ್ಲಿ

Virat Kohli training wearing special mask ahead of India vs Pakistan Asia Cup 2022 match kvn
Author
First Published Sep 3, 2022, 6:15 PM IST

ದುಬೈ(ಸೆ.03): ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಇದೀಗ ಮತ್ತೊಮ್ಮೆ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ. ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಬಾಬರ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು ಹಾಂಕಾಂಗ್ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಸೂಪರ್ 4 ಹಂತಕ್ಕೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ.

ಇದೀಗ ಕೇವಲ ಎರಡು ವಾರಗಳ ಅಂತರದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗಲು ಸಜ್ಜಾಗಿವೆ. ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೆಪ್ಟೆಂಬರ್ 04ರಂದು ಮತ್ತೊಮ್ಮೆ ಸೆಣಸಾಡಲಿವೆ. ಗ್ರೂಪ್ ಹಂತದ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ರೋಚಕ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. 

ಇನ್ನು ಆರು ವಾರಗಳ ಬಿಡುವಿನ ಬಳಿಕ ತಂಡ ಕೂಡಿಕೊಂಡಿದ್ದ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಪಾಕಿಸ್ತಾನ ಎದುರಿನ ಪಂದ್ಯದಲ್ಲಿ 35 ರನ್ ಸಿಡಿಸಿದ್ದರು. ಇದಾದ ಬಳಿಕ ಹಾಂಕಾಂಗ್ ವಿರುದ್ದದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಜೇಯ 59 ರನ್ ಸಿಡಿಸುವ ಮೂಲಕ ರನ್ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಪಾಕಿಸ್ತಾನ ಎದುರಿನ ಹೈವೋಲ್ಟೇಜ್‌ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರು ಭರ್ಜರಿ ಅಭ್ಯಾಸ ಆರಂಭಿಸಿದ್ದಾರೆ. ಇದೇ ವೇಳೆ ಮಾಜಿ ನಾಯಕ ವಿರಾಟ್ ಕೊಹ್ಲಿ ಹೈ ಆಲ್ಟಿಟ್ಯೂಡ್‌ ಮಾಸ್ಕ್ ಧರಿಸಿ ಮೈದಾನದಲ್ಲಿ ಅಭ್ಯಾಸ ನಡೆಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ. 

ಸಾಮಾನ್ಯವಾಗಿ ಪರ್ವತಾರೋಹಿಗಳು, ಗಾಳಿಯ ಒತ್ತಡ ಕಡಿಮೆಯಿರುವ ಪ್ರದೇಶಗಳಲ್ಲಿ ಈ ಹೈ ಆಲ್ಟಿಟ್ಯೂಡ್ ಮಾಸ್ಕ್‌ಗಳನ್ನು ಬಳಸುತ್ತಾರೆ. ಇದೀಗ ವಿರಾಟ್ ಕೊಹ್ಲಿ ಅಂತಹದ್ದೇ ಮಾಸ್ಕ್ ಧರಿಸಿರುವ ಫೋಟೋಗಳು ಇದೀಗ ಸಾಕಷ್ಟು ವೈರಲ್ ಆಗಿವೆ. ವಿರಾಟ್ ಕೊಹ್ಲಿ ತೀರಾ  ಅಪರೂಪ ಎನ್ನುವಂತೆ ಮಾಸ್ಕ್ ಧರಿಸಿ ಅಭ್ಯಾಸ ನಡೆಸಿರುವುದು ಸಾಕಷ್ಟು ಗಮನ ಸೆಳೆದಿದೆ.

Asia Cup 2022 ಹಾಂಕಾಂಗ್‌ನ್ನು 38 ರನ್‌ಗೆ ಆಲೌಟ್ ಮಾಡಿದ ಪಾಕ್, ಸೆ.04ಕ್ಕೆ ಮತ್ತೆ ಭಾರತ ಪಾಕಿಸ್ತಾನ ಪಂದ್ಯ!

ಏಷ್ಯಾಕಪ್ ಟೂರ್ನಿಯಲ್ಲಿ ಈಗಾಗಲೇ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನ ತಂಡಗಳು ಸೂಪರ್ 4 ಹಂತಕ್ಕೆ ಲಗ್ಗೆಯಿಟ್ಟಿವೆ. ಭಾರತ ತಂಡವು ಗ್ರೂಪ್ ಹಂತದಲ್ಲಿ ತಾನಾಡಿದ ಎರಡೂ ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೂಪರ್ 4 ಹಂತಕ್ಕೆ ಲಗ್ಗೆಯಿಟ್ಟಿದೆ. 

ಸೂಪರ್‌-4 ವೇಳಾಪಟ್ಟಿ

ದಿನಾಂಕ ಪಂದ್ಯ ಸ್ಥಳ

ಸೆಪ್ಟೆಂಬರ್ 3 ಆಫ್ಘನ್‌-ಲಂಕಾ ಶಾರ್ಜಾ

ಸೆಪ್ಟೆಂಬರ್ 4 ಭಾರತ-ಪಾಕಿಸ್ತಾನ ದುಬೈ

ಸೆಪ್ಟೆಂಬರ್ 6 ಭಾರತ-ಲಂಕಾ ದುಬೈ

ಸೆಪ್ಟೆಂಬರ್ 7 ಆಫ್ಘನ್‌-ಪಾಕಿಸ್ತಾನ ಶಾರ್ಜಾ

ಸೆಪ್ಟೆಂಬರ್ 8 ಭಾರತ-ಆಫ್ಘನ್‌ ದುಬೈ

ಸೆಪ್ಟೆಂಬರ್ 9 ಲಂಕಾ-ಪಾಕಿಸ್ತಾನ ದುಬೈ

Follow Us:
Download App:
  • android
  • ios