ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ 2019ನೇ ವರ್ಷದಲ್ಲಿ ಹಲವು ಏಳು ಬೀಳು ಕಂಡಿದ್ದಾರೆ. ಇದೀಗ 2020ರಲ್ಲಿ ಮತ್ತೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಗುರಿ ಇಟ್ಟುಕೊಂಡಿದ್ದಾರೆ. ಇದಕ್ಕಾಗಿ ಹೊಸ ವರ್ಷವನ್ನು ಭರ್ಜರಿಯಾಗಿ ಆರಂಭಿಸಿದ್ದಾರೆ. ಗೆಳತಿ ಜೊತೆ ಥಾಯ್ಲೆಂಡ್‌ನಲ್ಲಿ ರಾಹುಲ್ ಹೊಸ ವರ್ಷ ಆಚರಿಸಿದ್ದಾರೆ.  

ಥಾಯ್ಲೆಂಡ್(ಜ.01): ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ನಟಿ, ಹಿರಿಯ ನಟ ಸುನೀಶ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ರಿಲೇಶನ್‌ಶಿಪ್ ಈಗಾಗಲೇ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಅಥಿಯಾ ಶೆಟ್ಟಿ ಜೊತೆಗಿನ ಫೋಟೋ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ರಾಹುಲ್ 2020ರ ಹೊಸ ವರ್ಷವನ್ನು ಅಥಿಯಾ ಶೆಟ್ಟಿ ಜೊತೆ ಆಚರಿಸಿದ್ದಾರೆ.

View post on Instagram

ಇದನ್ನೂ ಓದಿ: ರಾಹುಲ್-ಆತಿಯಾ ಲವ್ ಸ್ಟೋರಿ: ಸುನಿಲ್ ಶೆಟ್ಟಿ ಎಂಟ್ರಿ..!

ರಾಹುಲ್ ಹಾಗೂ ಅಥಿಯಾ ಹೊಸ ವರ್ಷವನ್ನು ಥಾಯ್ಲೆಂಡ್‌ನ ಸುಂದರ ತಾಣದಲ್ಲಿ ಬರಮಾಡಿಕೊಂಡಿದ್ದಾರೆ. ಹೊಸ ವರ್ಷಾಚರಣೆಗೆ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಥಾಯ್ಲೆಂಡ್ ಪ್ರವಾಸ ಮಾಡಿದ್ದಾರೆ. ಇದೀಗ ಇವರ ನ್ಯೂ ಇಯರ್ ಸೆಲೆಬ್ರೇಷನ್ ವಿಡಿಯೋ ವೈರಲ್ ಆಗಿದೆ.

View post on Instagram

ಇದನ್ನೂ ಓದಿ: ಫೋಟೋ ಪೋಸ್ಟ್ ಮಾಡಿ ಆತಿಯಾ ಶೆಟ್ಟಿಗೆ ಶುಭಕೋರಿದ ಕೆಎಲ್ ರಾಹುಲ್!

View post on Instagram

ಥಾಯ್ಲೆಂಡ್ ಬೀಚ್, ರೆಸ್ಟೋರೆಂಟ್, ಮಾಲ್ ಸೇರಿದಂತೆ ಹಲವು ತಾಣಗಳಲ್ಲಿ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಸುತ್ತಾಡಿದ್ದಾರೆ. ಇಷ್ಟೇ ಅಲ್ಲ ಪ್ರತಿ ತಾಣದಲ್ಲಿನ ಫೋಟೋ ಕೂಡ ಹಂಚಿಕೊಂಡಿದ್ದಾರೆ.