ವಿರಾಟ್ ಕೊಹ್ಲಿ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೈದಾನದಲ್ಲಿರಬೇಕಾಗಿದ್ದ ಕೊಹ್ಲಿ ದೇವಸ್ಥಾನದಲ್ಲಿ ಏನು ಮಾಡ್ತಿದ್ದಾರೆ ಎನ್ನುವ ಪ್ರಶ್ನೆ ಮೂಡಿದೆ.
ಐಪಿಎಲ್ 2025 (IPL 2025) ಅಂತಿಮ ಘಟ್ಟ ತಲುಪಿದೆ. ಫೈನಲ್ ಗೆ ಬಂದಿರುವ ಆರ್ ಸಿಬಿ (RCB) ಮೇಲೆ ಎಲ್ಲರ ಕಣ್ಣಿದೆ. ಈ ಬಾರಿ ಕಪ್ ನಮ್ದೆ ಎನ್ನುತ್ತಿರುವ ಅಭಿಮಾನಿಗಳು ಇಷ್ಟು ವರ್ಷದ ಸೋಲನ್ನು ಗೆಲುವಿನಲ್ಲಿ ಕಾಣುವ ಆತುರದಲ್ಲಿದ್ದಾರೆ. ವಿರಾಟ್ ಕೊಹ್ಲಿ (Virat Kohli) ಮೇಲೆ ನಿರೀಕ್ಷೆ ಹೆಚ್ಚಿದೆ. ಎಲ್ಲಿ ನೋಡಿದ್ರೂ ಕೊಹ್ಲಿ ಫೋಟೋ, ಹೆಸ್ರು ಕೇಳಿ ಬರ್ತಿದೆ. ಮೈದಾನದಲ್ಲಿ ಮಾತ್ರವಲ್ಲ ಮೈದಾನದ ಹೊರಗೂ ವಿರಾಟ್ ಕೊಹ್ಲಿ ಸದಾ ಚರ್ಚೆಯಲ್ಲಿರುವ ವ್ಯಕ್ತಿ. ಕೊಹ್ಲಿ ಮ್ಯಾಚ್ ಮುಗಿದ್ಮೆಲೆ ಏನ್ ಮಾಡ್ತಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇದೆ. ಈಗ ಕೊಹ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಒಡಿಶಾ ದೇವಾಲಯದಲ್ಲಿ ಕೊಹ್ಲಿ ನೋಡಿ ಜನರು ದಂಗಾಗಿದ್ದಾರೆ. ಫಿಟ್ ಆಗಿ ಮೈದಾನದಲ್ಲಿ ಆಡ್ತಿರುವ ಕೊಹ್ಲಿ ಒಡಿಶಾ ದೇವಸ್ಥಾನದಲ್ಲಿ ಏನು ಮಾಡ್ತಿದ್ದಾರೆ ಅಂತ ನೀವು ಪ್ರಶ್ನಿಸಬಹುದು. ಆದ್ರೆ ಈ ವಿಡಿಯೋದಲ್ಲಿರುವ, ದೇವಸ್ಥಾನದಲ್ಲಿ ಪ್ರಸಾದ ವಿತರಿಸ್ತಿರುವ ವ್ಯಕ್ತಿ ಕೊಹ್ಲಿ ಅಲ್ಲ, ವಿರಾಟ್ ಕೊಹ್ಲಿ ಹೋಲುವ ವ್ಯಕ್ತಿ.
ಒಡಿಶಾದ ಭುವನೇಶ್ವರದಲ್ಲಿರುವ ಅನಂತ ವಾಸುದೇವ್ ದೇವಾಲಯದ ಅರ್ಚಕರು ಕೊಹ್ಲಿಯನ್ನು ಹೋಲ್ತಾರೆ. ಹಾಗಾಗಿ ಈ ವಿಡಿಯೋ ಇಂಟರ್ನೆಟ್ನಲ್ಲಿ ಸಂಚಲನ ಸೃಷ್ಟಿಸಿದೆ. ವೈರಲ್ ವೀಡಿಯೊದಲ್ಲಿ ಕಂಡುಬರುವ ಈ ಪೂಜಾರಿ ಕೇಶವಿನ್ಯಾಸ, ಗಡ್ಡ, ದವಡೆ ಮತ್ತು ಮುಖದ ಅಭಿವ್ಯಕ್ತಿಗಳು ವಿರಾಟ್ ಕೊಹ್ಲಿ ಹೋಲುವ ಕಾರಣ ಜನರು ಮೋಸ ಹೋಗ್ತಿದ್ದಾರೆ. ಈ ವಿಡಿಯೋದಲ್ಲಿ ಅರ್ಚಕರು ಪ್ರಸಾದ ವಿತರಿಸುತ್ತಿರೋದನ್ನು ಕಾಣ್ಬಹುದು. ಲುಂಗಿಯಲ್ಲಿ ಕುಳಿತು, ಭುಜದ ಮೇಲೆ ಟವಲ್ ಹಾಕಿಕೊಂಡು ಪ್ರಸಾದದ ಬಗ್ಗೆ ಮಾಹಿತಿ ನೀಡ್ತಿದ್ದಾರೆ. ಪ್ರತಿ ದಿನ ನಾನು ಒಂದೇ ರೀತಿಯ ಪ್ರಸಾದ ವಿತರಣೆ ಮಾಡ್ತೇನೆ. ಪ್ರಸಾದ ಮೂರು ಬಗೆಯ ಅನ್ನ ಮತ್ತು ಎರಡು ಬಗೆಯ ದ್ವಿದಳ ಧಾನ್ಯಗಳನ್ನು ಒಳಗೊಂಡಿರುತ್ತದೆ ಅನ್ನೋದನ್ನು ನೀವು ಕೇಳ್ಬಹುದು.
