Asianet Suvarna News Asianet Suvarna News

ಕಂಫರ್ಟ್​​ ಝೋನ್​ನಿಂದ ಹೊರ ಬಂದು ಅಬ್ಬರಿಸಲು ವಿರಾಟ್ ಕೊಹ್ಲಿ ರೆಡಿ..!

ಅಶ್ವಿನ್ ಬೌಲಿಂಗ್​​ನಲ್ಲಿ ರಿವರ್ಸ್ ಸ್ವೀಪ್ ಪ್ರಾಕ್ಟೀಸ್..!

ಯುವ ಬ್ಯಾಟ್ಸ್​​ಮನ್​ಗಳಿಗೆ ಕೊಹ್ಲಿ ಬ್ಯಾಟಿಂಗ್​ ಕೋಚ್..!

 

Virat Kohli get ready to take West Indies Challenge kvn
Author
First Published Jul 8, 2023, 8:30 AM IST

ನವದೆಹಲಿ(ಜು.08): ಭಾರತ- ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ ಆರಂಭಕ್ಕೆ ಇನ್ನು 4 ದಿನ ಮಾತ್ರ ಬಾಕಿಯಿದೆ. WTC ಫೈನಲ್​ ನಂತರ ಮತ್ತೆ ಫೀಲ್ಡ್​ಗಿಳಿಯಲು ರೋಹಿತ್ ಶರ್ಮಾ ಪಡೆ ರೆಡಿಯಾಗಿದೆ. ಈಗಾಗ್ಲೇ ಕೆರಿಬಿಯನ್ ನಾಡಿಗೆ ತಲುಪಿರೋ ಆಟಗಾರರು ಭರ್ಜರಿ ಪ್ರಾಕ್ಟೀಸ್ ಆರಂಭಿಸಿದ್ದಾರೆ. ರನ್​ಮಷಿನ್ ವಿರಾಟ್ ಕೊಹ್ಲಿ ಕೂಡ ನೆಟ್ಸ್​​ನಲ್ಲಿ ಬೆವರು ಹರಿಸುತ್ತಿದ್ದಾರೆ. 

ಅಶ್ವಿನ್ ಬೌಲಿಂಗ್​​ನಲ್ಲಿ ರಿವರ್ಸ್ ಸ್ವೀಪ್ ಪ್ರಾಕ್ಟೀಸ್..!

ವಿರಾಟ್ ಕೊಹ್ಲಿ ಪಕ್ಕಾ ಕ್ಲಾಸ್ ಪ್ಲೇಯರ್. ಕ್ರಿಕೆಟಿಂಗ್ ಶಾಟ್ಸ್​​ ಮೂಲಕವೇ ಕೊಹ್ಲಿ ಅಬ್ಬರಿಸ್ತಾರೆ. ವಿರಾಟ್ ಕೊಹ್ಲಿ ಬೇರೆ ಬ್ಯಾಟ್ಸ್​ಮನ್​ಗಳಂತೆ ಡಿಫ್ರೆಂಟ್ ಶಾಟ್​ಗಳನ್ನ ಆಡಲ್ಲ. ಆದ್ರೆ, ವಿಂಡೀಸ್​ ನಾಡಲ್ಲಿ ಅಬ್ಬರಿಸಲು ಕೊಹ್ಲಿ ಡಿಫ್ರೆಂಟ್ ಶಾಟ್​ಗಳನ್ನ ಆಡ್ತಿದ್ದಾರೆ. ಸ್ಪಿನ್ನರ್​ ಆರ್.ಅಶ್ವಿನ್ ಬೌಲಿಂಗ್​ನಲ್ಲಿ ರಿವರ್ಸ್​​ ಸ್ವೀಪ್​ ಆಡೋದನ್ನ ಪ್ರಾಕ್ಟೀಸ್ ಮಾಡ್ತಿದ್ದಾರೆ. 

ಯುವ ಬ್ಯಾಟ್ಸ್​​ಮನ್​ಗಳಿಗೆ ಕೊಹ್ಲಿ ಬ್ಯಾಟಿಂಗ್​ ಕೋಚ್..!

