ವಿನೋದ್ ಕಾಂಬ್ಳಿ ಹೆಸರಿನಲ್ಲಿರುವ ಆ ಒಂದು ರೆಕಾರ್ಡ್ ಬ್ರೇಕ್ ಮಾಡಲು ಯಾವ ದಿಗ್ಗಜರಿಗೂ ಸಾಧ್ಯವಾಗಿಲ್ಲ!
ಬೆಂಗಳೂರು: ಕ್ರಿಕೆಟ್ ಆಡುವ ಕಾಲದಲ್ಲಿ ಪ್ರತಿಭಾನ್ವಿತ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದ ವಿನೋದ್ ಕಾಂಬ್ಳೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆ ನಿರ್ಮಿಸಿದ್ದಾರೆ. ಈ ಪೈಕಿ ಒಂದು ರೆಕಾರ್ಡ್ ಮುರಿಯಲು ಇದುವರೆಗೂ ಯಾವ ಕ್ರಿಕೆಟಿಗನಿಗೂ ಸಾಧ್ಯವಾಗಿಲ್ಲ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.
ಸಚಿನ್ ತೆಂಡುಲ್ಕರ್ ಸ್ನೇಹಿತ, ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಸದ್ಯ ಸುದ್ದಿಯಲ್ಲಿರುವ ಪ್ರಮುಖರಾಗಿದ್ದಾರೆ. ಇತ್ತೀಚೆಗೆ ಒಂದು ವೇದಿಕೆ ಕಾರ್ಯಕ್ರಮದಲ್ಲಿ ಸಚಿನ್ ತೆಂಡುಲ್ಕರ್ ಹಾಗೂ ವಿನೋದ್ ಕಾಂಬ್ಳಿ ಒಟ್ಟಿಗೆ ಕಾಣಿಸಿಕೊಂಡಿದ್ದು ಹೆಚ್ಚು ಗಮನ ಸೆಳೆದಿತ್ತು.
ಆಗ ವಿನೋದ್ ಕಾಂಬ್ಳಿಯನ್ನು ಗಮನಿಸಿದ ಮಂದಿ, ಕಾಂಬ್ಳಿ ಅವರ ಬದುಕು ತುಂಬಾ ದುಸ್ತರವಾಗಿದೆ ಎನ್ನುವುದು ಮೇಲ್ನೋಟಕ್ಕೆ ಭಾಸವಾಗುತ್ತಿತ್ತು. ಇನ್ನು ಕಾಂಬ್ಳಿ ವೇದಿಕೆಯಲ್ಲಿ ಮಾತನಾಡುವಾಗಲೂ ಸಮಸ್ಯೆಗಳನ್ನು ಎದುರಿಸುತ್ತಿರುವುದು ಕಂಡು ಬಂದಿತ್ತು.
ವಿನೋದ್ ಕಾಂಬ್ಳಿ ಹಾಗೂ ಸಚಿನ್ ತೆಂಡುಲ್ಕರ್ ಇಬ್ಬರೂ ಶಿವಾಜಿ ಪಾರ್ಕ್ ಕ್ರಿಕೆಟ್ ಮೈದಾನದಲ್ಲಿ ಕೋಚ್ ರಮಾಕಾಂತ್ ಆರ್ಚೆಕರ್ ಅವರ ಮಾರ್ಗದರ್ಶನದಲ್ಲಿಯೇ ಕ್ರಿಕೆಟ್ ಅಭ್ಯಾಸ ನಡೆಸಿದ್ದರು.
ವಿನೋದ್ ಕಾಂಬ್ಳಿ ಭಾರತ ಕ್ರಿಕೆಟ್ ತಂಡಕ್ಕೆ ಭರ್ಜರಿಯಾಗಿಯೇ ಪಾದಾರ್ಪಣೆ ಮಾಡಿ ಮಿಂಚಿದ್ದರು. ಆಡಿದ ಮೊದಲ 7 ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳ ಪೈಕಿ 4 ಪಂದ್ಯಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದರು. ಈ ಪೈಕಿ ಎರಡು ದ್ವಿಶತಕಗಳು ಸೇರಿದ್ದವು.
ವಿನೋದ್ ಕಾಂಬ್ಳಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗವಾಗಿ ಒಂದು ಸಾವಿರ ರನ್ ಪೂರೈಸಿದ ಭಾರತೀಯ ಬ್ಯಾಟರ್ ಎನ್ನುವ ದಾಖಲೆ ನಿರ್ಮಿಸಿದ್ದರು. ವಿನೋದ್ ಕಾಂಬ್ಳಿ ಕೇವಲ 14 ಇನ್ನಿಂಗ್ಸ್‌ಗಳನ್ನಾಡಿ 1000 ರನ್ ಪೂರೈಸಿದ್ದರು.
ವಿನೋದ್ ಕಾಂಬ್ಳಿ ಅವರ ಈ ದಾಖಲೆ ಇಂದಿಗೂ ಅಚ್ಚಳಿಯದೇ ಉಳಿದಿದೆ. ಇತ್ತೀಚೆಗಷ್ಟೇ ಯಶಸ್ವಿ ಜೈಸ್ವಾಲ್, ಕಾಂಬ್ಳಿ ದಾಖಲೆ ಸಮೀಪ ಬಂದಿದ್ದರಾದರೂ ಬ್ರೇಕ್ ಮಾಡಲು ಸಾಧ್ಯವಾಗಿರಲಿಲ್ಲ. ಜೈಸ್ವಾಲ್ 16 ಟೆಸ್ಟ್ ಇನ್ನಿಂಗ್ಸ್‌ಗಳನ್ನಾಡಿ 1000 ರನ್ ಪೂರೈಸಿದ್ದಾರೆ.
ವಿನೋದ್ ಕಾಂಬ್ಳಿ ಭಾರತ ಪರ 1991ರಲ್ಲಿ ಏಕದಿನ ಕ್ರಿಕೆಟ್ ಮೂಲಕ ಪಾದಾರ್ಪಣೆ ಮಾಡಿದರು. ಇನ್ನು ಕಾಂಬ್ಳಿ 2000ನೇ ಇಸವಿಯಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಕಾಂಬ್ಳಿ ಭಾರತ ಪರ 104 ಏಕದಿನ ಹಾಗೂ 17 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ.
ಆಡಿದ 17 ಟೆಸ್ಟ್ ಪಂದ್ಯಗಳ ಪೈಕಿ ವಿನೋದ್ ಕಾಂಬ್ಳಿ 54.20 ಬ್ಯಾಟಿಂಗ್ ಸರಾಸರಿಯಲ್ಲಿ 4 ಶತಕ ಹಾಗೂ 3 ಅರ್ಧಶತಕ ಸಹಿತ 1084 ರನ್ ಸಿಡಿಸಿದ್ದಾರೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ 32.59ರ ಬ್ಯಾಟಿಂಗ್ ