Asianet Suvarna News Asianet Suvarna News

ಕಿಂಗ್ ಕೊಹ್ಲಿಯ ಸಿಂಪ್ಲಿಸಿಟಿಗೆ ಫ್ಯಾನ್ಸ್ ಫಿದಾ..! ಕೊಹ್ಲಿ ಎಲ್ಲರಿಗೂ ಇಷ್ಟ ಆಗೋದೇ ಈ ಕಾರಣಕ್ಕೆ..!

ಸೋಷಿಯಲ್ ಮೀಡಿಯಾದಲ್ಲಿ ಕೊಹ್ಲಿಯ ಫಾಲೋವರ್ಸ್​ ಬಗ್ಗೆ ಯಂತೂ ಹೇಳೋದೆ ಬೇಡ. ಫೇಸ್​ಬುಕ್, ಇನ್ಸ್​ಟಾಗ್ರಾಮ್, ಟ್ವಿಟರ್ ಎಲ್ಲಾ ಸೇರಿ 30 ಕೋಟಿಗೂ ಹೆಚ್ಚು ಜನ ಕೊಹ್ಲಿಯನ್ನ ಫಾಲೋ ಮಾಡ್ತಾರೆ. ಇನ್ನು ಆಫ್​ಲೈನ್​ನಲ್ಲೂ ಕೊಹ್ಲಿಗಿರೋ ಕ್ರೇಜ್‌​ ಅಸಾಮಾನ್ಯ ಅಂದ್ರೆ ತಪ್ಪಿಲ್ಲ.   

Virat Kohli Getting Late For His Bengaluru Flight Tricks The Paparazzi At Mumbai Airport kvn
Author
First Published Aug 25, 2023, 4:02 PM IST

ಬೆಂಗಳೂರು(ಆ.25) ಮಾಡರ್ನ್​ ಡೇ  ಕ್ರಿಕೆಟ್‌ನ ಬ್ಯಾಟಿಂಗ್ ಲೆಜೆಂಡ್ ವಿರಾಟ್ ಕೊಹ್ಲಿ ಫ್ಯಾನ್  ಫಾಲೋಯಿಂಗ್​, ಕ್ರೇಜ್‌​ ಬಗ್ಗೆ ಎಷ್ಟು ಹೇಳಿದ್ರು ಕಡಿಮೇನೆ..!  ಕ್ಲಾಸ್ ಬ್ಯಾಟಿಂಗ್, ಆಟದ ಮೇಲಿನ ಕಮಿಟ್ಮೆಂಟ್​, ಆಗ್ರೆಷನ್​ನಿಂದಲೇ ಕೊಹ್ಲಿ ಕೋಟ್ಯಾಂತರ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿ ಕೊಹ್ಲಿಯ ಫಾಲೋವರ್ಸ್​ ಬಗ್ಗೆ ಯಂತೂ ಹೇಳೋದೆ ಬೇಡ. ಫೇಸ್​ಬುಕ್, ಇನ್ಸ್​ಟಾಗ್ರಾಮ್, ಟ್ವಿಟರ್ ಎಲ್ಲಾ ಸೇರಿ 30 ಕೋಟಿಗೂ ಹೆಚ್ಚು ಜನ ಕೊಹ್ಲಿಯನ್ನ ಫಾಲೋ ಮಾಡ್ತಾರೆ. ಇನ್ನು ಆಫ್​ಲೈನ್​ನಲ್ಲೂ ಕೊಹ್ಲಿಗಿರೋ ಕ್ರೇಜ್‌​ ಅಸಾಮಾನ್ಯ ಅಂದ್ರೆ ತಪ್ಪಿಲ್ಲ.   

ಶ್ರೇಯಸ್ ಅಯ್ಯರ್ ಏಷ್ಯಾಕಪ್ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದು ಹೇಗೆ ಗೊತ್ತಾ..?

ಕ್ರಿಕೆಟ್ ದುನಿಯಾದ ಸೂಪರ್ ಸ್ಟಾರ್​ ಎಷ್ಟು ಸಿಂಪಲ್ ನೋಡಿ..!

