ಅಹಮದಾಬಾದ್‌ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಶತಕದತ್ತ ದಾಪುಗಾಲುಕ್ರಿಕೆಟ್ ದಿಗ್ಗಜ ಲಾರಾ ದಾಖಲೆ ಮುರಿದ ಕಿಂಗ್ ಕೊಹ್ಲಿಆಸ್ಟ್ರೇಲಿಯಾ ಎದುರು ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಕೊಹ್ಲಿಗೀಗ ಎರಡನೇ ಸ್ಥಾನ

ಅಹಮದಾಬಾದ್‌(ಮಾ.12): ಭಾರತ ಕ್ರಿಕೆಟ್ ತಂಡದ ಸ್ಟಾರ್ ಕ್ರಿಕೆಟಿಗ ವಿರಾಟ್‌ ಕೊಹ್ಲಿ, ಇದೀಗ ಆಸ್ಟ್ರೇಲಿಯಾ ಎದುರಿನ ಅಹಮದಾಬಾದ್‌ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕಥೆ ಬ್ರಿಯನ್ ಲಾರಾ ಅವರ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಹೌದು, ಇದೀಗ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ಎದುರು ಎರಡನೇ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಾಟದಲ್ಲಿ ವಿರಾಟ್ ಕೊಹ್ಲಿ ಶತಕದತ್ತ ದಾಪುಗಾಲಿಡುತ್ತಿದ್ದಾರೆ. ಕಳೆದ 2022ರ ಜನವರಿಯಲ್ಲಿ ಕೊನೆಯ ಬಾರಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅರ್ಧಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ, ಇದೀಗ ಮೂರನೇ ದಿನದಾಟದ ಕೊನೆಯಲ್ಲಿ ಟೆಸ್ಟ್ ಅರ್ಧಶತಕದ ಬರ ನೀಗಿಸಿಕೊಂಡಿದ್ದರು. ಮೂರನೇ ದಿನದಾಟದಂತ್ಯದ ವೇಳೆಗೆ ವಿರಾಟ್ ಕೊಹ್ಲಿ 128 ಎಸೆತಗಳನ್ನು ಎದುರಿಸಿ ಅಜೇಯ 59 ರನ್ ಬಾರಿಸಿದ್ದರು. 

14 ತಿಂಗಳ ಬಳಿ​ಕ ಕೊಹ್ಲಿ ಅರ್ಧ​ಶ​ತ​ಕ!

ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆ​ಟ್‌​ನಲ್ಲಿ 14 ತಿಂಗಳ ಬಳಿಕ ಅರ್ಧ​ಶ​ತಕ ಬಾರಿ​ಸಿ​ದರು. 2022ರ ಜನ​ವ​ರಿ​ಯಲ್ಲಿ ದಕ್ಷಿಣ ಆಫ್ರಿಕಾ ವಿರು​ದ್ಧ ಕೊನೆ ಬಾರಿ ಕೊಹ್ಲಿ ಅರ್ಧ​ಶ​ತಕ ಬಾರಿ​ಸಿ​ದರು. ಭಾರ​ತ​ದಲ್ಲಿ 50ನೇ ಟೆಸ್ಟ್‌ ಪಂದ್ಯ​ವಾ​ಡು​ತ್ತಿ​ರುವ ಕೊಹ್ಲಿ ಒಟ್ಟಾರೆ ಟೆಸ್ಟ್‌ ಕ್ರಿಕೆ​ಟ್‌​ನಲ್ಲಿ 29 ಅರ್ಧ​ಶ​ತಕ, 27 ಶತಕ ಬಾರಿ​ಸಿ​ದ್ದಾರೆ.

ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿಗೆ ಆಸ್ಟ್ರೇಲಿಯಾ ಎದುರು ಬ್ಯಾಟಿಂಗ್ ಮಾಡುವುದೆಂದರೆ ಒಂದು ರೀತಿ ಅಚ್ಚುಮೆಚ್ಚು ಎನ್ನುವುದನ್ನು ಈಗಾಗಲೇ ಹಲವು ಬಾರಿ ಸಾಬೀತು ಮಾಡಿ ತೋರಿಸಿದ್ದಾರೆ. ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ಎದುರು ಮೂರು ಮಾದರಿಯ ಕ್ರಿಕೆಟ್‌ನಲ್ಲಿ 89 ಪಂದ್ಯಗಳ 104 ಇನಿಂಗ್ಸ್‌ಗಳಿಂದ 50.84ರ ಬ್ಯಾಟಿಂಗ್ ಸರಾಸರಿಯಲ್ಲಿ 4,729 ರನ್ ಬಾರಿಸಿದ್ದಾರೆ. ಇದರಲ್ಲಿ 15 ಶತಕ ಹಾಗೂ 24 ಅರ್ಧಶತಕಗಳು ಸೇರಿವೆ.