ಸುನಿಲ್ ದಿ ಕ್ರಿಕೆಟರ್ ಎಂಬ ಬಳಕೆದಾರರು ಈ ವೀಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಇದು ವಿರಾಟ್ ಕೊಹ್ಲಿ ಅಲ್ಲ ಎಂದು ನಾನು ನನಗೆ ಹೇಳಿಕೊಳ್ತಿದ್ದೆನೆ ಎಂದು ಶೀರ್ಷಿಕೆ ಹಾಕಿದ್ದಾರೆ. ಈ ವಿಡಿಯೋ ನೋಡಿದ ಫ್ಯಾನ್ಸ್ ತಮಾಷೆ ಕಮೆಂಟ್ ಹಾಕಿದ್ದಾರೆ. ಕೊಹ್ಲಿ ಯುಕೆಗೆ ಹೋಗ್ಲಿಲ್ಲ ದೇವಾಲಯದಲ್ಲಿ ಊಟ ಬಡಿಸಲು ಶುರು ಮಾಡಿದ್ದಾರೆ ಅಂತ ಕಮೆಂಟ್ ಮಾಡಿದ್ದಾರೆ. ಐಪಿಎಲ್ ಮ್ಯಾಚ್ ಕಥೆ ಏನಾಗ್ಬಹುದು ಅಂತ ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ನಿವೃತ್ತಿ ನಂತ್ರ ವಿರಾಟ್ ಕೊಹ್ಲಿ ಇದೇ ಕೆಲ್ಸ ಮಾಡ್ತಾರೆ ಅಂತ ಇನ್ನೊಬ್ಬರು ಬರೆದಿದ್ದಾರೆ. ಬಾಡಿ ಬಿಲ್ಡರ್ ಅವತಾರದಲ್ಲಿ ವಿರಾಟ್ ಕೊಹ್ಲಿ ಎಂದು ಮತ್ತೊಬ್ಬರು ಕಾಲೆಳೆದಿದ್ದಾರೆ. ವಿಶ್ವದಲ್ಲಿ ಒಬ್ಬರನ್ನೇ ಹೋಲುವ 7 ಮಂದಿ ಇರ್ತಾರಂತೆ. ಇದು ಹಾಗೆಯೇ ಅಂತ ಕೆಲವರು ಹೇಳಿದ್ರೆ, ಈ ವಿಡಿಯೋ ನೋಡಿದ ಅನೇಕರಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ಎಐ ಟೂಲ್ಸ್ ಅಂತ ಕೆಲವರು ಕಮೆಂಟ್ ಮಾಡಿದ್ದಾರೆ. ವಿರಾಟ್ ಕೊಹ್ಲಿಯಂತೆಯೇ ಕಾಣುವ ವ್ಯಕ್ತಿ ಇಂಟರ್ನೆಟ್ನಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಟರ್ಕಿಶ್ ನಟನೊಬ್ಬನ ಚಿತ್ರ ವೈರಲ್ ಆಗಿತ್ತು, ಅವರು ಕೊಹ್ಲಿಯನ್ನು ಹೋಲುತ್ತಾರೆ.
ಇನ್ನು ಕೊಹ್ಲಿ ಬಗ್ಗೆ ಹೇಳೋದಾದ್ರೆ, ಐಪಿಎಲ್ 2025 ರಲ್ಲಿ ಕೊಹ್ಲಿಯ ಮೋಡಿ ಜೋರಾಗಿದೆ. ತಂಡ ನಾಲ್ಕನೇ ಬಾರಿಗೆ ಫೈನಲ್ಗೆ ಪ್ರಯಾಣ ಬೆಳೆಸಿದೆ. ಕಳೆದ 18 ವರ್ಷಗಳಿಂದ, ಸ್ಟಾರ್ ಕ್ರಿಕೆಟಿಗರಿಂದ ತುಂಬಿರುವ ಆರ್ಸಿಬಿ ಇಲ್ಲಿಯವರೆಗೆ ಒಂದೇ ಒಂದು ಟ್ರೋಫಿ ಪಡೆದಿಲ್ಲ.
