ಸಿಡ್ನಿ(ಮಾ.05): ಐಸಿಸಿ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ಅಖಾಡಕ್ಕಿಳಿದಿದದ ಭಾರತಕ್ಕೆ ಮಳೆರಾಯ ಮತ್ತಷ್ಟು ಅದೃಷ್ಟ ನೀಡಿದ್ದ. ಸತತ ಗೆಲುವಿನೊಂದಿಗೆ ಸೆಮೀಸ್ ಪ್ರವೇಶಿಸಿದ್ದ ಭಾರತ, ಇಂಗ್ಲೆಂಡ್ ಮಣಿಸಲು ಸಜ್ಜಾಗಿತ್ತು. ಆದರೆ ಮಳೆಯಿಂದಾಗಿ ಪಂದ್ಯ ರದ್ದುಗೊಂಡಿತ್ತು. ಹೀಗಾಗಿ ಭಾರತ ನೇರವಾಗಿ ಫೈನಲ್ ಪ್ರವೇಶಿಸಿದೆ.

ಇದನ್ನೂ ಓದಿ: ಮಹಿಳಾ ಟಿ–20 ವಿಶ್ವಕಪ್‌ ಕ್ರಿಕೆಟ್‌: ಸೆಮೀಸ್ ಆಡದೇ ಭಾರತ ವನಿತೆಯರು ಫೈನಲ್‌ಗೆ ಲಗ್ಗೆ

ಗರಿಷ್ಠ ಅಂಕ ಪಡೆದಿರುವ ಭಾರತ ಫೈನಲ್ ಪ್ರವೇಶಿಸಿತು. ಇದೀಗ ಚೊಚ್ಚಲ ಟಿ20 ಟ್ರೋಫಿ ಕೈವಶ ಮಾಡುವ ತವಕದಲ್ಲಿದೆ. ಭಾರತ ವನಿತೆಯರ ಸಾಧನೆಗೆ  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸೇರಿದಂತೆ ಹಲವು ದಿಗ್ಗಜ ಕ್ರಿಕೆಟಿಗರು ಅಭಿನಂದನೆ ಸಲ್ಲಿಸಿದ್ದಾರೆ.