ವಿರಾಟ್ ಕೊಹ್ಲಿ ಏಕಾಏಕಿ ಕ್ರಿಕೆಟ್‌ನಿಂದ ದೂರ ಉಳಿದಿದ್ದೇಕೆ..? ಐದು ತಿಂಗಳು ಇಂಡಿಯಾ ಜೆರ್ಸಿಯನ್ನೇ ಹಾಕಲ್ಲ..!
ವಿರಾಟ್ ಕೊಹ್ಲಿ, ಜನವರಿ 17ರಂದು ಬೆಂಗಳೂರಿನಲ್ಲಿ ಅಫ್ಘಾನಿಸ್ತಾನ ವಿರುದ್ಧ ಟಿ20 ಮ್ಯಾಚ್ ಆಡಿದ್ಮೇಲೆ ಎಲ್ಲೂ ಕಾಣಿಸಿಕೊಂಡಿಲ್ಲ. ಮೈದಾನದಲ್ಲಿ ಮಾತ್ರವಲ್ಲ. ಮೈದಾನದ ಹೊರಗೂ ಕಿಂಗ್ ಕೊಹ್ಲಿಯನ್ನ ಯಾರೂ ನೋಡಿಲ್ಲ. ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್‌ನಿಂದ ವಿಶ್ರಾಂತಿ ಪಡೆದಿದ್ದ ವಿರಾಟ್, ಈಗ ಉಳಿದ ಮೂರು ಟೆಸ್ಟ್ಗಳಿಂದಲೂ ಹೊರಗುಳಿದಿದ್ದಾರೆ.
ಬೆಂಗಳೂರು(ಫೆ.12): ವಿರಾಟ್ ಕೊಹ್ಲಿ ಇಂಗ್ಲೆಂಡ್ ಟೆಸ್ಟ್ ಸಿರೀಸ್ ಮಾತ್ರ ಮಿಸ್ ಮಾಡಿಕೊಳ್ತಿಲ್ಲ. ಬರೋಬ್ಬರು ಐದು ತಿಂಗಳ ಕಾಲ ಅವರು ಟೀಂ ಇಂಡಿಯಾ ಜೆರ್ಸಿಯನ್ನೇ ಹಾಕೋದಿಲ್ಲ. ಸದ್ಯ ಅವರು ಭಾರತದಲ್ಲಿ ಇಲ್ಲ. ಯಾವಾಗ ಬರ್ತಾರೆ ಅನ್ನೋ ಮಾಹಿತಿಯೂ ಇಲ್ಲ. ಏನಾಗಿದೆ ಈ ನಗರಕ್ಕೆ ಅನ್ನೋ ಜಾಹೀರಾತಿನ ಹಾಗೆ ಏನಾಗಿದೆ ವಿರಾಟ್ ಕೊಹ್ಲಿಗೆ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.
ಕಿಂಗ್ ಕೊಹ್ಲಿ ಬಗ್ಗೆ ಯಾರೂ ಹೇಳ್ತಿಲ್ಲ ಅಪ್ಡೇಟ್..!
ವಿರಾಟ್ ಕೊಹ್ಲಿ, ಜನವರಿ 17ರಂದು ಬೆಂಗಳೂರಿನಲ್ಲಿ ಅಫ್ಘಾನಿಸ್ತಾನ ವಿರುದ್ಧ ಟಿ20 ಮ್ಯಾಚ್ ಆಡಿದ್ಮೇಲೆ ಎಲ್ಲೂ ಕಾಣಿಸಿಕೊಂಡಿಲ್ಲ. ಮೈದಾನದಲ್ಲಿ ಮಾತ್ರವಲ್ಲ. ಮೈದಾನದ ಹೊರಗೂ ಕಿಂಗ್ ಕೊಹ್ಲಿಯನ್ನ ಯಾರೂ ನೋಡಿಲ್ಲ. ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್‌ನಿಂದ ವಿಶ್ರಾಂತಿ ಪಡೆದಿದ್ದ ವಿರಾಟ್, ಈಗ ಉಳಿದ ಮೂರು ಟೆಸ್ಟ್ಗಳಿಂದಲೂ ಹೊರಗುಳಿದಿದ್ದಾರೆ. ಅವರ ಟೆಸ್ಟ್ ಕ್ರಿಕೆಟ್ ಜೀವಿತದಲ್ಲಿ ಮೊದಲ ಸಲ ಇಡೀ ಟೆಸ್ಟ್ ಸರಣಿಯನ್ನ ಅವರು ಮಿಸ್ ಮಾಡಿಕೊಳ್ತಿರೋದು ಇದೇ ಮೊದಲು. ಕೊಹ್ಲಿ ಎಲ್ಲೋದ್ರೂ, ಎನಾಯ್ತು ಅನ್ನೋದು ಯಾರಿಗೂ ಗೊತ್ತಿಲ್ಲ. ಏಕಾಏಕಿ ಕ್ರಿಕೆಟ್ನಿಂದ ಅವರು ದೂರ ಉಳಿದಿದ್ದೇಕೆ ಅನ್ನೋ ಪ್ರಶ್ನೆಗೆ ಯಾರ ಬಳಿಯೂ ಖಚಿತ ಉತ್ತರವಿಲ್ಲ.