ವಿರಾಟ್ ಕೊಹ್ಲಿ​ ಎಲ್ಲೇ ಕಾಣಿಸಿಕೊಂಡ್ರು, ಅಲ್ಲಿ ಅಭಿಮಾನಿಗಳ ದಂಡೇ ನೆರೆದಿರುತ್ತೆ. ಕೊಹ್ಲಿ ಜೊತೆ ಸೆಲ್ಫಿಗಾಗಿ ಫ್ಯಾನ್ಸ್ ಮುಗಿಬೀಳ್ತಾರೆ. ಆದ್ರೆ, ಎಷ್ಟೇ ಜನ ಬಂದ್ರೂ. ಮೈ ಮೇಲೆ ಬಿದ್ರು ಕೊಹ್ಲಿ ಮಾತ್ರ, ಒಂಚೂರು ಬೇಜಾರು ಮಾಡಿಕೊಳ್ಳಲ್ಲ. ಅಭಿಮಾನಿಗಳ ಮೇಲೆ ಕೋಪ ತೋರಿಸಲ್ಲ. ಅವರ ಜೊತೆ ಹಂಬಲ್ ಆಗಿ ವರ್ತಿಸ್ತಾರೆ. ಇದಕ್ಕೊಂದು ಬೆಸ್ಟ್ ಎಕ್ಸಾಂಪಲ್ ಇಲ್ಲಿದೆ ನೋಡಿ..! 

ಏಷ್ಯಾಕಪ್​ ಟೂರ್ನಿಗೂ BCCI, ಬೆಂಗಳೂರಿನಲ್ಲಿ ಟ್ರೈನಿಂಗ್ ಕ್ಯಾಂಪ್ ಆಯೋಜಿಸಿದೆ. ಈ ಕ್ಯಾಂಪ್​ನಲ್ಲಿ ಭಾಗವಹಿಸೋಕೆ ಅಂತ ಕೊಹ್ಲಿ ಬೆಂಗಳೂರಿಗೆ ಆಗಮಿಸ್ತಿದ್ರು. ಈ ವೇಳೆ ಮುಂಬೈ ಏರ್​ಪೋರ್ಟ್​​ನಲ್ಲಿ ಫ್ಯಾನ್ಸ್, ಕೊಹ್ಲಿಗೆ ಸೆಲ್ಫಿ ಕೇಳಿದ್ದಾರೆ. ಆಗ ಕೊಹ್ಲಿ ಹಂಬಲ್​ ಆಗಿ, ಅತ್ತ ಏರ್​ಪೋರ್ಟ್​ ತಪಾಸಣಾಧಿಕಾರಿಗಳಿಗೆ ಸಹಕರಿಸುತ್ತಾ. ಎಲ್ಲರ ಜೊತೆಗೂ ಪೋಟೋ ತೆಗೆಸಿಕೊಂಡಿದ್ದಾರೆ. ಕೊಹ್ಲಿಯ ಈ ಹಂಬಲ್​ನೆಸ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. 

ಅಭಿಮಾನಿಗೆ ಕೊಟ್ಟ ಮಾತನ್ನ ಉಳಿಸಿಕೊಂಡ ವಿರಾಟ್!

ವಿಶೇಷ ಅಂದ್ರೆ, ಕೆಲ ದಿನಗಳ ಹಿಂದೆ ಇದೇ ಏರ್​ಫೋರ್ಟ್​​ನಲ್ಲಿ ಕೊಹ್ಲಿ ಕಾಣಿಸಿಕೊಂಡಿದ್ರು. ಆಗ ಅಭಿಮಾನಿಯೊಬ್ರು ಸೆಲ್ಫಿ ಕೇಳಿದ್ರು. ಆದ್ರೆ, ಅರ್ಜೆಂಟ್​ನಲ್ಲಿದ್ದ ಕೊಹ್ಲಿ ಆಗಸ್ಟ್​ 23ಕ್ಕೆ ಬರ್ತೀನಿ. ಆವತ್ತು ಪಕ್ಕಾ ಸೆಲ್ಫಿ ಕೊಡ್ತೀನಿ ಅಂತ ಹೇಳಿದ್ರು. ಅದರಂತೆ ವಿರಾಟ್ ಕೊಹ್ಲಿ ಮೊನ್ನೆ ಆ ಫ್ಯಾನ್ ಜೊತೆ ಪೋಟೋಗೆ ಪೋಸ್​  ನೀಡಿದ್ರು. ಕೊಟ್ಟ ಮಾತನ್ನ ಉಳಿಸಿಕೊಂಡ್ರು.  

ಒಟ್ಟಿನಲ್ಲಿ ಕೊಹ್ಲಿ ಕ್ರಿಕೆಟ್​ ದುನಿಯಾದ ಬಿಗ್ಗೆಸ್ಟ್ ಸೂಪರ್​ ಸ್ಟಾರ್ ಆಗಿದ್ರು, ಅವರಲ್ಲಿ ಒಂಚೂರು ಅಹಂಕಾರ ಇಲ್ಲ. ಇದೇ ಕಾರಣಕ್ಕೆ ಅಭಿಮಾನಿಗಳು ಕೊಹ್ಲಿಯನ್ನ ಕಿಂಗ್ ಕೊಹ್ಲಿ ಅಂತ ಕರೀತಾರೆ.
 

Follow Us:
Download App:
  • android
  • ios