Asianet Suvarna News Asianet Suvarna News

Asia Cup 2022 ಹಾಂಕಾಂಗ್‌ನ್ನು 38 ರನ್‌ಗೆ ಆಲೌಟ್ ಮಾಡಿದ ಪಾಕ್, ಸೆ.04ಕ್ಕೆ ಮತ್ತೆ ಭಾರತ ಪಾಕಿಸ್ತಾನ ಪಂದ್ಯ!

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನ ದಾಖಲೆ ಬರೆದಿದೆ. ಏಷ್ಯಾಕಪ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಹಾಂಕಾಂಗ್ ತಂಡವನ್ನು ಪಾಕಿಸ್ತಾನ ಕೇವಲ 38 ರನ್‌ಗೆ ಆಲೌಟ್ ಮಾಡಿದೆ. ಈ ಮೂಲಕ ಟಿ20 ಇತಿಹಾಸದಲ್ಲಿ ಎರಡನೇ ಅತೀ ದೊಡ್ಡ ಅಂತರದ ಗೆಲುವು ದಾಖಲಿಸಿದೆ. ಇದೀಗ ಸೂಪರ್ 4 ಹಂತಕ್ಕೆ ಲಗ್ಗೆ ಇಟ್ಟ ಪಾಕಿಸ್ತಾನ ಮತ್ತೆ ಭಾರತ ವಿರುದ್ಧ ಹೋರಾಟ ನಡೆಸಲಿದೆ. 

Asia Cup 2022 Hong Kong all out for just 38 Pakistan win by 155 runs biggest t20 victory ckm
Author
First Published Sep 2, 2022, 10:52 PM IST

ಶಾರ್ಜಾ(ಸೆ.02): ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಹೊಸ ದಾಖಲೆ ಬರೆದಿದೆ. ಹಾಂಕಾಂಗ್ ವಿರುದ್ಧ ಪಂದ್ಯದಲ್ಲಿ ಪಾಕಿಸ್ತಾನ 155 ರನ್ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತೀ ದೊಡ್ಡ ಅಂತರದ ಗೆಲುವು ದಾಖಲಿಸಿದೆ. ಪಾಕಿಸ್ತಾನದ ಬೌಲಿಂಗ್ ದಾಳಿಗೆ ತತ್ತರಿಸಿದ ಹಾಂಕಾಂಗ್ ಕೇವಲ 10.4 ಓವರ್‌ಗಳಲ್ಲಿ ಕೇವಲ 38 ರನ್‌ಗಳಿಗೆ ಆಲೌಟ್ ಆಗಿದೆ. ಹಾಂಕಾಂಗ್ ತಂಡದ ಯಾವುದೇ ಬ್ಯಾಟ್ಸ್‌ಮನ್ ಒಂದಂಕಿ ದಾಟಿಲ್ಲ. ನಾಯಕ ನಿಝಾಕತ್ ಖಾನ್ ಸಿಡಿಸಿದ 8 ರನ್ ಗರಿಷ್ಠ ಮೊತ್ತ. ಇನ್ನುಳಿದ ಆಟಗಾರರು 6, 3,1 ರನ್‌ಗೆ ಸುಸ್ತಾಗಿದ್ದಾರೆ. ಶದಬ್ ಖಾನ್ 4, ಮೊಹಮ್ಮದ್ ನವಾಜ್ 3, ನಶೀಮ್ ಶಾ 2 ಹಾಗೂ ಶಹನ್ವಾಜ್ ಧಹನಿ 1 ವಿಕೆಟ್ ಕಬಳಿಸಿದ್ದಾರೆ. ಪಾಕಿಸ್ತಾನ ಮಾರಕ ದಾಳಿಗೆ ಹಾಂಕಾಂಗ್ ಹೇಳ ಹೆಸರಿಲ್ಲದಂತಾಗಿದೆ. ಈ ಮೂಲಕ ಪಾಕಿಸ್ತಾನ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದೆ.  ಈ ಭರ್ಜರಿ ಗೆಲುವಿನ ಮೂಲಕ ಪಾಕಿಸ್ತಾನ ಸೂಪರ್ 4 ಹಂತಕ್ಕೆ ಲಗ್ಗೆ ಇಟ್ಟಿದೆ. ಭಾನುವಾರ(ಸೆ.04 ರಂದು ನಡೆಯಲಿರುವ ಸೂಪರ್ 4 ಹಂತದ ಪಂದ್ಯದಲ್ಲಿ ಮತ್ತೆ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿದೆ.

ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ಅಂತರದ ಗೆಲುವು
172 ರನ್,  ಶ್ರೀಲಂಕಾ vs ಕೀನ್ಯಾ, 2007
155 ರನ್, ಪಾಕಿಸ್ತಾನ vs ಹಾಂಕಾಂಗ್, 2022 *
143 ರನ್ ಭಾರತ vs ಐರ್ಲೆಂಡ್, 2018
143 ರನ್, ಪಾಕಿಸ್ತಾನ vs ವೆಸ್ಟ್ ಇಂಡೀಸ್, 2018
137 ರನ್, ಇಂಗ್ಲೆಂಡ್  vs ವೆಸ್ಟ್ ಇಂಡೀಸ್, 2019

ಪಾಕಿಸ್ತಾನ ವಿರುದ್ಧ ಟಿ20 ಪಂದ್ಯದಲ್ಲಿ ಕಡಿಮೆ ಮೊತ್ತ ದಾಖಲಿಸಿದ ತಂಡ
38 ರನ್, ಹಾಂಕಾಂಗ್, 2022 *
60 ರನ್, ವೆಸ್ಟ್ ಇಂಡೀಸ್, 2018 
80 ರನ್,ನ್ಯೂಜಿಲೆಂಡ್, 2010
82 ರನ್ ಸ್ಕಾಟ್ಲೆಂಡ್,  2018

ಹಾಂಕಾಂಗ್ ತಂಡದ ಅತೀ ಕಡಿಮೆ ಮೊತ್ತ(ಟಿ20)
38 ರನ್ vs ಪಾಕಿಸ್ತಾನ, 2022 *
69 ರನ್ vs ನೇಪಾಳ, 2014
87/9 ರನ್  vs ಉಗಾಂಡ, 2022
87 ರನ್ vs ಓಮನ್, 2017

Follow Us:
Download App:
  • android
  • ios