ರೆಸ್ಟ್ ಬೇಕಿದ್ರೆ ಮೂರನೇ ಟೆಸ್ಟ್ ಗೆಲ್ಲಿಸಿ: ಟೀಂ ಇಂಡಿಯಾ ಕ್ರಿಕೆಟಿಗನಿಗೆ ಬಿಸಿಸಿಐ ಬಿಗ್ ಟಾಸ್ಕ್..!
ವಿರಾಟ್ ಕೊಹ್ಲಿ ಬಗ್ಗೆ ದಿನಕ್ಕೊಂದು ಸುದ್ದಿ..!
ಜನವರಿ 22ರಂದು ಮೊದಲೆರಡು ಟೆಸ್ಟ್‌ಗಳಿಂದ ತಮ್ಮ ಹೆಸರನ್ನು ಹಿಂತೆಗೆದುಕೊಳ್ಳುವ ಬಗ್ಗೆ ಬಿಸಿಸಿಐ, ನಾಯಕ, ಕೋಚ್‌ನೊಂದಿಗೆ ವಿರಾಟ್ ಮಾತನಾಡಿದ್ದರು. ವೈಯಕ್ತಿಕ ಕಾರಣದಿಂದ ಕೊಹ್ಲಿ ತಮ್ಮ ಕುಟುಂಬದೊಂದಿಗೆ ಇರುವುದು ಅಗತ್ಯ ಎಂದು ಹೇಳಿದ್ದಾರೆ. ಹೀಗಾಗಿ ಅವರು ಎರಡು ಟೆಸ್ಟ್ನಲ್ಲಿ ಆಡುವುದಿಲ್ಲ ಎಂದು ಬಿಸಿಸಿಐ ಮೊದಲಿಗೆ ತಿಳಿಸಿತ್ತು. ಕೊಹ್ಲಿ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ವದಂತಿ ಇತ್ತು. ಆದರೆ ವಿರಾಟ್ ಅವರ ಹಿರಿಯ ಸಹೋದರ ವಿಕಾಸ್ ಕೊಹ್ಲಿ ಇದು ಸುಳ್ಳು ಎಂದಿದ್ದರು.
ಇದರ ನಡುವೆ ವಿರಾಟ್ ಎರಡನೇ ಬಾರಿಗೆ ತಂದೆಯಾಗುತ್ತಾರೆ ಎಂಬ ಸುದ್ದಿ ಕೂಡ ಇದೆ. ಡಿವಿಲಿಯರ್ಸ್ ಕೂಡ ಈ ಹೇಳಿಕೆ ನೀಡಿದ್ದರು. ಆದರೆ ನಂತರ ಸ್ವತಃ ಎಬಿಡಿ ಇದು ಸುಳ್ಳು ಎಂದು ಕ್ಷಮೆಯಾಚಿಸಿದರು. ವಿರಾಟ್ ಸ್ವತಃ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮತ್ತು ಅವರ ಚಿಕಿತ್ಸೆ ಪಡೆಯುತ್ತಿದ್ದಾರೆಯೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಇದಕ್ಕೆಲ್ಲ ಸ್ವತಃ ಕೊಹ್ಲಿಯೇ ಉತ್ತರಿಸಬೇಕಿದೆ. ಕೊಹ್ಲಿ ಅಲಭ್ಯತೆ ಬಗ್ಗೆ ನಾನಾ ರೀತಿಯ ಊಹಾಪೋಹಗಳು ಬರುತ್ತಿದ್ದರೂ ಸತ್ಯ ಹೊರಬಿದ್ದಿಲ್ಲ. ಈ ಬಗ್ಗೆ ಕೊಹ್ಲಿ ಅಥವಾ ಅವರ ಪತ್ನಿ ಅನುಷ್ಕಾ ಯಾವುದೇ ಮಾಹಿತಿ ನೀಡಿಲ್ಲ. ಆದ್ರೆ ಖಚಿತ ಮಾಹಿತಿ ಪ್ರಕಾರ ವಿರೂಷ್ಕಾ ಜೋಡಿ 2ನೇ ಮುಗುವಿನ ನಿರೀಕ್ಷೆಯಲ್ಲಿದ್ದು, ಸದ್ಯ ಲಂಡನ್ನಲ್ಲಿದ್ದಾರೆ.
