Asianet Suvarna News Asianet Suvarna News

ರಾಮ ಭಕ್ತಿ ಪ್ರದರ್ಶಿಸಿದ ವಿರಾಟ್ ಕೊಹ್ಲಿ: ವಿಡಿಯೋ ವೈರಲ್‌!

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ, ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ತತ್ತರಿಸಿ ಹೋಯಿತು. ಪರಿಣಾಮ ಕೇವಲ 47 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಕಂಗಾಲಾಗಿ ಹೋಗಿತ್ತು. ಈ ಸಂದರ್ಭದಲ್ಲಿ ಕೇಶವ್ ಮಹಾರಾಜ್ ಕ್ರೀಸ್‌ಗಿಳಿಯುವ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಶ್ರೀರಾಮ ಭಕ್ತಿ ಪ್ರದರ್ಶಿಸಿದರು.

Virat Kohli heartwarming gestures as Ram Siya Ram plays during Keshav Maharaj entry kvn
Author
First Published Jan 4, 2024, 10:09 AM IST

ಕೇಪ್‌ಟೌನ್‌(ಜ.04): ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಟೆಸ್ಟ್‌ನ ಮೊದಲ ದಿನದಾಟದ ವೇಳೆ ಭಾರತೀಯ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಮೈದಾನದಲ್ಲಿ ಶ್ರೀರಾಮ ಭಕ್ತಿ ಪ್ರದರ್ಶಿಸಿದರು. ರಾಮ್‌ ಸಿಯಾ ರಾಮ್‌ ಎಂಬ ಹಾಡು ಹಾಕಿದಾಗ ಕೈಮುಗಿದ ಕೊಹ್ಲಿ, ಬಿಲ್ಲು ಬಾಣ ಹಿಡಿದ ರಾಮನಂತೆಯೂ ನಿಂತು ಗಮನ ಸೆಳೆದರು. ಆ ಸನ್ನಿವೇಶದ ಫೋಟೋ, ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿವೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ, ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ತತ್ತರಿಸಿ ಹೋಯಿತು. ಪರಿಣಾಮ ಕೇವಲ 47 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಕಂಗಾಲಾಗಿ ಹೋಗಿತ್ತು. ಈ ಸಂದರ್ಭದಲ್ಲಿ ಕೇಶವ್ ಮಹಾರಾಜ್ ಕ್ರೀಸ್‌ಗಿಳಿಯುವ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಶ್ರೀರಾಮ ಭಕ್ತಿ ಪ್ರದರ್ಶಿಸಿದರು.

ಮೊದಲ ಇನಿಂಗ್ಸ್‌ನಲ್ಲಿ ಕ್ಷೇತ್ರರಕ್ಷಣೆ ಮಾಡುವ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಶ್ರೀರಾಮ ಭಕ್ತಿ ಪ್ರದರ್ಶಿಸಿದ ವಿಡಿಯೋ ಹೀಗಿದೆ ನೋಡಿ:

ಟೆಸ್ಟ್‌ ರ್‍ಯಾಂಕಿಂಗ್‌: ಟಾಪ್‌ 10ಗೆ ಮರಳಿದ ಕೊಹ್ಲಿ

ದುಬೈ: ಭಾರತದ ತಾರಾ ಬ್ಯಾಟರ್ ವಿರಾಟ್‌ ಕೊಹ್ಲಿ ಐಸಿಸಿ ಟೆಸ್ಟ್‌ ಬ್ಯಾಟರ್‌ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 4 ಸ್ಥಾನ ಏರಿಕೆ ಕಂಡು 9ನೇ ಸ್ಥಾನ ಪಡೆದಿದ್ದಾರೆ. 2022ರಲ್ಲಿ ಅಗ್ರ-10ರಿಂದ ಹೊರಬಿದ್ದಿದ್ದ ವಿರಾಟ್‌, ದ.ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಕ್ರಮವಾಗಿ 38 ಹಾಗೂ 76 ರನ್‌ ಗಳಿಸಿದ ಪರಿಣಾಮ, ಮತ್ತೆ ಟಾಪ್‌ 10ಗೆ ಕಾಲಿಟ್ಟಿದ್ದಾರೆ. ರೋಹಿತ್‌ ಶರ್ಮಾ 14ನೇ ಸ್ಥಾನಕ್ಕೆ ಕುಸಿದರೆ, ಕೆ.ಎಲ್‌.ರಾಹುಲ್‌ 11 ಸ್ಥಾನ ಏರಿಕೆ ಕಂಡು 51ನೇ ಸ್ಥಾನ ಪಡೆದಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಆರ್‌.ಅಶ್ವಿನ್‌ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

'ಏನ್ ಗುರೂ, ಕನ್ನಡ ಗೊತ್ತಿಲ್ಲ...' ಎಂದ ಬೆಂಗಳೂರು ಬಾಯ್ ವಿರಾಟ್ ಕೊಹ್ಲಿ..!

