ಚೆಪಾಕ್‌ನಲ್ಲಿ ಮೊದಲ ಜಯಕ್ಕೆ ಸನ್‌ರೈಸರ್ಸ್ ಹೈದ್ರಾಬಾದ್ ಕಾತರತವರಿನ ಲಾಭವೆತ್ತಿ 4ನೇ ಜಯ ಸಾಧಿಸುವ ನಿರೀಕ್ಷೆಯಲ್ಲಿ ಸಿಎಸ್‌ಕೆಅಂಕಪಟ್ಟಿಯಲ್ಲಿ ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿರುವ ಧೋನಿ ಪಡೆ
ಚೆನ್ನೈ(ಏ.21): ಚೆಪಾಕ್ ಕ್ರೀಡಾಂಗಣ ಚೆನ್ನೈ ಸೂಪರ್ ಕಿಂಗ್‌್ಸ ಪಾಲಿಗೆ ಭದ್ರಕೋಟೆ. ಆದರೆ ಕಳೆದ ಪಂದ್ಯದಲ್ಲಿ ಇದೇ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಚೆನ್ನೈಗೆ ಸೋಲಿನ ಆಘಾತ ಎದುರಾಗಿತ್ತು. ಸ್ಪಿನ್ ಸ್ನೇಹಿ, ನಿಧಾನಗತಿ ಪಿಚ್ನಲ್ಲಿ ಈಗ ಸನ್‌ರೈಸರ್ಸ್ ಹೈದರಾಬಾದ್ ತಂಡ ಚೆನ್ನೈ ಸವಾಲನ್ನು ಮೆಟ್ಟಿನಿಂತು ಗೆಲ್ಲುವ ನಿರೀಕ್ಷೆಯಲ್ಲಿದೆ. ಚೆನ್ನೈ 4ನೇ ಜಯದೊಂದಿಗೆ ಅಗ್ರಸ್ಥಾನಕ್ಕೇರುವ ಕಾತರದಲ್ಲಿದ್ದರೆ, ಕಳೆದ ಪಂದ್ಯದಲ್ಲಿ ಮುಂಬೈಗೆ ಶರಣಾಗಿದ್ದ ಹೈದ್ರಾಬಾದ್ 3ನೇ ಜಯಕ್ಕೆ ಕಾಯುತ್ತಿದೆ.
ಚೆಪಾಕ್‌ನಲ್ಲಿ ಈವರೆಗೆ ಹೈದ್ರಾಬಾದ್ ತಂಡ ಮೂರು ಪಂದ್ಯಗಳನ್ನಾಡಿದ್ದು, ಒಂದೂ ಗೆಲುವು ಸಾಧಿಸಿಲ್ಲ. ಅಲ್ಲದೇ ಹ್ಯಾರಿ ಬ್ರೂಕ್ರಂತಹ ಸ್ಫೋಟಕ ಬ್ಯಾಟರ್ಗಳು ಸ್ಪಿನ್ನರ್ಗಳ ಎದುರು ಉತ್ತಮ ದಾಖಲೆ ಹೊಂದಿಲ್ಲ. ಹೀಗಾಗಿ ರವೀಂದ್ರ ಜಡೇಜಾ, ಮೊಯೀನ್ ಅಲಿ, ಮಹೀಶ್ ತೀಕ್ಷಣ ಅವರನ್ನು ಹ್ಯಾರಿ ಬ್ರೂಕ್ ವಿರುದ್ಧ ನಾಯಕ ಧೋನಿ ಖಚಿತವಾಗಿ ಪ್ರಮುಖ ಅಸ್ತ್ರವಾಗಿ ಬಳಸಲಿದ್ದಾರೆ. ವೇಗದ ಬೌಲಿಂಗ್ ವಿಭಾಗ ದುಬಾರಿಯಾಗುತ್ತಿದ್ದು, ಫೀಲ್ಡಿಂಗ್ ವಿಭಾಗದ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ. ಆದರೆ ಬ್ಯಾಟಿಂಗ್ ವಿಭಾಗ ಅಭೂತಪೂರ್ವ ಲಯದಲ್ಲಿದೆ. ಪವರ್-ಪ್ಲೇನಲ್ಲಿ 9.86 ರನ್ರೇಟ್ ಹೊಂದಿದ್ದು, ಋುತುರಾಜ್ ಗಾಯಕ್ವಾಡ್, ಡೆವೋನ್ ಕಾನ್‌ವೇ, ಅಜಿಂಕ್ಯಾ ರಹಾನೆ ಜೊತೆ ಶಿವಂ ದುಬೆ ಅಬ್ಬರಕ್ಕೆ ಆರಂಭದಲ್ಲೇ ಕಡಿವಾಣ ಹಾಕಬೇಕಾದ ಅಗತ್ಯ ಹೈದ್ರಾಬಾದ್ ಬೌಲರ್ಗಳ ಮೇಲಿದೆ.
