ಐಸಿಸಿ ಏಕದಿನ ರ‍್ಯಾಂಕಿಂಗ್‌ನಿಂದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರನ್ನು ತೆಗೆದುಹಾಕಲಾಗಿದೆ. ಟಾಪ್ 5ನಲ್ಲಿದ್ದ ಇಬ್ಬರೂ ಇದೀಗ 100ರಲ್ಲೂ ಇಲ್ಲ. ಸದ್ದಿಲ್ಲದೆ ಈ ದಿಗ್ಗಜರು ವಿದಾಯ ಹೇಳಿದ್ರಾ?

ಮುಂಬೈ (ಆ.20) ಟೀಂ ಇಂಡಿಯಾ ಕ್ರಿಕೆಟಿಗರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅನುಪಸ್ಥಿತಿ ಅಭಿಮಾನಿಗಳನ್ನು ಕಾಡುತ್ತಿದೆ. ಟಿ20 ಹಾಗೂ ಟೆಸ್ಟ್ ಮಾದರಿಯಿಂದ ಈಗಾಗಲೇ ವಿದಾಯ ಹೇಳಿರುವ ಈ ಕ್ರಿಕೆಟಿಗರು, ಏಕದಿನ ಮಾದರಿಯಲ್ಲಿ ಮಾತ್ರ ಉಳಿದುಕೊಂಡಿದ್ದಾರೆ. ಇದು ಅಭಿಮಾನಿಗಳ ಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಇತೀಗ ಐಸಿಸಿ ಬಿಡುಗಡೆ ಮಾಡಿದ ರ‍್ಯಾಂಕಿಂಗ್ ಪಟ್ಟಿ ನೋಡಿ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅಭಿಮಾನಿಗಳಿಗೆ ಆಘಾತವಾಗಿದೆ. 2 ಮತ್ತು 4ನೇ ಸ್ಥಾನದಲ್ಲಿದ್ದ ರೋಹಿತ್ ಹಾಗೂ ಕೊಹ್ಲಿ ಇದೀಗ ಪಟ್ಟಿಯಿಂದಲೇ ಹೊರಬಿದ್ದಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸದ್ದಿಲ್ಲದೆ ವಿದಾಯ ಹೇಳಿದ್ದಾರೆ, ಘೋಷಣೆ ಮಾತ್ರ ಬಾಕಿ ಇದೆ ಅನ್ನೋ ಮಾತುಗಳು ಕೇಳಿಬಂದಿದೆ.

ನಂ.2 ಹಾಗೂ ನಂ.4 ಸ್ಥಾನದಲ್ಲಿದ್ದ ಇಬ್ಬರೂ ಔಟ್

ಐಸಿಸಿ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಹಾಲಿ ಆಟಗಾರರನ್ನುಪರಿಗಣಿಸಲಾಗುತ್ತದೆ. ಹಾಲಿ ಆಟಗಾರರ ಪ್ರದರ್ಶನದ ಆಧಾರದಲ್ಲಿ ಸರಣಿಗೆ ಅನುಸಾರ ರ‍್ಯಾಂಕಿಂಗ್‌ ಬದಲಾಗಲಿದೆ. ಏಕದಿನ ಬ್ಯಾಟಿಂಗ್‌ನಲ್ಲಿ ರೋಹಿತ್ ಶರ್ಮಾ 2 ಮತ್ತು ವಿರಾಟ್ ಕೊಹ್ಲಿ 4ನೇ ಸ್ಥಾನದಲ್ಲಿದ್ದರು. ಇದೀಗ ಐಸಿಸಿ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 100ರಲ್ಲೂ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಹೆಸರಿಲ್ಲ. ಇದೇ ಕಾರಣದಿಂದ ಈ ಇಬ್ಬರು ದಿಗ್ಗಜರು ಸದ್ದಿಲ್ಲದೆ ವಿದಾಯ ಹೇಳಿದ್ದಾರೆ ಅನ್ನೋ ಮಾತುಗಳ ಕೇಳಿಬಂದಿದೆ.

ಕಳೆದ ವಾರ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಏಕದಿನ ರ‍್ಯಾಂಕಿಂಗ್‌ ಪಟ್ಟಿಯ ಟಾಪ್ 10 ಲಿಸ್ಟ್‌ನಲ್ಲಿದ್ದರು. ಬಾಬರ್ ಅಜಮ್ ಕಳಪೆ ಪ್ರದರ್ಶನದಿಂದ ಇಬ್ಬರು ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದಿದ್ದರು. ಆದರೆ ಇದೀಗ ಹೊಸದಾಗಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಇಬ್ಬರ ಹೆಸರು ಇಲ್ಲ.