IPL ಹತ್ತಿರವಾಗುತ್ತಿದ್ದಂತೆ ಮತ್ತೆ ಗುಡುಗಿದ ಗ್ಲೆನ್ ಮ್ಯಾಕ್ಸ್‌ವೆಲ್..! ರೋಹಿತ್ ಶರ್ಮಾ ದಾಖಲೆ ಧೂಳೀಪಟ
ಐಪಿಎಲ್‌ನಲ್ಲಿ ಮೈದಾನಕ್ಕೆ, ವಿಶ್ವಕಪ್‌ನಲ್ಲಿ ಇಂಡಿಯಾ ಜೆರ್ಸಿ..!
ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ, ಐಪಿಎಲ್ ಮೂಲ್ಕ ರೀ ಎಂಟ್ರಿಕೊಡಲಿದ್ದಾರೆ. ಇಂಗ್ಲೆಂಡ್ ಟೆಸ್ಟ್ ಸಿರೀಸ್ ಮುಗಿದ್ಮೇಲೆ ಮಾರ್ಚ್ ಕೊನೆಯಲ್ಲಿ ಕಲರ್ ಫುಲ್ ಟೂರ್ನಿ ಸ್ಟಾರ್ಟ್ ಆಗಲಿದೆ. ಆರ್ಸಿಬಿ ಪರ ಕಣಕ್ಕಿಳಿಯೋ ಮೂಲ್ಕ ಕಮ್ಬ್ಯಾಕ್ ಮಾಡಲಿದ್ದಾರೆ. ಆದ್ರೆ ಅವರು ಟೀಂ ಇಂಡಿಯಾ ಜೆರ್ಸಿ ಹಾಕುವುದು ಜೂನ್ನಲ್ಲೇ. ಹೌದು, ಜನವರಿಯಲ್ಲಿ ಹಾಕಿದ್ದ ಇಂಡಿಯಾ ಜೆರ್ಸಿಯನ್ನ ಅವರು ಮತ್ತೆ ಹಾಕೋದು ಟಿ20 ವಿಶ್ವಕಪ್ನಲ್ಲೇ. ಅಲ್ಲಿಗೆ ಬರೋಬ್ಬರು ಐದು ತಿಂಗಳ ಕಾಲ ಅವರು ಬ್ಲೂ ಜೆರ್ಸಿ ಹಾಕುವುದೇ ಇಲ್ಲ.
ಕೊಹ್ಲಿ ಪಾಲಿಗೆ ಮಹತ್ವದ ಐಪಿಎಲ್
ಹೌದು, ಕಿಂಗ್ ಕೊಹ್ಲಿ ಪಾಲಿಗೆ ಐಪಿಎಲ್ ಮಹತ್ವದ ಪಡೆಯಲಿದೆ. ಯಾಕಂದ್ರೆ ಮೂರು ತಿಂಗಳಿಂದ ಕ್ರಿಕೆಟ್ನಿಂದ ದೂರ ಉಳಿಯಲಿರುವ ವಿರಾಟ್, ಮತ್ತೆ ಟೀಂ ಇಂಡಿಯಾಗೆ ರೀ ಎಂಟ್ರಿಕೊಡಬೇಕು ಅಂದ್ರೆ ಫಿಟ್ನೆಸ್ ಜೊತೆ ಫಾರ್ಮ್ ಅನ್ನೂ ಸಾಬೀತುಪಡಿಸಬೇಕು. ಇದರ ಜೊತೆ ಜೂನ್ನಲ್ಲಿ ಟಿ20 ವರ್ಲ್ಡ್‌ಕಪ್ ಇದೆ. ವಿಶ್ವಕಪ್ ಟೀಮ್‌ಗೆ ಸೆಲೆಕ್ಟ್ ಆಗಬೇಕು ಅಂದ್ರೆ ಕಲರ್ ಫುಲ್ ಟೂರ್ನಿಯನ್ನ ರನ್ ಹೊಳೆ ಹರಿಸಲೇಬೇಕು.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್