Asianet Suvarna News Asianet Suvarna News

ಬೌಲಿಂಗ್‌ ಸಿಗುತ್ತಿಲ್ಲವೆಂದು ಬುಮ್ರಾ, ಇಶಾಂತ್‌ ತಮಾಷೆ ಮಾಡಿದರು!

ಇಂಗ್ಲೆಂಡ್‌ ವಿರುದ್ದದ ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯದಲ್ಲಿ ತಮಗೆ ಹೆಚ್ಚು ಬೌಲಿಂಗ್ ಮಾಡಲು ಅವಕಾಶ ಸಿಗಲಿಲ್ಲವೆಂದು ಟೀಂ ಇಂಡಿಯಾ ವೇಗಿಗಳು ತಮಾಶೆ ಮಾಡಿದ ಘಟನೆಯನ್ನು ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ 

Virat Kohli reveals his hilarious conversation with Indian bowlers who didnt bowl much in Pink Ball Test kvn
Author
Ahmedabad, First Published Feb 26, 2021, 11:10 AM IST

ಅಹಮದಾಬಾದ್(ಫೆ.26)‌: ಇಂಗ್ಲೆಂಡ್‌ ವಿರುದ್ಧ 3ನೇ ಟೆಸ್ಟ್‌ ಗೆದ್ದ ಬಳಿಕ ಮಾತನಾಡಿದ ಭಾರತದ ನಾಯಕ ವಿರಾಟ್‌ ಕೊಹ್ಲಿ ಎರಡು ತಂಡಗಳು ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದವು ಎಂದು ತಿಳಿಸಿದರು. 

‘ಬ್ಯಾಟ್ಸ್‌ಮನ್‌ಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡದಿದ್ದರೆ ಏನಾಗಲಿದೆ ಎನ್ನುವುದಕ್ಕೆ ಈ ಪಂದ್ಯ ಉತ್ತಮ ಉದಾಹರಣೆ. ಇಷ್ಟೊಂದು ವೇಗವಾಗಿ ಸಾಗಿದ ಪಂದ್ಯದಲ್ಲಿ ನಾನು ಭಾಗಿಯಾಗಿದ್ದು ಇದೇ ಮೊದಲು. ಪಂದ್ಯದಲ್ಲಿ ಆಡುವ ವೇಳೆಯೇ ನನಗೆ ವಿಶ್ರಾಂತಿ ಸಿಗುತ್ತಿದೆ ಎಂದು ಬುಮ್ರಾ ತಮಾಷೆ ಮಾಡುತ್ತಿದ್ದರೆ, ನನ್ನ 100ನೇ ಟೆಸ್ಟ್‌ನಲ್ಲೇ ನನಗೆ ಬೌಲಿಂಗ್‌ ಸಿಗುತ್ತಿಲ್ಲ ಎಂದು ಇಶಾಂತ್‌ ಪೇಚಾಡಿಕೊಳ್ಳುತ್ತಿದ್ದರು. ಅಷ್ಟರ ಮಟ್ಟಿಗೆ ಸ್ಪಿನ್ನರ್‌ಗಳು ಪ್ರಾಬಲ್ಯ ಮೆರೆದರು’ ಎಂದು ಕೊಹ್ಲಿ ಹೇಳಿದರು.

ಅಶ್ವಿನ್‌ ಆಧುನಿಕ ಕ್ರಿಕೆಟ್‌ನ ದಿಗ್ಗಜ: ವಿರಾಟ್‌ ಕೊಹ್ಲಿ

400 ವಿಕೆಟ್‌ ಮೈಲಿಗಲ್ಲು ತಲುಪಿದ ತಮ್ಮ ಸಹ ಆಟಗಾರ ಆರ್‌.ಅಶ್ವಿನ್‌ ಬಗ್ಗೆ ನಾಯಕ ವಿರಾಟ್‌ ಕೊಹ್ಲಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ವಿರಾಟ್‌, ‘ಅಶ್ವಿನ್‌ರನ್ನು ಎಲ್ಲರೂ ಎದ್ದುನಿಂತು ಗೌರವಿಸಬೇಕು. ಇಂದಿನಿಂದ ನಿಮ್ಮನ್ನು ಲೆಜೆಂಡ್‌ (ದಿಗ್ಗಜ) ಎಂದು ಕರೆಯುತ್ತೇನೆ ಎಂದು ಅವರಿಗೆ ನಾನು ಹೇಳಿದ್ದೇನೆ’ ಎಂದರು.

ಎರಡೇ ದಿನದಲ್ಲಿ ಮುಗಿದ ಟೆಸ್ಟ್‌ನಲ್ಲಿ ನಿರ್ಮಾಣವಾದ ಅಪರೂಪದ ದಾಖಲೆಗಳಿವು..!

ಆತ್ಮವಿಶ್ವಾಸವೇ ಬಲ

ನನ್ನ ಈ ಸಾಧನೆಗೆ ಆತ್ಮವಿಶ್ವಾಸವೇ ಮೂಲ ಕಾರಣ. ಆಸ್ಪ್ರೇಲಿಯಾ ಪ್ರವಾಸದಲ್ಲಿ ನನಗೆ ಅವಕಾಶ ಸಿಗುವ ನಿರೀಕ್ಷೆಯೇ ಇರಲಿಲ್ಲ. ಆದರೆ ಜಡೇಜಾ ಗಾಯಗೊಂಡಿದ್ದರಿಂದ ನನಗೆ ಅವಕಾಶ ಸಿಕ್ಕಿತು. ಲಾಕ್‌ಡೌನ್‌ ಸಮಯದಲ್ಲಿ 7-8 ಕೆ.ಜಿ ತೂಕ ಇಳಿಸಿಕೊಂಡೆ, ಆಗಿನಿಂದ ನನ್ನ ಮೇಲೆ ನನಗೆ ನಂಬಿಕೆ ಹೆಚ್ಚಾಗಿದೆ. ಮುಂದೆ ಮತ್ತಷ್ಟುಸುಧಾರಿತ ಪ್ರದರ್ಶನ ತೋರಲು ಪ್ರಯತ್ನಿಸುತ್ತೇನೆ ಎಂದು ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
 

Follow Us:
Download App:
  • android
  • ios