ರೆಸ್ಟ್ ಬೇಕಿದ್ರೆ ಮೂರನೇ ಟೆಸ್ಟ್ ಗೆಲ್ಲಿಸಿ: ಟೀಂ ಇಂಡಿಯಾ ಕ್ರಿಕೆಟಿಗನಿಗೆ ಬಿಸಿಸಿಐ ಬಿಗ್ ಟಾಸ್ಕ್..!
ಭಾರತ-ಇಂಗ್ಲೆಂಡ್ ನಡುವಿನ ಎರಡು ಟೆಸ್ಟ್‌ಗಳು ಮುಗಿದಿವೆ. ಫೆಬ್ರವರಿ 15ರಿಂದ ಅಂದ್ರೆ ಇದೇ ಗುರುವಾರದಿಂದ 3ನೇ ಟೆಸ್ಟ್ ಸ್ಟಾರ್ಟ್ ಆಗ್ತಿದೆ. ಆಗ್ಲೇ ಭಾರತೀಯ ಆಟಗಾರರು ರಾಜ್ಕೋಟ್ನಲ್ಲಿ ಅಭ್ಯಾಸವನ್ನೂ ಆರಂಭಿಸಿದ್ದಾರೆ. ಇದು ಐದು ಪಂದ್ಯಗಳ ಟೆಸ್ಟ್ ಸರಣಿ ಆಗಿರೋದ್ರಿಂದ ಆಟಗಾರರು ಬಳಲೋದು ಕಾಮನ್.
ಬೆಂಗಳೂರು(ಫೆ.12): ಇಲ್ಲೊಬ್ಬ ಆಟಗಾರನಿಗೆ ಬಿಸಿಸಿಐ ಟಾಸ್ಕ್ ಕೊಟ್ಟಿದೆ. ಆ ಟಾಸ್ಕ್ನಲ್ಲಿ ಆತ ಸಕ್ಸಸ್ ಆದ್ರೆ ವಿಶ್ರಾಂತಿ.. ಆಕಸ್ಮಾತ್ ಆ ಟಾಸ್ಕ್ನಲ್ಲಿ ವಿಫಲವಾದ್ರೆ ಸತತವಾಗಿ ಕ್ರಿಕೆಟ್ ಆಡ್ಬೇಕು. ಏನದು ಟಾಸ್ಕ್.. ಆ ಆಟಗಾರ ಯಾರು.. ಆ ಎಲ್ಲಾ ಡಿಟೇಲ್ಸ್ ಇಲ್ಲಿದೆ ನೋಡಿ..........
ರೆಸ್ಟ್ ಬೇಕಾ..? ಹಾಗಾದ್ರೆ 3ನೇ ಟೆಸ್ಟ್ ಗೆಲ್ಲಿಸಿ..!
ಭಾರತ-ಇಂಗ್ಲೆಂಡ್ ನಡುವಿನ ಎರಡು ಟೆಸ್ಟ್‌ಗಳು ಮುಗಿದಿವೆ. ಫೆಬ್ರವರಿ 15ರಿಂದ ಅಂದ್ರೆ ಇದೇ ಗುರುವಾರದಿಂದ 3ನೇ ಟೆಸ್ಟ್ ಸ್ಟಾರ್ಟ್ ಆಗ್ತಿದೆ. ಆಗ್ಲೇ ಭಾರತೀಯ ಆಟಗಾರರು ರಾಜ್ಕೋಟ್ನಲ್ಲಿ ಅಭ್ಯಾಸವನ್ನೂ ಆರಂಭಿಸಿದ್ದಾರೆ. ಇದು ಐದು ಪಂದ್ಯಗಳ ಟೆಸ್ಟ್ ಸರಣಿ ಆಗಿರೋದ್ರಿಂದ ಆಟಗಾರರು ಬಳಲೋದು ಕಾಮನ್. ಸೌತ್ ಆಫ್ರಿಕಾ, ಇಂಗ್ಲೆಂಡ್, ಐಪಿಎಲ್, ಆನಂತರ ಟಿ20 ವಿಶ್ವಕಪ್. ಹೀಗೆ ಬ್ಯಾಕ್ ಟು ಬ್ಯಾಕ್ ಸಿರೀಸ್, ಹಾಗಾಗಿ ಮೂರು ಮಾದರಿ ಕ್ರಿಕೆಟ್ ಆಡೋ ವೇಗದ ಬೌಲರ್ಸ್‌ಗೆ ರೆಸ್ಟ್ ಬೇಕೇ ಬೇಕು.
Ranji Trophy ಕುತೂಹಲ ಘಟ್ಟಕ್ಕೆ ಕರ್ನಾಟಕ vs ತಮಿಳ್ನಾಡು ಪಂದ್ಯ
ಹೌದು, ಸತತ ಕ್ರಿಕೆಟ್ ಆಡಿ ಬಳಲುವುದರಿಂದ ಫಾಸ್ಟ್ ಬೌಲರ್ಸ್ ಇಂಜುರಿಯಾಗೋದು ಕಾಮನ್. ಒಮ್ಮೆ ಇಂಜುರಿಯಾದ್ರೆ, ವೇಗದ ಬೌಲರ್ ರಿಕವರಿಯಾಗೋಕೆ ಸಾಕಷ್ಟು ಸಮಯ ಇರುತ್ತೆ. ಅದಕ್ಕೆ ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನಾಡಿಸುವ ಬದಲು ಮಧ್ಯೆ ಮಧ್ಯೆ ವಿಶ್ರಾಂತಿ ನೀಡಿದ್ರೆ ಬೌಲರ್‌ಗಳು ಇಂಜುರಿಯಾಗದಂತೆ ತಡೆಹಿಡಿಯಬಹುದು. ಇದಕ್ಕಾಗಿ ಬಿಸಿಸಿಐ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಒಂದು ಟೆಸ್ಟ್‌ನಿಂದ ಒಬ್ಬ ಬೌಲರ್‌ಗೆ ರೆಸ್ಟ್ ನೀಡಲು ಬಯಸಿದೆ. ಆದ್ರೆ ಒಂದು ಕಂಡೀಶನ್ ಹಾಕಿದೆ.