ಕೇಪ್‌ಟೌನ್‌ನಲ್ಲಿ ವಿಕೆಟ್‌ಗಳ ಸುರಿಮಳೆ!

ಕೇಪ್‌ಟೌನ್‌: ಭಾರತ-ದಕ್ಷಿಣ ಆಫ್ರಿಕಾ ನಡುವಿನ 2ನೇ ಟೆಸ್ಟ್‌ಗೆ ಆತಿಥ್ಯ ವಹಿಸುತ್ತಿರುವ ಇಲ್ಲಿನ ನ್ಯೂಲ್ಯಾಂಡ್ಸ್‌ ಕ್ರೀಡಾಂಗಣದ ಪಿಚ್‌ ಮೊದಲ ದಿನವೇ 23 ವಿಕೆಟ್‌ಗಳನ್ನು ಬಲಿ ಪಡೆಯಿತು.

ಅನಿರೀಕ್ಷಿತ ಬೌನ್ಸ್‌ ಹಾಗೂ ಸೀಮ್‌ ಮೂವ್‌ಮೆಂಟ್‌ ಇರುವ ಪಿಚ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ ದ.ಆಫ್ರಿಕಾ, ಮೊಹಮದ್‌ ಸಿರಾಜ್‌ರ ಮಾರಕ ಬೌಲಿಂಗ್‌ ದಾಳಿಗೆ ನಲುಗಿ 55 ರನ್‌ಗೆ ಆಲೌಟ್‌ ಆಯಿತು. ದೊಡ್ಡ ಮುನ್ನಡೆಯ ನಿರೀಕ್ಷಿಯೊಂದಿಗೆ ಮೊದಲ ಇನ್ನಿಂಗ್ಸ್‌ ಕಟ್ಟುತ್ತಿದ್ದಾಗ 0 ರನ್‌ಗೆ ಕೊನೆಯ 6 ವಿಕೆಟ್‌ ಕಳೆದುಕೊಂಡಿದ್ದು, ಭಾರತಕ್ಕೆ ಗರ ಬಡಿದಂತಾಯಿತು.

153ಕ್ಕೆ 4 ವಿಕೆಟ್, 153ಕ್ಕೆ ಆಲೌಟ್, ಒಂದೂ ರನ್‌ಗಳಿಸದೇ 6 ವಿಕೆಟ್ ಕಳೆದುಕೊಂಡ ಭಾರತ!

153 ರನ್‌ಗೆ 4 ವಿಕೆಟ್‌ ಕಳೆದುಕೊಂಡಿದ್ದ ಭಾರತ, ಆ ಮೊತ್ತಕ್ಕೆ ಒಂದೂ ರನ್‌ ಸೇರಿಸದೆ ಸರ್ವಪತನ ಕಂಡಿತು. 146 ವರ್ಷಗಳ ಟೆಸ್ಟ್‌ ಇತಿಹಾಸದಲ್ಲಿ, ಒಟ್ಟಾರೆ 2522 ಟೆಸ್ಟ್‌ಗಳಲ್ಲಿ ತಂಡವೊಂದು ಒಂದೂ ರನ್‌ ಗಳಿಸದೆ 6 ವಿಕೆಟ್‌ ಕಳೆದುಕೊಂಡಿದ್ದು ಇದೇ ಮೊದಲು.

ಇಂಥ ದುರ್ಗತಿಯನ್ನು ತಂದುಕೊಂಡ ಭಾರತ, 2ನೇ ಇನ್ನಿಂಗ್ಸಲ್ಲಿ ದ.ಆಫ್ರಿಕಾಕ್ಕೆ ಕೊಂಚ ಆರಾಮಾಗಿ ಬ್ಯಾಟ್‌ ಮಾಡಲು ಬಿಟ್ಟರೂ, ಇನ್ನೂ 36 ರನ್‌ ಮುನ್ನಡೆ ಹೊಂದಿದ್ದು, 2ನೇ ದಿನದಾಟದ ಮೊದಲ ಅವಧಿ ಪಂದ್ಯದ ಫಲಿತಾಂಶ ನಿರ್ಧರಿಸಬಹುದು.

 

Follow Us:
Download App:
  • android
  • ios