ಮೌಂಟ್‌ ಮಾಂಗನ್ಯುಯಿ(ಫೆ.02): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 5 ಟಿ20 ಪಂದ್ಯ ಆತ್ಯಂತ ರೋಚಕವಾಗಿತ್ತು. ಇದರಲ್ಲಿ 3 ಮತ್ತು 4ನೇ ಪಂದ್ಯ ಸೂಪರ್ ಓವರ್‌ನಲ್ಲಿ ಭಾರತ ಗೆಲುವು ಸಾಧಿಸಿತ್ತು. ಅತೀ ರೋಚಕ ಸರಣಿಯನ್ನು ಟೀಂ ಇಂಡಿಯಾಾ 5-0 ಅಂತರದಲ್ಲಿ ಗೆದ್ದುಕೊಂಡಿದೆ. ಈ ಮೂಲಕ ಕೊಹ್ಲಿ ಗರಿಷ್ಠ ದ್ವಿಪಕ್ಷೀಯ ಟಿ20 ಸರಣಿ ಗೆದ್ದ ನಾಯಕ ಅನ್ನೋ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ: ಸರಣಿ ಕ್ಲೀನ್ ಸ್ವೀಪ್ ಮಾಡಿ ಸೇಡು ತೀರಿಸಿಕೊಂಡ ಟೀಂ ಇಂಡಿಯಾ

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ 10 ದ್ವಿಪಕ್ಷೀಯ ಟಿ20 ಸರಣಿ ಗೆದ್ದುಕೊಂಡಿದೆ. ಈ ಮೂಲಕ ಸೌತ್ ಆಫ್ರಿಕಾ ನಾಯಕ ಫಾಫ್ ಡುಪ್ಲೆಸಿಸ್ ದಾಖಲೆಯನ್ನು ಮುರಿದಿದ್ದಾರೆ. 

ಗರಿಷ್ಠ ದ್ವಿಪಕ್ಷೀಯ ಟಿ20 ಸರಣಿ ಗೆದ್ದ ನಾಯಕ
ವಿರಾಟ್ ಕೊಹ್ಲಿ 10
ಫಾಫ್ ಡುಪ್ಲೆಸಿಸ್ 9
ಇಯಾನ್ ಮಾರ್ಗನ್ 7
ಡರೆನ್ ಸ್ಯಾಮಿ 6
ಎಂ.ಎಸ್.ಧೋನಿ 5

ಇದನ್ನೂ ಓದಿ: ಸರಣಿ ಸೋಲಿನ ನೋವನ್ನು ಲಂಕಾ ಜತೆ ಹಂಚಿಕೊಂಡ ಕಿವೀಸ್

ಭಾರತ-ನ್ಯೂಜಿಲೆಂಡ್ ಟಿ20 ಸರಣಿ ಫಲಿತಾಂಶ
1ನೇ ಟಿ20 = ಭಾರತಕ್ಕೆ 6 ವಿಕೆಟ್ ಗೆಲುವು
2ನೇ ಟಿ20 = ಭಾರತಕ್ಕೆ 7 ವಿಕೆಟ್ ಗೆಲುವು
3ನೇ ಟಿ20 =ಪಂದ್ಯ ಟೈ(ಭಾರತಕ್ಕೆ ಸೂಪರ್ ಓವರ್ ಗೆಲುವು)
4ನೇ ಟಿ20 =ಪಂದ್ಯ ಟೈ(ಭಾರತಕ್ಕೆ ಸೂಪರ್ ಓವರ್ ಗೆಲುವು)
5ನೇ ಟಿ20 = ಭಾರತಕ್ಕೆ 7 ರನ್ ಗೆಲುವು