ನವ​ದೆ​ಹ​ಲಿ(ಜೂ.08): ಭಾರತ ಕ್ರಿಕೆಟ್‌ ತಂಡ​ದ ನಾಯಕ ವಿರಾಟ್ ಕೊಹ್ಲಿ ಸಾಮಾ​ಜಿಕ ತಾಣಗಳಲ್ಲಿ ಒಂದಾದ ಟಿಕ್‌ ಟಾಕ್‌ನಲ್ಲಿ ಖಾತೆ ತೆರೆ​ದಿ​ದ್ದಾರೆ ಎಂದು ಕೆಲ ಮಾಧ್ಯ​ಮ​ಗಳು ಸುದ್ದಿ ಪ್ರಕ​ಟಿ​ಸಿವೆ. ಕ್ಯಾಪ್ಟನ್ ಕೊಹ್ಲಿ ಭಾನುವಾರವಷ್ಟೇ(ಜೂ.07) ತಾವು ಓಡುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಅಭಿಮಾನಿಗಳಿಗೆ ಇದಕ್ಕೊಂದು ಶೀರ್ಷಿಕೆ ಕೊಡಿ ಎಂದು ಬರೆದುಕೊಂಡಿದ್ದರು.

ಕೊಹ್ಲಿಯ ಇನ್‌ಸ್ಟಾಗ್ರಾಂ ವಿಡಿಯೋಗೆ ಕಾಮೆಂಟ್‌ ಮಾಡಿ​ರುವ ಆಸ್ಪ್ರೇ​ಲಿಯಾ ಕ್ರಿಕೆ​ಟಿಗ ಡೇವಿಡ್‌ ವಾರ್ನರ್‌, ಟಿಕ್‌ ಟಾಕ್‌ ಪ್ರವೇ​ಶಿ​ಸಿ​ದ್ದೀರಾ ಎಂದು ಪ್ರಶ್ನಿ​ಸಿ​ದ್ದಾರೆ. ಇನ್ನು ಇಂಗ್ಲೆಂಡ್ ಮಾಜಿ ಕ್ರಿಕೆಟ್ ಪೀಟರ್ಸನ್ ಕೂಡಾ ಇದೇ ಪ್ರಶ್ನೆಯನ್ನು ಕೇಳಿದ್ದಾರೆ. ಇತ್ತೀ​ಚೆ​ಗಷ್ಟೇ, ಆನ್‌ಲೈನ್‌ ಸಂವಾ​ದವೊಂದ​ರಲ್ಲಿ ‘ವಾರ್ನರ್‌ ತಮಗೆ ಟಿಕ್‌ ಟಾಕ್‌ ವಿಡಿಯೋ ಮಾಡು​ವಂತೆ ಪ್ರಾಣ ತಿನ್ನು​ತ್ತಿ​ದ್ದಾರೆ’ ಎಂದು ಕೊಹ್ಲಿ ಹೇಳಿ​ಕೊಂಡಿ​ದ್ದರು.

 
 
 
 
 
 
 
 
 
 
 
 
 

Caption this! 💭

A post shared by Virat Kohli (@virat.kohli) on Jun 6, 2020 at 9:30pm PDT

ದುಬೈನಲ್ಲಿ IPL 2020; ಬಿಸಿಸಿಐಗೆ ಆಯೋಜನೆ ಆಫರ್ ಖಚಿತ ಪಡಿಸಿದ UAE!

ಕೊರೋನಾ ವೈರಸ್‌ನಿಂದಾಗಿ ಮಾರ್ಚ್‌ನಿಂದ ಎಲ್ಲಾ ಕ್ರೀಡಾಚಟುವಟಿಕೆಗಳು ಸ್ತಬ್ಧವಾಗಿವೆ. ಇದಕ್ಕೆ ಕ್ರಿಕೆಟ್ ಕೂಡಾ ಹೊರತಾಗಿಲ್ಲ. ಇಂತಹ ಬಿಡುವಿನ ಸಂದರ್ಭವನ್ನು ಆಸೀಸ್ ಆರಂಭಿಕ ಬ್ಯಾಟ್ಸ್‌ಮನ್ ಟಿಕ್ ಟಾಕ್ ವಿಡಿಯೋ ಮಾಡಿಕೊಂಡು ಟೈಂಪಾಸ್ ಮಾಡುತ್ತಿದ್ದಾರೆ. ಈಗಾಗಲೇ ಹಿಂದಿ, ತೆಲುಗು ಹಾಡುಗಳಿಗೆ ತಮ್ಮ ಫ್ಯಾಮಿಲಿ ಜತೆ ಸ್ಟೆಪ್ ಹಾಕಿದ್ದು, ಆ ವಿಡಿಯೋಗಳೆಲ್ಲ ವೈರಲ್ ಆಗಿವೆ.  

ಇನ್‌ಸ್ಟಾಗ್ರಾಂನಿಂದ ಆದಾಯ: ಕಿಂಗ್ ಕೊಹ್ಲಿಗೆ ಆರನೇ ಸ್ಥಾನ

ಲಂಡನ್‌: ಕೊರೋನಾ ಲಾಕ್‌ಡೌನ್‌ ಅವಧಿಯಲ್ಲಿ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಿಂದ ಅತ್ಯಧಿಕ ಆದಾಯ ಗಳಿಸಿದ ಅಥ್ಲೀಟ್‌ಗಳ ಅಗ್ರ 10ರ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಸ್ಥಾನ ಪಡೆದಿದ್ದಾರೆ. 

ಕೊಹ್ಲಿ 3.64 ಕೋಟಿ ರುಪಾಯಿ ಆದಾಯ ಸಂಪಾದಿಸುವ ಮೂಲಕ 6ನೇ ಸ್ಥಾನ ಪಡೆದಿದ್ದಾರೆ. ಮಾ.12 ರಿಂದ ಮೇ.14 ರವರೆಗಿನ ಅವಧಿಯಲ್ಲಿ ಈ ಆದಾಯ ಗಳಿಕೆಯಾಗಿದೆ. ಈ ಪಟ್ಟಿಯಲ್ಲಿ ಪೋರ್ಚುಗೀಸ್‌ ಫುಟ್ಬಾಲಿಗ ಕ್ರಿಸ್ಟಿಯಾನೊ ರೊನಾಲ್ಡೊ (17.27 ಕೋಟಿ ರುಪಾಯಿ) ಅಗ್ರ ಸ್ಥಾನ ಪಡೆದಿದ್ದರೇ, ಲಿಯೊನೆಲ್‌ ಮೆಸ್ಸಿ (11.51 ಕೋಟಿ ರುಪಾಯಿ) 2ನೇ, ನೇಮರ್‌ (10.55 ಕೋಟಿ ರುಪಾಯಿ) 3ನೇ ಸ್ಥಾನದಲ್ಲಿದ್ದಾರೆ.