ಟೀಂ ಇಂಡಿಯಾ ಟೆಸ್ಟ್ ನಾಯಕತ್ವದಿಂದ ಕಳೆಗಿಳಿದ ಬಳಿಕ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಪ್ರದರ್ಶನ ಮಂಕಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು: ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕನಾಗಿದ್ದಾಗ ಟೀಂ ಇಂಡಿಯಾ ಪರ ರನ್, ಸೆಂಚುರಿ, ಡಬಲ್ ಸೆಂಚುರಿ, ಹಾಫ್‌ ಸೆಂಚುರಿ, ಸೇರಿದಂತೆ ಎಲ್ಲದರೂ ಕೊಹ್ಲಿಯೇ ಮುಂದಿದ್ರು. ಆದ್ರೆ, ಯಾವಾಗ ನಾಯಕನ ಸ್ಥಾನಕ್ಕೆ ಗುಡ್‌ಬೈ ಹೇಳಿದ್ರೋ, ಆಗಿನಿಂದ ಡಲ್ ಆಗಿದ್ದಾರೆ. ಅದಕ್ಕೆ ಈ ಅಂಕಿಅಂಶಗಳೇ ಸಾಕ್ಷಿಯಾಗಿವೆ. 

ಕ್ಯಾಪ್ಟನ್ಸಿಗೆ ಗುಡ್‌ಬೈ ಹೇಳಿದ್ಮೇಲೆ ಕಿಚ್ಚು ಕಳೆದುಕೊಂಡ್ರಾ? 

ಕೆಲ ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ಮೂರೂ ಫಾರ್ಮ್ಯಾಟ್‌ನಲ್ಲೂ ಫಿಫ್ಟಿ ಪ್ಲಸ್ ಆವರೇಜ್ ಮೆಂಟೇನ್ ಮಾಡಿದ್ರು. ಕೊಹ್ಲಿನ ಬಿಟ್ರೆ, ಬೇರೆ ಯಾವ ಬ್ಯಾಟರ್‌ ಈ ಸಾಧನೆ ಮಾಡಿರಲಿಲ್ಲ. ಆದ್ರೆ, ಟೆಸ್ಟ್ ಕ್ರಿಕೆಟ್ನಲ್ಲಿ ಕಿಂಗ್ ಕೊಹ್ಲಿ ತಮ್ಮ ಖದರ್ ಕಳೆದುಕೊಂಡಿದ್ದಾರೆ. 50 ಪ್ಲಸ್ ಅವರೇಜ್‌ ಪಟ್ಟಿಯಿಂದ ಔಟಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಅವ್ರ ಗ್ರಾಫ್ ಕುಸಿಯುತ್ತಿದೆ. ಆದ್ರೆ, ಕೊಹ್ಲಿಯ ಡೌನ್‌ ಫಾಲ್‌ಗೆ ಕ್ಯಾಪ್ಸನ್ಸಿ ಕಳೆದುಕೊಂಡಿದ್ದೇ ಕಾರಣನಾ ಅನ್ನೋ ಪ್ರಶ್ನೆ ಮೂಡಿದೆ. 

ಈ ಬಾರಿಯ ಆಸೀಸ್ ಟೂರ್ ಕೊಹ್ಲಿಗೆ ಬಿಗ್ ಚಾಲೆಂಜ್: ಮತ್ತೊಮ್ಮೆ ಅಗ್ನಿಪರೀಕ್ಷೆಯಲ್ಲಿ ಗೆದ್ದು ಬರ್ತಾರಾ ವಿರಾಟ್?

ಯೆಸ್, ಟೆಸ್ಟ್ ಫಾರ್ಮೆಟ್ನಲ್ಲಿ ಟೀಂ ಇಂಡಿಯಾದ ಮೋಸ್ಟ್ ಸಕ್ಸಸ್ಫುಲ್ ಕ್ಯಾಪ್ಟನ್ ಅಂದ್ರೆ, ಅದು ಕೊಹ್ಲಿ. ಟೆಸ್ಟ್ ತಂಡದ ನಾಯಕನಾಗಿ ಕೊಹ್ಲಿ ಆಟಗಾರರ ಮೈಂಡ್ಸೆಟ್ಟನ್ನೇ ಚೇಂಜ್ ಮಾಡಿದ್ರು. ತಂಡದ ಅಪ್ರೋಚನ್ನೇ ಬದಲಾಯಿಸಿದ್ರು. ಅಗ್ರೆಸ್ಸಿವ್ ಕ್ಯಾಪ್ಟನ್ಸಿಯ ಮೂಲಕ ದೇಶ-ವಿದೇಶಗಳಲ್ಲಿ ಭಾರತಕ್ಕೆ ಸರಣಿ ಗೆದ್ದುಕೊಟ್ಟಿದ್ರು. ಕೇವಲ ನಾಯಕತ್ವ ಅಲ್ಲ. ಬ್ಯಾಟಿಂಗ್ನಲ್ಲೂ ಅಕ್ಷರಶ: ಅಬ್ಬರಿಸುತ್ತಿದ್ರು. ತಂಡವನ್ನ ಮುಂದೆ ನಿಂತು ಮುನ್ನಡೆಸುತ್ತಿದ್ರು.

