ನವದೆಹಲಿ(ಜೂ.05): 2009ರಿಂದ 2011ರವರೆಗೆ ಎರಡು ವರ್ಷಗಳ ಕಾಲ ನಾನು ಪ್ರತಿ ದಿನ ಮಾನಸಿಕ ಒತ್ತಡದಿಂದ ಬಳಲುತ್ತಿದ್ದೆ. ಆಗ ಆತ್ಮಹತ್ಯೆಯ ಆಲೋಚನೆಗಳು ಬರುತ್ತಿದ್ದವು ಎಂದು ಭಾರತದ ಕ್ರಿಕೆಟಿಗ ರಾಬಿನ್‌ ಉತ್ತಪ್ಪ ಗುರುವಾರ ಹೇಳಿಕೊಂಡಿದ್ದಾರೆ. 

ದ ರಾಜಸ್ಥಾನ್‌ ಫೌಂಡೇಶನ್‌ ಆಯೋಜಿಸಿದ್ದ ಮನಸ್ಸು, ದೇಹ ಮತ್ತು ಆತ್ಮ ಎಂಬ ಆನ್‌ಲೈನ್‌ ಕಾರ‍್ಯಕ್ರಮದಲ್ಲಿ ಭಾಗವಹಿಸಿದ ವೇಳೆ ರಾಬಿನ್‌ ತಾವು ಅನುಭವಿಸಿದ ಖಿನ್ನತೆಯ ಬಗ್ಗೆ ಹೇಳಿದ್ದಾರೆ. 2007ರ ಟಿ20 ವಿಶ್ವಕಪ್‌ ಗೆದ್ದ ಭಾರತ ತಂಡದಲ್ಲಿದ್ದ ರಾಬಿನ್‌ ತಮ್ಮ ಕಹಿ ನೆನಪನ್ನು ಸ್ಮರಿಸಿಕೊಂಡಿದ್ದಾರೆ.

ಅದೇನೋ ಗೊತ್ತಿಲ್ಲ, ನೆಟ್ಸ್‌ನಲ್ಲಿ ಗಂಟೆಗಟ್ಟಲೇ ಅಭ್ಯಾಸ ನಡೆಸುತ್ತೇನೆ. ಆದರೂ ಕೆಲವೊಮ್ಮೆ ರನ್‌ ಗಳಿಸಲು ಯಶಸ್ವಿಯಾಗುತ್ತಿಲ್ಲ. ಒಂದು ದಿನ ಹೀಗೆ ಸುಮ್ಮನೆ ಕುಳಿತುಕೊಂಡಿದ್ದೆ, ಇದಕ್ಕಿದ್ದಂತೆ ಮನೆಯ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡು ಬಿಡಲೇನು ಎನಿಸಿಬಿಟ್ಟಿತು. ಆದರೆ ಆ ಕ್ಷಣವನ್ನು ತಡೆಹಿಡಿದೆ ಎಂದು ಭಾರತ ಪರ 46 ಏಕದಿನ ಹಾಗೂ 13 ಟಿ20 ಪಂದ್ಯಗಳನ್ನಾಡಿದ ಉತ್ತಪ್ಪ ಹೇಳಿದ್ದಾರೆ. 2019ರ ಡಿಸೆಂಬರ್‌ನಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಉತ್ತಪ್ಪ 3 ಕೋಟಿ ರುಪಾಯಿಗೆ ರಾಜಸ್ಥಾನ ರಾಯಲ್ಸ್ ತಂಡವನ್ನು ಕೂಡಿಕೊಂಡಿದ್ದಾರೆ.

IPL ಹರಾಜು: ಕನ್ನಡಿಗ ರಾಬಿನ್ ಉತ್ತಪ್ಪ 3 ಕೋಟಿಗೆ ಸೇಲ್!

2007ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉತ್ತಪ್ಪ, 2014-15ನೇ ಸಾಲಿನ ರಣಜಿ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಗರಿಷ್ಠ ರನ್ ಸ್ಕೋರರ್‌ ಆಗಿ ಹೊರಹೊಮ್ಮಿದ್ದರು. ಆದರೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಉತ್ತಪ್ಪ ಯಶಸ್ವಿಯಾಗಲಿಲ್ಲ. 2015ರ ಬಳಿಕ ಉತ್ತಪ್ಪ ಟೀಂ ಇಂಡಿಯಾದಲ್ಲಿ ಸ್ಥಾನಗಿಟ್ಟಿಸಿಕೊಳ್ಳಲು ವಿಫಲರಾಗಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ವಿದೇಶಿ ಟಿ20ಗೆ ಅನು​ಮ​ತಿ ಕೋರಿದ್ದರು ರಾಬಿನ್‌ ಉತ್ತ​ಪ್ಪ

ಹೌದು ವಿದೇಶಿ ಟಿ20 ಲೀಗ್‌ಗಳಲ್ಲಿ ಆಡಲು ಅನು​ಮತಿ ನೀಡು​ವಂತೆ ಭಾರ​ತೀ​ಯ ಕ್ರಿಕೆ​ಟಿ​ಗ​ರಿಂದ ಬಿಸಿ​ಸಿಐ ಮೇಲೆ ಒತ್ತಡ ಹೆಚ್ಚಾ​ಗು​ತ್ತಿದೆ. ಹಿರಿಯ ಆಟ​ಗಾರ ರಾಬಿನ್‌ ಉತ್ತಪ್ಪ, ವಿದೇಶಿ ಲೀಗ್‌ನಲ್ಲಿ ಆಡಲು ಬಿಸಿ​ಸಿಐ ಒಪ್ಪಿಗೆ ನೀಡ​ಬೇಕು ಎಂದು ಬಿಸಿ​ಸಿ​ಐಗೆ ಮನವಿ ಮಾಡಿ​ದ್ದರು. 

ಬಿಬಿಸಿಗೆ ನೀಡಿ​ರು​ವ ಸಂದರ್ಶನದಲ್ಲಿ ಉತ್ತಪ್ಪ, ‘ಕ್ರಿಕೆಟ್‌ ಆಟದಲ್ಲಿ ಎಷ್ಟೇ ಕಲಿ​ತರೂ ಹೊಸ​ದಾಗಿ ಕಲಿ​ಯಲು ಇನ್ನೂ ಸಾಕಷ್ಟು ವಿಚಾರಗಳು ಇರ​ಲಿವೆ. ಬೇರೆ ಬೇರೆ ದೇಶ​ಗಳ ಲೀಗ್‌ಗಳಲ್ಲಿ ಆಡಿ​ದರೆ ವಿಭಿನ್ನ ಅನು​ಭವ ಸಿಗ​ಲಿದೆ. ಬಿಸಿ​ಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಈ ಬಗ್ಗೆ ಚಿಂತನೆ ನಡೆ​ಸ​ಬೇ​ಕು’ ಎಂದಿದ್ದರು.

#NewsIn100Seconds: ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್‌

"