4ನೇ ಟೆಸ್ಟ್‌ನಿಂದ ಬುಮ್ರಾಗೆ ರೆಸ್ಟ್ ಬೇಕಾ? 3ನೇ ಟೆಸ್ಟ್ ಗೆಲ್ಲಿಸಿಕೊಡಿ..!
ಸದ್ಯ ಟೀಂ ಇಂಡಿಯಾದಲ್ಲಿರುವ ವೇಗದ ಬೌಲರ್ ಪೈಕಿ ಜಸ್ಪ್ರೀತ್ ಬುಮ್ರಾ ಮೂರು ಮಾದರಿ ತಂಡದಲ್ಲೂ ಖಾಯಂ ಆಗಿ ಆಡುತ್ತಿದ್ದಾರೆ. ಹಾಗಾಗಿ ಅವರಿಗೆ 3ನೇ ಟೆಸ್ಟ್‌ನಿಂದ ರೆಸ್ಟ್ ನೀಡಲು ಬಿಸಿಸಿಐ ಬಯಸಿತ್ತು. ಆದ್ರೆ ಸರಣಿ 1-1ರಿಂದ ಸಮಬಲಗೊಂಡಿರುವುದರಿಂದ ವಿಶ್ರಾಂತಿ ನೀಡುವುದರಿಂದ ಹಿಂದೆ ಸರಿದಿದೆ. 4ನೇ ಟೆಸ್ಟ್‌ಗೆ ರೆಸ್ಟ್ ನೀಡುವುದಾಗಿ ಹೇಳಿದೆ. ಆದ್ರೆ ಅದಕ್ಕೂ ಮುನ್ನ ಬುಮ್ರಾ 3ನೇ ಟೆಸ್ಟ್ ಗೆಲ್ಲಿಸಿಕೊಡಬೇಕು.
ಹೌದು, 3ನೇ ಟೆಸ್ಟ್ ಗೆಲ್ಲಿಸಿಕೊಡಿ, 4ನೇ ಟೆಸ್ಟ್‌ನಿಂದ ವಿಶ್ರಾಂತಿ ಪಡೆಯಿರಿ ಅಂತ ಬಿಸಿಸಿಐ ಸೂಚಿಸಿದೆ. ಅಲ್ಲಿಗೆ ಬುಮ್ರಾಗೆ ವಿಧಿಯಿಲ್ಲ. 3ನೇ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಭಾರತವನ್ನ ಗೆಲ್ಲಿಸಿ, 4ನೇ ಟೆಸ್ಟ್‌ನಿಂದ ಹೊರಗುಳಿಯಬೇಕು. ಆಕಸ್ಮಾತ್ 3ನೇ ಟೆಸ್ಟ್ನಲ್ಲೇನಾದ್ರೂ ಟೀಂ ಇಂಡಿಯಾ ಸೋತ್ರೆ ಉಳಿದ ಮೂರು ಟೆಸ್ಟ್‌ಗಳನ್ನೂ ಬುಮ್ರಾ ಆಡಲೇಬೇಕಿದೆ. ಯಾಕಂದ್ರೆ 3ನೇ ಟೆಸ್ಟ್ ಸೋತ್ರೆ 4 ಮತ್ತು 5ನೇ ಟೆಸ್ಟ್‌ಗಳನ್ನ ಗೆದ್ದರಷ್ಟೇ ಸರಣಿ ಗೆಲ್ಲೋಕಾಗೋದು.
RCB ಬೆಂಕಿ ವೇಗಿ ಲಾಕಿ ಫರ್ಗ್ಯೂಸನ್‌ಗೆ ಕಂಕಣ ಭಾಗ್ಯ; ಮುದ್ದಾದ ಗೆಳತಿಯ ಕೈಹಿಡಿದ ಕಿವೀಸ್ ಕ್ರಿಕೆಟಿಗ
ಐಪಿಎಲ್ ವೇಳೆ ಮುಂಬೈ ಇಂಡಿಯನ್ಸ್ ಬುಮ್ರಾಗೆ ರೆಸ್ಟ್ ಕೊಡುವುದಿಲ್ಲ. ಐಪಿಎಲ್ ಮುಗಿದ ಬೆನ್ನಲ್ಲೇ ಟಿ20 ವಿಶ್ವಕಪ್ ಆಡಬೇಕು. ಹಾಗಾಗಿ ಬುಮ್ರಾಗೆ ರೆಸ್ಟ್ ಸಿಕ್ಕರೆ ಇಂಗ್ಲೆಂಡ್ ಸರಣಿ ಮಧ್ಯೆ ಸಿಗಬೇಕು. ಇಲ್ಲವಾದ್ರೆ ಜೂನ್ ಕೊನೆಯವರೆಗೂ ಅವರು ಸತತ ಕ್ರಿಕೆಟ್ ಆಡಬೇಕು. ಒಟ್ನಲ್ಲಿ ಬುಮ್ರಾಗೆ ಇಂಜುರಿ ಭಯ ಶುರುವಾಗಿದೆ.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್