ಕೊಹ್ಲಿ ಟೆಸ್ಟ್ ತಂಡದ ನಾಯಕನಾಗಿದ್ದಾಗ ಟೀಂ ಇಂಡಿಯಾ ಪರ ರನ್, ಸೆಂಚುರಿ, ಡಬಲ್ ಸೆಂಚುರಿ, ಹಾಫ್ಸೆಂಚುರಿ, ಸರಾಸರಿ ಸೇರಿದಂತೆ ಎಲ್ಲದರೂ ಕೊಹ್ಲಿಯೇ ಮುಂದಿದ್ರು. ಆದ್ರೆ, ಯಾವಾಗ ನಾಯಕನ ಸ್ಥಾನಕ್ಕೆ ಗುಡ್‌ಬೈ ಹೇಳಿದ್ರೋ, ಆಗಿನಿಂದ ಡಲ್ ಆಗಿದ್ದಾರೆ. 

ಸ್ಮೃತಿ ಮಂಧನಾ ಸೆಂಚುರಿ: ಕಿವೀಸ್‌ ಮಹಿಳೆಯರ ವಿರುದ್ಧ ಏಕದಿನ ಸರಣಿ ಗೆದ್ದ ಭಾರತ

ನಾಯಕನಾಗಿ ಕೊಹ್ಲಿ 113 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಇದ್ರಲ್ಲಿ 54.80ರ ಸರಾಸರಿಯಲ್ಲಿ 5,864 ರನ್ಗಳಿಸಿದ್ದಾರೆ. 20 ಶತಕ ಮತ್ತು 18 ಅರ್ಧಶತಕ ಸಿಡಿಸಿದ್ದಾರೆ. 

ಆದ್ರೆ, ನಾಯಕನ ಸ್ಥಾನದಿಂದ ಕೆಳಗಿಳಿದ ಮೇಲೆ, 31 ಇನ್ನಿಂಗ್ಸ್ಗಳಲ್ಲಿ ಆಡಿದ್ದು, ಕೇವಲ 37ರ ಸರಾಸರಿಯಲ್ಲಿ 1,073 ರನ್‌ ಗಳಿಸಿದ್ದಾರೆ. ಕೇವಲ ಎರಡು ಶತಕ ಮತ್ತು ಮೂರು ಅರ್ಧಶತಕ ಬಾರಿಸಿದ್ದಾರೆ. 

600ನೇ ಇನ್ನಿಂಗ್ಸ್‌ನಲ್ಲಿ ಬರುತ್ತಾ ಜಬರ್ದಸ್ತ್ ಸೆಂಚುರಿ?

ವಿರಾಟ್ ಕೊಹ್ಲಿ ಹೊಸ ವಿಶ್ವ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಅಂದ್ರೆ, ನ್ಯೂಝಿಲೆಂಡ್ ವಿರುದ್ಧದ 3ನೇ ಟೆಸ್ಟ್ನಲ್ಲಿ ಕೊಹ್ಲಿ ಬ್ಯಾಟಿಂಗ್ ಮಾಡಿದ್ರೆ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 600ನೇ ಇನ್ನಿಂಗ್ಸ್ ಪೂರೈಸಲಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೂರನೇ ಆಟಗಾರ ಅನ್ನೋ ದಾಖಲೆಗೆ ಪಾತ್ರರಾಗಲಿದ್ದಾರೆ. ಸಚಿನ್ 782 ಮತ್ತು ತೆಂಡುಲ್ಕರ್ ಮತ್ತು ರಾಹುಲ್ ದ್ರಾವಿಡ್ 605 ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. 

ಅದೇನೆ ಇರಲಿ, 600ನೇ ಇನ್ನಿಂಗ್ಸ್ನಲ್ಲಿ ಕೊಹ್ಲಿ ಆರ್ಭಟಿಸಲಿ. ಶತಕದ ಬರದಿಂದ ಹೊರಬರಲಿ ಅನ್ನೋದೆ ಅಭಿಮಾನಿಗಳ ಆಶಯ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್