ಪೈಸೆ ಪೈಸೆಗೂ ಪರದಾಡುತ್ತಿರುವ ವಿನೋದ್ ಕಾಂಬ್ಳಿ; ಬೀದಿಗೆ ಬೀಳುವ ಆತಂಕದಲ್ಲಿ ಮಾಜಿ ಕ್ರಿಕೆಟರ್!

ಒಂದು ಕಾಲದಲ್ಲಿ ಭಾರತ ತಂಡದಲ್ಲಿ ಮಿಂಚಿದ್ದ ವಿನೋದ್ ಕಾಂಬ್ಳಿ ಇದೀಗ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಮುಂಬೈನ ಐಷಾರಾಮಿ ಫ್ಲಾಟ್‌ನಲ್ಲಿ ವಾಸಿಸುತ್ತಿರುವ ಕಾಂಬ್ಳಿ, ಲೋನ್ ಮತ್ತು ನಿರ್ವಹಣಾ ವೆಚ್ಚವನ್ನು ಭರಿಸಲು ಪರದಾಡುತ್ತಿದ್ದಾರೆ. ಬಿಸಿಸಿಐ ಪಿಂಚಣಿಯಿಂದ ಜೀವನ ನಡೆಸುತ್ತಿರುವ ಅವರ ಆರ್ಥಿಕ ಪರಿಸ್ಥಿತಿಯ ಬಗ್ಗೆ ಲೇಖನ ಚರ್ಚಿಸುತ್ತದೆ.

Vinod Kambli does not paid loan and maintenance Mumbai home Latest updates kvn

ಬೆಂಗಳೂರು: ಒಂದು ಕಾಲದಲ್ಲಿ ಪ್ರತಿಭಾನ್ವಿತ ಕ್ರಿಕೆಟಿಗನಾಗಿ ಭಾರತ ತಂಡದಲ್ಲಿ ಮಿಂಚಿದ್ದ ವಿನೋದ್ ಕಾಂಬ್ಳಿ ಇದೀಗ ಪ್ರಸ್ತುತ ಬೇಡದ ಕಾರಣಕ್ಕೆ ಅತಿಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಆಟಗಾರ ಎನಿಸಿಕೊಂಡಿದ್ದಾರೆ. ಮುಂಬೈನ ಬಾಂದ್ರಾದ ಪಶ್ಚಿಮ ಭಾಗದಲ್ಲಿ ಆಲಿಶಾನ್ ಎನ್ನುವ ಐಶಾರಾಮಿ ಫ್ಲಾಟ್‌ನಲ್ಲಿ ಕಾಂಬ್ಳಿ ವಾಸವಾಗಿದ್ದಾರೆ. ಇದೀಗ ಈ ಆಲಿಶಾನ್ ಪ್ಲಾಟ್ ವಿವಾದಕ್ಕೆ ಗ್ರಾಸವಾಗಿದ್ದು, ಸ್ವತಃ ವಿನೋದ್ ಕಾಂಬ್ಳಿ ಬೀದಿಗೆ ಬೀಳುವ ಆತಂಕಕ್ಕೆ ಸಿಲುಕಿದ್ದಾರೆ. 

ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದಲೂ ವಿನೋದ್ ಕಾಂಬ್ಳಿ ತಮ್ಮ ಐಶಾರಾಮಿ ಜೀವನ ಶೈಲಿಯ ಮೂಲಕವೇ ಹೆಚ್ಚು ಗಮನ ಸೆಳೆದಿದ್ದರು. ಹೀಗಿದ್ದ ವಿನೋದ್ ಕಾಂಬ್ಳಿ ಇದೀಗ ತಮ್ಮ ಮನೆಯ ಮೇಲಿರುವ ಲೋನ್ ಹಾಗೂ ನಿರ್ವಹಣಾ ವೆಚ್ಚವನ್ನು ನಿಭಾಯಿಸಲು ಅಸಮರ್ಥವಾಗಿದ್ದಾರೆ. ಮನೆಯ ಗೋಡೆಯ ಮೇಲಿರುವ ಸಚಿನ್ ತೆಂಡುಲ್ಕರ್ ಜತೆಗಿನ ಅವರ ಫೋಟೋ  ಆ ಸುವರ್ಣಕಾಲವನ್ನು ನೆನಪು ಮಾಡಿಕೊಡುವಂತೆ ಭಾಸವಾಗುತ್ತಿದೆ. ಅಷ್ಟಕ್ಕೂ ಕಾಂಬ್ಳಿ ಆರ್ಥಿಕವಾಗಿ ದಿವಾಳಿಯಾಗಲು ಕಾರಣವೇನು ಎನ್ನುವುದನ್ನು ನೋಡೋಣ ಬನ್ನಿ.

