Asianet Suvarna News Asianet Suvarna News

IPL 2023 ಜೈಪು​ರ ಕ್ರೀಡಾಂಗ​ಣ​ದ ವಿಐಪಿ ಸ್ಟ್ಯಾಂಡ್‌ಗೆ ಬೀಗ ಜಡಿದ ಕ್ರೀಡಾ ಸಚಿವ!

ಹೈಡ್ರಾಮಾಕ್ಕೆ ಸಾಕ್ಷಿಯಾದ ಜೈಪುರ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂ
RR vs LSG ಪಂದ್ಯಕ್ಕೆ ಕೆಲ ಗಂಟೆಗಳು ಬಾಕಿ ಇದ್ದಾಗ ವಿಐಪಿ ಸ್ಟ್ಯಾಂಡ್‌ಗೆ ಬೀಗ
ಜೈಪುರ ರಾಜ್ಯ ಕ್ರೀಡಾ ಸಚಿವರಿಂದ ಬೀಗ ಜಡಿದ ಘಟನೆ

VIP stand got sealed at Jaipur SMS stadium a few hours ahead of RR vs LSG IPL match kvn
Author
First Published Apr 21, 2023, 12:24 PM IST | Last Updated Apr 21, 2023, 12:24 PM IST

ಜೈಪು​ರ(ಏ.21): 4 ವರ್ಷಗಳ ಬಳಿಕ ಐಪಿ​ಎಲ್‌ ಪಂದ್ಯಕ್ಕೆ ಆತಿಥ್ಯ ವಹಿ​ಸಿದ್ದ ಜೈಪು​ರದ ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಬುಧ​ವಾ​ರದ ರಾಜ​ಸ್ಥಾ​ನ ಹಾಗೂ ಲಖನೌ ಪಂದ್ಯಕ್ಕೂ ಮುನ್ನ ಹೈಡ್ರಾಮಾ ನಡೆ​ದಿದ್ದು, ಪಂದ್ಯಕ್ಕೆ ಕೆಲ ಗಂಟೆಗಳು ಬಾಕಿ ಇದ್ದಾಗ ರಾಜ್ಯ ಕ್ರೀಡಾ ಸಚಿವ ಅಶೋಕ್‌ ಚಂದ್ನಾ ವಿಐಪಿ ಸ್ಟ್ಯಾಂಡ್‌ಗೆ ಬೀಗ ಜಡಿದ ಘಟನೆ ನಡೆ​ದಿದೆ. 

ಸರ್ಕಾರದ ಒಪ್ಪಿಗೆ ಇಲ್ಲದೆ ತಾತ್ಕಾಲಿಕವಾಗಿ ವಿಐಪಿ ಬಾಕ್ಸ್‌ ನಿರ್ಮಿಸಲಾಗಿದೆ ಎಂದು ಆಕ್ರೋಶ ವ್ಯಕ್ತ​ಪ​ಡಿ​ಸಿ, ಸ್ಟ್ಯಾಂಡ್‌ಗೆ ಬೀಗ ಜಡಿ​ದಿ​ದ್ದಾರೆ. ಕ್ರೀಡಾ ಇಲಾಖೆ ಅಧಿ​ಕಾ​ರಿ​ಗಳ ದೂರಿನ ಹಿನ್ನೆ​ಲೆ​ಯಲ್ಲಿ ಅವರು ಈ ಬೀಗ ಜಡಿ​ದಿ​ದ್ದಾರೆ. ಆದರೆ ಮಾತು​ಕತೆ ಬಳಿಕ ಪಂದ್ಯದ ಆರಂಭಕ್ಕೂ ಮುನ್ನ ಬೀಗ ತೆರ​ವು​ಗೊ​ಳಿಸಿ ಪ್ರೇಕ್ಷ​ಕ​ರಿಗೆ ಪ್ರವೇ​ಶಕ್ಕೆ ಅನು​ಮತಿ ನೀಡ​ಲಾ​ಗಿದೆ. ಈ ಬಗ್ಗೆ ರಾಜ​ಸ್ಥಾನ ರಾಯಲ್ಸ್‌ ಫ್ರಾಂಚೈ​ಸಿಯು ಸ್ಪಷ್ಟನೆ ನೀಡಿದ್ದು, ಅನು​ಮತಿ ಪಡೆ​ಯದೆ ಯಾವುದೇ ಕೆಲಸ ಮಾಡಿಲ್ಲ ಎಂದಿ​ದೆ.