ಯೆಸ್, ತಂಡದ ಪ್ರಾಕ್ಟೀಸ್ ವೇಳೆ ಕೊಹ್ಲಿ ಬ್ಯಾಟಿಂಗ್ ಕೋಚ್ ಆಗಿದ್ರು.  ಯುವ ಬ್ಯಾಟ್ಸ್​​ಮನ್​ಗಳಿಗೆ ಬ್ಯಾಟಿಂಗ್ ಟಿಪ್ಸ್  ನೀಡಿದ್ರು. ಎಡಗೈ ಬ್ಯಾಟ್ಸ್​​ಮನ್ ಯಶಸ್ವಿ ಜೈಸ್ವಾಲ್​ಗೆ ಕೆಲ ಅಮೂಲ್ಯ ಸಲಹೆನಗಳನ್ನ ನೀಡಿದ್ರು. ಇನ್ನು ಐಪಿಎಲ್ ಟೂರ್ನಿಯಲ್ಲೂ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ, ಪಂದ್ಯ ಮುಗಿಯುತ್ತಿದ್ದಂತೆಯೇ ಯುವ ಆಟಗಾರರಿಗೆ ಅಮೂಲ್ಯ ಬ್ಯಾಟಿಂಗ್ ಸಲಹೆ ನೀಡುತ್ತಿದ್ದರು.

ಸಂಬಳ ಹೆಚ್ಚಿಸಿಕೊಂಡ ಅಜಿತ್ ಅಗರ್ಕರ್​ ಮುಂದೆ ಸಾಲು ಸಾಲು ಸವಾಲು..!

ವಿಂಡೀಸ್ ನೆಲದಲ್ಲಿ ಹಳೆ ಖದರ್​ಗೆ ಮರಳ್ತಾರಾ ಕೊಹ್ಲಿ..? 

ಟೆಸ್ಟ್​ ಕ್ರಿಕೆಟ್​​ನಲ್ಲಿ ಕೊಹ್ಲಿ, ತಮ್ಮ ಹಿಂದಿನ ಖದರ್ ಕಳೆದುಕೊಂಡಿದ್ದಾರೆ. ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಬಾರ್ಡರ್‌-ಗವಾಸ್ಕರ್‌ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಮಕಾಡೆ ಮಲಗಿದ್ರು. ಆದ್ರೆ, ಕೊನೆಯ ಟೆಸ್ಟ್​​ನಲ್ಲಿ ಶತಕ ಸಿಡಿಸಿದ್ರು. ಇದರಿಂದ WTC ಫೈನಲ್​ನಲ್ಲಿ ಕೊಹ್ಲಿ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಡಲಾಗಿತ್ತು. ಆದ್ರೆ, ತಮ್ಮ ಮೇಲಿನ ನಿರೀಕ್ಷೆಗಳನ್ನ ತಲುಪುವಲ್ಲಿ  ಕೊಹ್ಲಿ ಫೇಲ್ ಆದ್ರು. ಆದ್ರೆ, ವೆಸ್ಟ್​ ಇಂಡೀಸ್​​ನಲ್ಲಿ ಸ್ಟ್ರಾಂಗ್ ಕಮ್​ಬ್ಯಾಕ್ ಮಾಡೋ ಪಣ  ತೊಟ್ಟಿದ್ದಾರೆ. 

ವಿರಾಟ್‌ ಕೊಹ್ಲಿ ಈವರೆಗೆ ವೆಸ್ಟ್ ಇಂಡೀಸ್​ನಲ್ಲಿ 13 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್​ ಬೀಸಿದ್ದಾರೆ. ಕೇವಲ 35.61ರ ಸರಾಸರಿಯಲ್ಲಿ 463 ರನ್​ ಕಲೆಹಾಕಿದ್ದಾರೆ. 1 ಶತಕ ಮತ್ತು 2 ಅರ್ಧಶತಕ ಸಿಡಿಸಿದ್ದಾರೆ. ವಿರಾಟ್‌ ಕೊಹ್ಲಿ ರೇಂಜ್​ಗೆ ಈ ಅಂಕಿ-ಅಂಶಗಳು ಏನೇನೂ ಅಲ್ಲ. ಅದೇನೆ ಇರಲಿ, ಈ ಬಾರಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಕೊಹ್ಲಿ ಅಬ್ಬರಿಸಲಿ. ಆ ಮೂಲಕ ಟೆಸ್ಟ್​​ನಲ್ಲೂ ಹಳೆಯ ಖದರ್​ಗೆ ಮರಳಲಿ ಎನ್ನುವುದು ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಹಾರೈಕೆಯಾಗಿದೆ.

Follow Us:
Download App:
  • android
  • ios