IPL 2023: ಎದ್ದು ಬಿದ್ದು ಕೊನೆಗೂ ಗೆದ್ದ ಕ್ಯಾಪಿಟಲ್ಸ್!
ಮತ್ತೊಂದೆಡೆ ಪ್ರತಿಭಾವಂತ ಬ್ಯಾಟರ್ಗಳು, ವೇಗಿಗಳ ದಂಡೇ ಹೊಂದಿದ್ದರೂ ಸನ್ರೈಸರ್ಸ್ನಲ್ಲಿ ತಜ್ಞ ಸ್ಪಿನ್ನರ್ಗಳ ಕೊರತೆ ಇದೆ. ವಾಷಿಂಗ್ಟನ್ ಸುಂದರ್ 5 ಪಂದ್ಯಗಳಲ್ಲಿ ಕೇವಲ 11 ಓವರ್ ಬೌಲ್ ಮಾಡಿದ್ದಾರೆ. ಅವರು ಒಂದೂ ವಿಕೆಟ್ ಪಡೆದಿಲ್ಲ. ಹೀಗಾಗಿ ಮಯಾಂಕ್ ಮಾರ್ಕಂಡೆ ಜೊತೆ ಆದಿಲ್ ರಶೀದ್ರನ್ನೂ ಆಡಿಸುವ ಸಾಧ್ಯತೆ ಇದೆ. ಅನುಭವಿ ಭುವನೇಶ್ವರ್ ಮೊನಚು ಕಳೆದುಕೊಂಡಿದ್ದು, ನಟರಾಜನ್, ಉಮ್ರಾನ್ ಮಲಿಕ್ ವಿಕೆಟ್ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ.
ಮುಖಾಮುಖಿ: 18
ಚೆನ್ನೈ: 13
ಹೈದ್ರಾಬಾದ್: 05
ಸಂಭವನೀಯ ಆಟಗಾರರ ಪಟ್ಟಿ
ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್‌ವೇ, ಅಜಿಂಕ್ಯ ರಹಾನೆ, ಮೋಯಿನ್ ಅಲಿ, ರವೀಂದ್ರ ಜಡೇಜಾ, ಶಿವಂ ದುಬೆ, ಎಂ ಎಸ್ ಧೋನಿ(ನಾಯಕ), ಮತೀಶ್ ಪತಿರನ, ಮಹೀಶ್ ತೀಕ್ಷಣ, ತುಷಾರ್ ದೇಶಪಾಂಡೆ, ಆಕಾಶ್ ಸಿಂಗ್.
ಸನ್‌ರೈಸರ್ಸ್ ಹೈದ್ರಾಬಾದ್: ಮಯಾಂಕ್ ಅಗರ್‌ವಾಲ್, ಹ್ಯಾರಿ ಬ್ರೂಕ್, ರಾಹುಲ್ ತ್ರಿಪಾಠಿ, ಏಯ್ಡನ್ ಮಾರ್ಕ್ರಮ್(ನಾಯಕ), ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್, ಮಯಾಂಕ್ ಮಾರ್ಕಂಡೆ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಆದಿಲ್ ರಶೀದ್, ಉಮ್ರಾನ್ ಮಲಿಕ್.
ಪಂದ್ಯ: ಸಂಜೆ 7.30ಕ್ಕೆ,
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಪಿಚ್ ರಿಪೋರ್ಟ್
ಚೆಪಾಕ್ ಕ್ರೀಡಾಂಗಣದ ಪಿಚ್ ಸ್ಪಿನ್ ಸ್ನೇಹಿಯಾಗಿದ್ದು, ಸ್ಪರ್ಧಾತ್ಮಕ ಕ್ರಿಕೆಟ್ಗೆ ಹೆಸರುವಾಸಿ. ಇಲ್ಲಿ 160-170 ರನ್ ಕೂಡ ರಕ್ಷಿಸಿಕೊಳ್ಳಬಹುದಾದ ಮೊತ್ತ. ಚೇಸಿಂಗ್ ವೇಳೆ ಪಿಚ್ ನಿಧಾನವಾಗಿ ವರ್ತಿಸಬಹುದು. ಕಳೆದೆರಡು ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿದೆ.