Ahmedabad Test ಶುಭ್‌ಮನ್‌ ಗಿಲ್ ಸೆಂಚುರಿ, ಕೊಹ್ಲಿ ಫಿಫ್ಟಿ, ಆಸೀಸ್‌ಗೆ ಟೀಂ ಇಂಡಿಯಾ ತಿರುಗೇಟು..!

ಇನ್ನೊಂದೆಡೆ ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಬ್ರಿಯನ್ ಲಾರಾ, ಆಸ್ಟ್ರೇಲಿಯಾ ಎದುರು 82 ಪಂದ್ಯಗಳ 108 ಇನಿಂಗ್ಸ್‌ಗಳನ್ನಾಡಿ 4,714 ರನ್‌ ಬಾರಿಸಿದ್ದರು. ಇದರಲ್ಲಿ 12 ಶತಕ ಹಾಗೂ 26 ಅರ್ಧಶತಕಗಳು ಸೇರಿವೆ. ಇದೀಗ ವಿರಾಟ್ ಕೊಹ್ಲಿ, ಲಾರಾ ಅವರನ್ನು ಹಿಂದಿಕ್ಕಿ ಆಸೀಸ್‌ ಎದುರು ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.

ಇನ್ನು ಆಸ್ಟ್ರೇಲಿಯಾ ಎದುರು ಗರಿಷ್ಠ ರನ್‌ ಬಾರಿಸಿದ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದೆ. ಸಚಿನ್ ತೆಂಡುಲ್ಕರ್, ಆಸ್ಟ್ರೇಲಿಯಾ ಎದುರು 110 ಪಂದ್ಯಗಳ 144 ಇನಿಂಗ್ಸ್‌ಗಳಿಂದ 49.68ರ ಬ್ಯಾಟಿಂಗ್ ಸರಾಸರಿಯಲ್ಲಿ 6,707 ರನ್‌ ಬಾರಿಸಿದ್ದಾರೆ. ಇದರಲ್ಲಿ 20 ಶತಕ ಹಾಗೂ 31 ಅರ್ಧಶತಕಗಳು ಸೇರಿವೆ.

5ನೇ ಬ್ಯಾಟ​ರ್‌: ವಿರಾಟ್‌ ತವ​ರಿ​ನ ಟೆಸ್ಟ್‌​ನಲ್ಲಿ 4000 ರನ್‌ ಪೂರ್ತಿ​ಗೊ​ಳಿ​ಸಿದ ಭಾರ​ತದ 5ನೇ ಬ್ಯಾಟರ್‌ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಮೊದಲು ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಸುನಿಲ್ ಗವಾಸ್ಕರ್ ಹಾಗೂ ವಿರೇಂದ್ರ ಸೆಹ್ವಾಗ್, ತವರಿನಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 4000+ ರನ್ ಬಾರಿಸಿದ್ದಾರೆ.

ಬ್ಯಾಟ​ರ್‌​ಗ​ಳಿಗೆ ನೆರ​ವಾ​ಗ​ಲೆಂದೇ ತಯಾ​ರಿ​ಸ​ಲಾದ ಪಿಚ್‌​ನಲ್ಲಿ ಆಸ್ಪ್ರೇ​ಲಿಯಾ ಬಳಿಕ ಭಾರತ ಕೂಡಾ ಬ್ಯಾಟಿಂಗ್‌ನಲ್ಲಿ ಪ್ರಾಬಲ್ಯ ಸಾಧಿ​ಸಿದ್ದು, ನಿರ್ಣಾ​ಯಕ 4ನೇ ಟೆಸ್ಟ್‌ ಪಂದ್ಯ​ದಲ್ಲಿ ಪ್ರವಾಸಿ ತಂಡಕ್ಕೆ ದಿಟ್ಟತಿರು​ಗೇಟು ನೀಡಿದೆ. ಅಹ​ಮ​ದಾ​ಬಾ​ದ್‌ನ ನರೇಂದ್ರ ಮೋದಿ ಕ್ರೀಡಾಂಗ​ಣ​ದಲ್ಲಿ ನಡೆ​ಯು​ತ್ತಿ​ರುವ ಪಂದ್ಯ​ದಲ್ಲಿ ಆಸೀ​ಸ್‌ನ 480 ರನ್‌ಗೆ ಉತ್ತ​ರ​ವಾಗಿ ಟೀಂ ಇಂಡಿಯಾ 3ನೇ ದಿನ​ದಂತ್ಯಕ್ಕೆ 3 ವಿಕೆ​ಟ್‌ಗೆ 289 ರನ್‌ ಕಲೆ​ಹಾ​ಕಿ​ದ್ದು, ಇನ್ನೂ 191 ರನ್‌ ಹಿನ್ನ​ಡೆ​ಯ​ಲ್ಲಿದೆ.