ರಾಹು​ಲ್‌ಗೆ 12 ಲಕ್ಷ ರುಪಾಯಿ ದಂಡ

ಜೈಪು​ರ: 16ನೇ ಆವೃತ್ತಿ ಐಪಿ​ಎ​ಲ್‌​ನಲ್ಲಿ ನಿಧಾ​ನ​ಗತಿ ಬೌಲಿಂಗ್‌ ಪ್ರಕ​ರ​ಣ​ಗಳು ಹೆಚ್ಚು​ತ್ತಿದ್ದು, ಇದೀಗ ಲಖನೌ ಸೂಪರ್‌ ಜೈಂಟ್ಸ್‌ ತಂಡದ ನಾಯಕ ಕೆ.ಎ​ಲ್‌.​ರಾ​ಹುಲ್‌ ಕೂಡಾ ಇದೇ ಕಾರ​ಣಕ್ಕೆ ದಂಡಕ್ಕೆ ಗುರಿ​ಯಾ​ಗಿ​ದ್ದಾರೆ. ಬುಧ​ವಾ​ರದ ರಾಜ​ಸ್ಥಾನ ರಾಯಲ್ಸ್‌ ವಿರು​ದ್ಧದ ಪಂದ್ಯದ ನಿಧಾ​ನ​ಗತಿ ಬೌಲಿಂಗ್‌​ಗಾಗಿ ಅವ​ರಿಗೆ 12 ಲಕ್ಷ ರು. ದಂಡ ವಿಧಿ​ಸ​ಲಾ​ಗಿದೆ.

ಈ ಬಾರಿಯೂ ಏಷ್ಯಾಡ್‌ನಲ್ಲಿ ಭಾರತ ಕ್ರಿಕೆಟ್ ತಂಡವಿಲ್ಲ..!

ನವದೆಹಲಿ: ಈ ಬಾರಿಯು ಭಾರತ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡ ಏಷ್ಯನ್ ಗೇಮ್ಸ್‌ನಲ್ಲಿ ಆಡುವ ಅವಕಾಶ ಕಳೆದುಕೊಂಡಿದೆ. ಇದನ್ನು ಬಿಸಿಸಿಐ ಅಧಿಕಾರಿಗಳು ಖಚಿತಪಡಿಸಿದ್ದು, "ಏಷ್ಯನ್ ಗೇಮ್ಸ್‌ ವೇಳೆ ನಮ್ಮ ತಂಡಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿರತವಾಗಿರಲಿವೆ. ಹೀಗಾಗಿ ಕ್ರೀಡಾಕೂಟದಲ್ಲಿ ಆಡುವುದಿಲ್ಲ' ಎಂದು ತಿಳಿಸಿವೆ.

ಏಷ್ಯನ್ ಗೇಮ್ಸ್‌ ಕ್ರೀಡಾಕೂಟವು ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಚೀನಾದ ಹ್ಯಾಂಗ್ಝೂನಲ್ಲಿ ನಡೆಯಲಿದ್ದು, ಇದರಲ್ಲಿ ಭಾರತ ಕ್ರಿಕೆಟ್‌ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆಯಿತ್ತು. ಆದರೆ ಅಕ್ಟೋಬರ್-ನವೆಂಬರ್‌ ನವೆಂಬರ್‌ ತಿಂಗಳಿನಲ್ಲಿ ಭಾರತ ಪುರುಷರ ಕ್ರಿಕೆಟ್ ತಂಡವು ಭಾರತದಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ. ಇನ್ನು ಭಾರತ ಮಹಿಳಾ ಕ್ರಿಕೆಟ್‌ ತಂಡವು ಏಷ್ಯನ್ ಗೇಮ್ಸ್‌ ಕ್ರೀಡಾಕೂಟದ ಸಮಯದಲ್ಲಿ ಯಾವುದೇ ಸರಣಿ ನಿಗದಿಯಾಗಿಲ್ಲ. ಆದರೂ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಕಳಿಸಿಕೊಡಲು ಬಿಸಿಸಿಐ ನಿರಾಕರಿಸಿದೆ ಎನ್ನಲಾಗಿದೆ.

IPL 2023 ಚೆನ್ನೈನಲ್ಲಿ ಸನ್‌ರೈಸ​ರ್ಸ್‌ಗೆ ಚೆನ್ನೈ ಸೂಪರ್ ಕಿಂಗ್ಸ್‌ ಸ್ಪಿನ್‌ ಪರೀಕ್ಷೆ!

ಈ ಮೊದಲು 2010 ಮತ್ತು 2014ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಕ್ರಿಕೆಟ್ ಟೂರ್ನಿ ನಡೆದಿತ್ತು. ಆದರೆ ಭಾರತ ಕ್ರಿಕೆಟ್‌ ತಂಡಗಳು ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಂಡಿರಲಿಲ್ಲ. ಇನ್ನು ಕಳೆದ ವರ್ಷ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಪಾಲ್ಗೊಂಡು ಬೆಳ್ಳಿ ಪದಕ ಜಯಿಸಿತ್ತು.
 

Latest Videos
Follow Us:
Download App:
  • android
  • ios