ವಿನೋದ್ ಕಾಂಬ್ಳಿಯ ಮನೆಯ ಮೌಲ್ಯ:

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಮುಂಬೈನ ವೆಸ್ಟ್ ಭಾಂದ್ರಾದಲ್ಲಿರುವ ಜ್ವೆಲ್ ಟವರ್ ಅಪಾರ್ಟ್‌ಮೆಂಟ್‌ನ 3 ಬಿಎಚ್‌ಕೆ ಫ್ಲಾಟ್‌ನಲ್ಲಿ ವಾಸವಾಗಿದ್ದಾರೆ. ಈ ಮನೆಯ ಮೌಲ್ಯ ಬರೋಬ್ಬರಿ 8 ಕೋಟಿ ರುಪಾಯಿಗಳು. ಕಾಂಬ್ಳಿ ವಾಸವಾಗಿರುವ ಫ್ಲಾಟ್‌ನಲ್ಲಿ ಐಶಾರಾಮಿ ಡಿಸೈನ್ಸ್ ಹಾಗೂ ಸುಂದರವಾದ ಇಂಟೀರಿಯರ್ಸ್‌ನಿಂದ ಮಾಡಲ್ಪಟ್ಟಿದೆ. ಈ ಮನೆಯ ಓಪನ್ ಸ್ಟೈಲ್ ಕಿಚೆನ್, ವಿಶಾಲವಾದ ಲಿವಿಂಗ್ ಏರಿಯಾವನ್ನು ಒಳಗೊಂಡಿದೆ. 2012ರಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಕಾಂಬ್ಳಿ, ಇದಾದ ಬಳಿಕ ತಮ್ಮ ನಿವಾಸದಲ್ಲಿಯೇ ಕ್ರಿಸ್‌ಮಸ್ ಅನ್ನು ಅದ್ಧೂರಿಯಾಗಿ ಆಚರಿಸುತ್ತಾ ಬಂದಿದ್ದಾರೆ. ಇನ್ನು ಮನೆಯ ತುಂಬೆಲ್ಲಾ ತಮ್ಮ ಬಾಲ್ಯದ ಗೆಳೆಯ ಸಚಿನ್ ತೆಂಡುಲ್ಕರ್ ಅವರ ಪೋಟೋಗಳನ್ನು ಗೋಡೆಯ ಮೇಲೆ ತೂಗುಹಾಕಲಾಗಿದೆ. ಇದು ಅವರಿಬ್ಬರ ಗೆಳೆತನವನ್ನು ಪದೇ ಪದೇ ನೆನಪಿಸುವಂತಿದೆ.

ವಿನೋದ್ ಕಾಂಬ್ಳಿ ಹೆಸರಿನಲ್ಲಿರುವ ಆ ಒಂದು ರೆಕಾರ್ಡ್ ಬ್ರೇಕ್ ಮಾಡಲು ಯಾವ ದಿಗ್ಗಜರಿಗೂ ಸಾಧ್ಯವಾಗಿಲ್ಲ!

