Asianet Suvarna News Asianet Suvarna News

ವಿಶ್ವಕಪ್ ಬಳಿಕ ನಾಯಕತ್ವಕ್ಕೆ ಗುಡ್ ಬೈ.. ವಿಚಾರ ತಿಳಿಸಿದ ವಿರಾಟ್ ಕೊಹ್ಲಿ!

* ಟೀಂ ಇಂಡಿಯಾ ನಾಯಕತ್ವಕ್ಕೆ ಗುಡ್ ಬೈ
*ಟಿ-20 ವಿಶ್ವಕಪ್ ನಂತರ ನಾಯಕತ್ವ ತ್ಯಜಿಸಲಿದ್ದಾರೆ
* ಟ್ವಿಟರ್ ಮೂಲಕ ತಿಳಿಸಿದ ವಿರಾಟ್ ಕೊಹ್ಲಿ
* ಎಲ್ಲರೊಂದಿಗೂ ಮಾತನಾಡಿದ್ದೇನೆ

Virat Kohli To Step Down As India s T20I Captain After ICC T20 World Cup mah
Author
Bengaluru, First Published Sep 16, 2021, 6:40 PM IST
  • Facebook
  • Twitter
  • Whatsapp

ನವದೆಹಲಿ(ಸೆ. 16) ಟೀಂ  ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಿಟ್ಟ ನಿರ್ಧಾರವೊಂದನ್ನು ಪ್ರಕಟ ಮಾಡಿ ಅಭಿಮಾನಿಗಳಿಗೆ ಒಂದು ಅರ್ಥದಲ್ಲಿ ಶಾಕ್ ನೀಡಿದ್ದಾರೆ. ಟಿ20  ವಿಶ್ವಕಪ್ ನಂತರ ಟಿ20 ನಾಯಕತ್ವದಿಂದ ಕೆಳಕ್ಕೆ ಇಳಿಯಲಿದ್ದೇನೆ ಎಂದು ತಿಳಿಸಿದ್ದಾರೆ.

ಗುರುವಾರ ಮಧ್ಯಾಹ್ನ ಟ್ವೀಟ್ ಮಾಡಿರುವ ಕೊಹ್ಲಿ ಅನೇಕ ವಿಚಾರಗಳನ್ನು ಬರೆದುಕೊಂಡಿದ್ದಾರೆ. ಈ ಪಯಣದಲ್ಲಿ ಜತೆಯಾದ ಹಲವಾರು ಜನರಿಗೆ ಧನ್ಯವಾದ ತಿಳಿಸಿದ್ದಾರೆ. 

ನಾಯಕತ್ವ ಬದಲಾವಣೆ ಬಗ್ಗೆ ಜೈ ಶಾ ಹೇಳಿದ್ದಿಷ್ಟು

ನನಗೆ ಭಾರತವನ್ನು ಪ್ರತಿನಿಧಿಸುವ ಅವಕಾಶ ಅಲ್ಲದೇ ತಂಡ ಮುನ್ನಡೆಸುವ ಭಾಗ್ಯವೂ ಸಿಕ್ಕಿತ್ತು.  ನಾನು ಎಲ್ಲರಿಗೂ ಧನ್ಯವಾದ ಹೇಳುತ್ತಿದ್ದೇನೆ.. ಉಳಿದ ಆಟಗಾರರ ನೆರವು ಇಲ್ಲದಿದ್ದರೆ ಏನು ಮಾಡಲಾಗುತ್ತಿರಲಿಲ್ಲ.  ಸಹ ಆಟಗಾರರು, ಸಪೋರ್ಟ್ ಸ್ಟಾಫ್, ಆಯ್ಕೆ ಮಂಡಳಿ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದ ಅರ್ಪಿಸುತ್ತಿದ್ದೇನೆ.

ಕಳದೆ 5-6  ವರ್ಷದಿಂದ ಎಲ್ಲ ಮೂರು ಮಾದರಿಯಲ್ಲಿ ಟೀಂ ಇಂಡಿಯಾ ಮುನ್ನಡೆಸಿಕೊಂಡುಬಂದಿದ್ದೇನೆ.  ನಾನು ಏಕದಿನ ಮತ್ತು ಟೆಸ್ಟ್ ತಂಡ ಮುನ್ನಡೆಸಲು ಸದಾ ಸಿದ್ಧನಾಗಿಯೇ ಇದ್ದೇನೆ.  ಇನ್ನು ಮುಂದೆ ಟಿ20 ಯಲ್ಲಿ ಒಬ್ಬ ಬ್ಯಾಟ್ಸ್ ಮನ್ ಆಗಿ ಇರಲು ಬಯಸಿದ್ದೇನೆ.

ಈ ನಿರ್ಧಾರಕ್ಕೆ ಬರಲು ಸಾಕಷ್ಟು ಸಮಯ ತೆಗೆದುಕೊಂಡಿದ್ದೇನೆ. ನನ್ನ ಹತ್ತಿರದ ಜನರ ಜತೆ ಚರ್ಚೆ ಮಾಡಿದ್ದೇನೆ.  ರವಿ ಶಾಸ್ತ್ರಿ ಮತ್ತು ರೋಹಿತ್ ಶರ್ಮಾ ಬಳಿಯೂ ಮಾತನಾಡಿದ್ದೇನೆ.  ದುಬೈನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ನಂತರ ಟಿ 20 ನಾಯಕತ್ವದಿಂದ ನಿರ್ಗಮಿಸಲಿದ್ದೇನೆ.  ಕಾರ್ಯದರ್ಶಿ ಜೈಶಾ ಜತೆಗೂ ಮಾತನಾಡಿದ್ದೇನೆ.  ಬಿಸಿಸಿಐ ಅಧ್ಯಕ್ಷ ದೌರವ್ ಗಂಗೂಲಿ ಜತೆಗೂ ಮಾತನಾಡಿದ್ದೇನೆ.  ಇನ್ನು ಮುಂದೆಯೂ ನಾನು ಭಾರತದ ಪರವಾಗಿ ಆಡಲಿದ್ದೇನೆ ಎಂದು ಅಭಿಮಾನಿಗಳಿಗೆ ಪತ್ರದ ಮುಖೇನ ತಿಳಿಸಿದ್ದಾರೆ.

 

Follow Us:
Download App:
  • android
  • ios