ಬಿಸಿಸಿಐಗೆ ವಿದಾಯ ಪತ್ರ ನೀಡಿದ್ರಾ ದಿಗ್ಗಜರು?

ಏಕದಿನದಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮತ್ತೆ ಕಾಣಿಸಿಕೊಳ್ಳುವುದು ಅನುಮಾನ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ನಡುವೆ ಈ ಬೆಳವಣಿಗೆ ಹಲವರಿಗೆ ಅಚ್ಚರಿ ತಂದಿದೆ. ಸದ್ದಿಲ್ಲದೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ, ತಮ್ಮ ನಿರ್ಧಾರವನ್ನು ಬಿಸಿಸಿಐಗೆ ತಿಳಿಸಿದ್ರಾ? ಇದೇ ಕಾರಣದಿಂದ ಐಸಿಸಿ ರ‍್ಯಾಂಕಿಂಗ್‌ ಪಟ್ಟಿಯಿಂದ ಕೊಹ್ಲಿ ಹಾಗೂ ರೋಹಿತ್ ಶರ್ಮಾರನ್ನು ಹೊರಗಿಟ್ಟಿತಾ ಅನ್ನೋ ಮಾತುಗಳು ಚರ್ಚೆಯಾಗುತ್ತಿದೆ. ಆದರೆ ಯಾವುದೇ ಅದಿಕೃತಗೊಂಡಿಲ್ಲ.2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಬಳಿಕ ಇಬ್ಬರು ಏಕದಿನ ಕ್ರಿಕೆಟ್ ಆಡಿಲ್ಲ. ಹಾಗಂತ ಇವರಿಬ್ಬರು ಅಧಿಕೃತವಾಗಿ ವಿದಾಯ ಘೋಷಿಸಿಲ್ಲ. ಹೀಗಾಗಿ ಐಸಿಸಿ ರ‍್ಯಾಂಕಿಂಗ್‌ ಪಟ್ಟಿಯಿಂದ ಇಬ್ಬರನ್ನು ಕೈಬಿಟ್ಟಿದ್ದು ಯಾಕೆ ಅನ್ನೋದು ಇದೀಗ ತೀವ್ರ ಅನುಮಾನಕ್ಕೆ ಕಾರಣಾಗಿದೆ.

ಈ ಕುರಿತು ಕ್ರಿಕೆಟ್ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇಬ್ಬರು ವಿದಾಯ ಹೇಳಿದ್ದಾರಾ? ಯಾಕೆ ರ‍್ಯಾಂಕಿಂಗ್‌ ಪಟ್ಟಿಯಿಂದ ಕೈಬಿಡಲಾಗಿದೆ ಅನ್ನೋದು ಬಿಸಿಸಿಐ ಸ್ಪಷ್ಟಪಡಿಸಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

ಸದ್ಯ ಏಕದಿನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಶುಬಮನ್ ಗಿಲ್ ಮೊದಲ ಸ್ಥಾನದಲ್ಲಿದ್ದಾರೆ. ಟಾಪ್ 10 ಪಟ್ಟಿಯಲ್ಲಿ ಇಬ್ಬರೇ ಕಾಣಿಸಿಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿ ಶುಬಮನ್ ಇದ್ದರೆ 6ನೇ ಸ್ಥಾನವನ್ನು ಶ್ರೇಯಸ್ ಅಯ್ಯರ್ ಪಡೆದುಕೊಂಡಿದ್ದಾರೆ. ಇವರಿಬ್ಬರನ್ನು ಹೊರತುಪಡಿಸಿದರೆ ಇನ್ಯಾವುದೇ ಆಟಗಾರರು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. 

ಇತ್ತ ಏಷ್ಯಾಕಪ್ ಟೂರ್ನಿಗೆ ನಿನ್ನೆ ಬಿಸಿಸಿಐ ಆಯ್ಕೆ ಸಮಿತಿ ತಂಡ ಆಯ್ಕೆ ಮಾಡಿದೆ. ಭಾರತ ತಂಡ ಹೀಗಿದೆ

ಸೂರ್ಯ ಕುಮಾರ್ ಯಾದವ್ (ನಾಯಕ), ಶುಬಮನ್ ಗಿಲ್(ಉಪನಾಯಕ), ಅಭಿಶೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್, ಜಿತೇಶ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್, ಹರ್ಶಿತ್ ರಾಣ, ರಿಂಕು ಸಿಂಗ್