ಮನೆ ನಿರ್ವಹಿಸೋದು ಕಷ್ಟ:

ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ ಅವರಿಗೆ ಇದೀಗ ಮನೆ ನಡೆಸೋದು ಕಷ್ಟ ಆಗಿದೆ ಎನ್ನುವುದು ಅಚ್ಚರಿ ಎನಿಸಿದರೂ ಸತ್ಯ. ಸದ್ಯ ಕಾಂಬ್ಳಿ ಮನೆಯ ಮೇಂಟೇನೆನ್ಸ್‌ 10.5 ಲಕ್ಷ ರುಪಾಯಿ ಪಾವತಿಸುವುದು ಬಾಕಿ ಉಳಿದಿದೆ. ಈ ಸಂಬಂಧ 2013ರಲ್ಲೇ ಕೇಸ್ ದಾಖಲಾಗಿದೆ. ಇನ್ನು ಇದರ ಮೇಲೆ ಕಾಂಬ್ಳಿ ಕಾರು ಲೋನ್ ಕೂಡಾ ಮಾಡಿದ್ದಾರೆ. ಇದನ್ನು ಸರಿಯಾಗಿ ಲೋನ್ ಪಾವತಿ ಮಾಡಿಲ್ಲ. ಬಿಸಿಸಿಐನಿಂದ ಸಿಗುವ 30 ಸಾವಿರ ರುಪಾಯಿ ಪಿಂಚಣಿಯು ಕಾಂಬ್ಳಿ ಅವರ ಜೀವನ ನಿರ್ವಹಣೆಗೆ ಮಾತ್ರ ಬಳಕೆಯಾಗುತ್ತಿದೆ. ಇವೆಲ್ಲದರ ನಡುವೆ ಮಧ್ಯಪಾನದ ದಾಸರಾಗಿರುವುದು ಅವರನ್ನು ಮತ್ತಷ್ಟು ಪಾತಾಳಕ್ಕೆ ತಳ್ಳುವಂತೆ ಮಾಡಿದೆ. ಮಧ್ಯಪಾನ ಬಿಡುವುದಕ್ಕಾಗಿಯೇ 14 ಬಾರಿ ಪುನರ್ವಸತಿ ಶಿಬಿರಕ್ಕೆ ಹಾಜರಾಗಿದ್ದರು. ವಿನೋದ್ ಕಾಂಬ್ಳಿ ಅವರ ಒಟ್ಟು ಸಂಪತ್ತು 12 ಕೋಟಿ ರುಪಾಯಿಗೂ ಹೆಚ್ಚಿತ್ತು. ಸದ್ಯ 2022ರ ಅಂತ್ಯದ ವೇಳೆಗೆ ವಿನೋದ್ ಕಾಂಬ್ಳಿ ಅವರ ಒಟ್ಟು ಸಂಪತ್ತು ಕೇವಲ 4 ಲಕ್ಷ ರುಪಾಯಿಗೆ ಇಳಿದಿದೆ ಎಂದು ವರದಿಯಾಗಿದೆ.

ಜಗತ್ತಿನ ಶ್ರೀಮಂತ ಕ್ರಿಕೆಟಿಗ 22ನೇ ವಯಸ್ಸಿಗೆ ಕ್ರಿಕೆಟ್‌ಗೆ ಗುಡ್‌ಬೈ! ಈತ ಧೋನಿ, ಸಚಿನ್, ಕೊಹ್ಲಿಗಿಂತ ಶ್ರೀಮಂತ!

ಕಾಂಬ್ಳಿ ನಿವೃತ್ತಿ ನಂತರ ಮಾಡಿದ್ದೇನು?

ವಿನೋದ್ ಕಾಂಬ್ಳಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಬಳಿಕ ಮುಂಬೈನಲ್ಲೇ ಖೇಲ್ ಭಾರತಿ ಸ್ಪೋರ್ಟ್ಸ್ ಅಕಾಡೆಮಿಯನ್ನು ಆರಂಭಿಸಿದರು. ಇದರ ಜತೆಗೆ ಮುಂಬೈನಲ್ಲೇ BKC ನಲ್ಲಿ ಕ್ರಿಕೆಟ್ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಆದರೆ ಕ್ರಿಕೆಟ್ ನಿವೃತ್ತಿಯ ಬಳಿಕ ಕುಡಿತದ ಚಟ ಹಾಗೂ ಐಶಾರಾಮಿ ಬದುಕು ವಿನೋದ್ ಕಾಂಬ್ಳಿ ಅವರನ್ನು ಬೆಂಕಿಯಿಂದ ಬಾಣಲೆಗೆ ಬೀಳುವಂತೆ ಮಾಡಿದೆ.

Latest Videos
Follow Us:
Download App:
  • android
  • ios