Asianet Suvarna News Asianet Suvarna News

ಬಾಂಗ್ಲಾದೇಶ ಸರಣಿಯಿಂದ ಕೊಹ್ಲಿಗೆ ರೆಸ್ಟ್; ಪ್ರತಿಕ್ರಿಯೆ ನೀಡಿದ ಗಂಗೂಲಿ!

ಬಾಂಗ್ಲಾದೇಶ ವಿರುದ್ದದ ಟಿ20 ಹಾಗೂ ಟೆಸ್ಟ್ ಸರಣಿಯಿಂದ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡೋ ಕುರಿತು ಬಿಸಿಸಿಐ ನೂತನ ಅಧ್ಯಕ್ಷ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 

Virat kohli call if he wants to rest from bangla series says sourav ganguly
Author
Bengaluru, First Published Oct 22, 2019, 5:36 PM IST

ಕೋಲ್ಕತಾ(ಅ.22): ಬಿಸಿ​ಸಿಐನ ನೂತನ ಅಧ್ಯಕ್ಷರಾಗಿ ಬುಧ​ವಾರ ಅಧಿ​ಕಾರ ಸ್ವೀಕ​ರಿ​ಸ​ಲಿ​ರುವ ಮಾಜಿ ನಾಯ​ಕ ಸೌರವ್‌ ಗಂಗೂಲಿ, ಬಾಂಗ್ಲಾ​ದೇಶ ವಿರುದ್ಧ ಟಿ20 ಸರ​ಣಿಗೆ ವಿಶ್ರಾಂತಿ ತೆಗೆ​ದು​ಕೊ​ಳ್ಳು​ವು​ದು, ಬಿಡು​ವುದು ಕೊಹ್ಲಿಗೆ ಬಿಟ್ಟವಿಚಾರ ಎಂದಿ​ದ್ದಾರೆ. ಅ.24ರಂದು ಬಿಸಿ​ಸಿಐ ಆಯ್ಕೆ ಸಮಿತಿ ಸಭೆ ನಡೆ​ಯ​ಲಿದ್ದು, ತಂಡವನ್ನು ಆಯ್ಕೆ ಮಾಡ​ಲಾ​ಗು​ತ್ತದೆ. ‘ನಾನು ಅ.24ರಂದು ಕೊಹ್ಲಿ​ಯನ್ನು ಭೇಟಿ​ಯಾ​ಗು​ತ್ತೇನೆ. ಬಿಸಿ​ಸಿಐ ಅಧ್ಯ​ಕ್ಷ ತಂಡದ ನಾಯ​ಕ​ನೊಂದಿಗೆ ಹೇಗೆ ಮಾತ​ನಾ​ಡು​ತ್ತಾರೋ ಅದೇ ರೀತಿ ಮಾತ​ನಾ​ಡು​ತ್ತೇನೆ. ಅವರು ತಂಡದ ನಾಯಕ, ವಿಶ್ರಾಂತಿ ನಿರ್ಧಾರವನ್ನು ಅವರೇ ತೆಗೆ​ದು​ಕೊ​ಳ್ಳ​ಬ​ಹು​ದಾ​ಗಿದೆ’ ಎಂದು ಗಂಗೂಲಿ ಹೇಳಿ​ದ್ದಾರೆ.

ಇದನ್ನೂ ಓದಿ: ಭಾರತ-ಬಾಂಗ್ಲಾ ಸರಣಿ ಅನು​ಮಾ​ನ!

ವಿಶ್ವಕಪ್ ಟೂರ್ನಿ ಬಳಿಕ ನಡೆದ ವೆಸ್ಟ್ ಇಂಡೀಸ್ ಸರಣಿಗೆ ಕೊಹ್ಲಿಗೆ ವಿಶ್ರಾಂತಿ ನೀಡಲು ಬಿಸಿಸಿಐ ಮುಂದಾಗಿತ್ತು. ಆದರೆ ಕೊಹ್ಲಿ ರೆಸ್ಟ್ ತೆಗೆದುಕೊಳ್ಳದೇ ಆಡಿದ್ದರು. ಇದೀಗ ಬಾಂಗ್ಲಾ ವಿರುದ್ಧದ ಸರಣಿಗೆ ಕೊಹ್ಲಿಗೆ ಬ್ರೇಕ್ ನೀಡಲು ಬಿಸಿಸಿಐ ಚಿಂತಿಸಿದೆ. ಇದೀಗ ಕೊಹ್ಲಿ ನಿರ್ಧಾರದ ಮೇಲೆ ಆಯ್ಕೆ ಸಮಿತಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ. 

ಇದನ್ನೂ ಓದಿ: ಬಾಂಗ್ಲಾ ಟಿ20 ಸರಣಿಯಿಂದ ಈ ಕ್ರಿಕೆಟಿಗನಿಗೆ ಗೇಟ್ ಪಾಸ್..?

ನವೆಂಬರ್ 3 ರಿಂದ ಬಾಂಗ್ಲಾದೇಶ ವಿರುದ್ದದ 3 ಟಿ20 ಹಾಗೂ 2 ಟೆಸ್ಟ್ ಪಂದ್ಯದ ಸರಣಿ ಆಡಲಿದೆ. ಆದರೆ ಶಕೀಬ್ ಅಲ್ ಹಸನ್, ಮುಷ್ಫೀಕರ್ ರಹೀಮ್ ಸೇರಿದಂತೆ ಬಾಂಗ್ಲಾ ಕ್ರಿಕೆಟಿಗರು ವೇತನ ಹೆಚ್ಚಳಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಭಾರತ ಹಾಗೂ ಬಾಂಗ್ಲಾ ನಡುವಿನ ಸರಣಿ ನಡೆಯುವುದೇ ಅನುಮಾನವಾಗಿದೆ. ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ, ಸರಣಿ ನಡೆಯಲಿದೆ ಎಂದಿದ್ದಾರೆ. 
 

Follow Us:
Download App:
  • android
  • ios