ವಿರುಷ್ಕಾ ಜೋಡಿ 2020ರ ಹೊಸವರ್ಷವನ್ನು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಜತೆಗೆ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯವನ್ನು ಕೋರಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಸ್ವಿಟ್ಜರ್‌ಲ್ಯಾಂಡ್[ಜ.01]: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ಬಾಲಿವುಡ್ ತಾರೆಗಳಾದ ಸೈಫ್ ಅಲಿ ಖಾನ್, ಕರೀನಾ ಕಪೂರ್ ಹಾಗೂ ವರುಣ್ ಧವನ್ ಜತೆ ಸ್ವಿಟ್ಜರ್‌ಲ್ಯಾಂಡ್’ನಲ್ಲಿ ಅದ್ಧೂರಿಯಾಗಿ ಆಚರಿಸಿದ್ದಾರೆ. 

ಹೊಸ ವರ್ಷದ ರೆಸಲ್ಯೂಶನ್ ಬಿಚ್ಚಿಟ್ಟ ವೇಗಿ ಬುಮ್ರಾ!

View post on Instagram

ಪಾರ್ಟಿ ಮಾಡುತ್ತಿರುವ ಚಿತ್ರವನ್ನು ಹಂಚಿಕೊಂಡಿರುವ ಅನುಷ್ಕಾ ಶರ್ಮಾ ಅಭಿಮಾನಿಗಳಿಗೆ ಹೊಸವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಿರುವ ವಿರಾಟ್ ಕೊಹ್ಲಿ, ತನ್ನ ಅಭಿಮಾನಿಗಳಿಗೆ ಮುಂಚಿತವಾಗಿಯೇ ವಿಡಿಯೋ ಮೂಲಕ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. 

View post on Instagram

2019ರ ವರ್ಷ ಅದ್ಭುತವಾಗಿತ್ತೆಂದು ಭಾವಿಸುತ್ತೇನೆ, ಹಾಗೆಯೆ 2020 ನಿಮ್ಮೆಲ್ಲರ ಪಾಲಿಗೆ ಇನ್ನಷ್ಟು ಚೆನ್ನಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ವಿರುಷ್ಕಾ ಜೋಡಿ ಶುಭ ಕೋರಿದ್ದಾರೆ. 

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಹಾಗೂ ಏಕದಿನ ವಿಶ್ವಕಪ್ ಸರಣಿ ಗೆಲ್ಲುವುದರೊಂದಿಗೆ 2019ಕ್ಕೆ ಗೆಲುವಿನೊಂದಿಗೆ ಗುಡ್ ಬೈ ಹೇಳಿದೆ. ಇನ್ನು ಕೊಹ್ಲಿ ಪಡೆ ಜನವರಿ 05ರಂದು ಶ್ರೀಲಂಕಾ ವಿರುದ್ಧ ಮೊದಲ ಟಿ20 ಪಂದ್ಯವನ್ನಾಡಲಿದೆ.
ಜನವರಿ 1 ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