ಮುಂಬೈ(ಡಿ.31): ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ 2019ರ ವರ್ಷವನ್ನು ಅದ್ಧೂರಿಯಾಗಿ ಆರಂಭಿಸಿದ್ದರು. ಆದರೆ ಅಂತ್ಯದಲ್ಲಿ ಗಾಯಗೊಂಡು ಅನಿವಾರ್ಯವಾಗಿ ತಂಡದಿಂದ ಹೊರಗುಳಿಯಬೇಕಾಯಿತು. ಆದರೆ ಬುಮ್ರಾ ಪಾಲಿಗೆ 2019 ಸ್ಮರಣೀಯವಾಗಿತ್ತು. 2019ರ ಕೊನೆಯದಿನ(ಡಿ.31) ಬುಮ್ರಾ ಸ್ಮರಣೀಯ ನೆನಪುಗಳ ಜೊತೆ 2020ರ ರೆಸಲ್ಯೂಶನ್ ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ: ವಿರಾಟ್-ಅನುಷ್ಕಾ ಜೋಡಿಯಿಂದ ಹೊಸ ವರ್ಷಕ್ಕೆ ಅಡ್ವಾನ್ಸ್ ವಿಶ್!

ಸಾಮಾಜಿಕ ಜಾಲತಾಣದಲ್ಲಿ ಬುಮ್ರಾ 2019ರ ಐತಿಹಾಸಿಕ ಮೈಲಿಗಲ್ಲು ನೆನೆಪಿಸಿದ್ದಾರೆ. ಟೆಸ್ಟ್ ಸರಣಿ ಗೆಲುವು, ಬೌಲಿಂಗ್ ರ್ಯಾಕಿಂಗ್, ಐಪಿಎಲ್ ಟ್ರೋಫಿ ಸೇರಿದಂತೆ ಅದ್ಭುತ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಇದರ ಜೊತೆ 2020ರಲ್ಲೂ ಕಠಿಣ ಅಭ್ಯಾಸ, ನಿರಂತರ ಪ್ರಯತ್ನ ಮುಂದುವರಿಯಲಿದೆ. 2020ರಲ್ಲಿ ಶಕ್ತಿ ಮೀರಿ ಪ್ರಯತ್ನ ಮಾಡಲಿದ್ದೇನೆ ಎಂದು ಬುಮ್ರಾ ಹೇಳಿದ್ದಾರೆ.

 

ಇದನ್ನೂ ಓದಿ:  ಇತಿಹಾಸ ಸೃಷ್ಟಿಸಿದ ನಾಯಕ; 10 ವರ್ಷದಲ್ಲಿ ಕೊಹ್ಲಿ ಹೆಜ್ಜೆ ಗುರುತು!

2019ರ ವಿಶ್ವಕಪ್ ಟೂರ್ನಿಲ್ಲಿ ಬುಮ್ರಾ 18 ವಿಕೆಟ್ ಕಬಳಿಸೋ ಮೂಲಕ ಭಾರತದ ಗರಿಷ್ಠ ವಿಕೆಟ್ ಟೀಕರ್ ಹಾಗೂ ಒಟ್ಟಾರೆ 5ನೇ ಬೌಲರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸೋ ಮೂಲಕ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದ 3ನೇ ಭಾರತೀಯ ಬೌಲರ್ ಅನ್ನೋ ದಾಖಲೆ ಬರೆದಿದ್ದಾರೆ. ಇದೇ ರೀತಿ ಹಲವು ದಾಖಲೆಗಳನ್ನು ಬುಮ್ರಾ ಬರೆದಿದ್ದಾರೆ.

2020ರಲ್ಲಿ ಬುಮ್ರಾ ಮತ್ತೆ ಮಿಂಚಲು ರೆಡಿಯಾಗಿದ್ದಾರೆ. ಇಂಜುರಿಯಿಂದ ಚೇತರಿಸಿಕೊಂಡಿರುವ ಬುಮ್ರಾ, ಹೊಸ ವರ್ಷದಲ್ಲಿ ಮತ್ತೆ ಮಾರಕ ದಾಳಿ ಮೂಲಕ ಎದುರಾಳಿಗಳ ವಿಕೆಟ್ ಕಬಳಿಸಲು ರೆಡಿಯಾಗಿದ್ದಾರೆ.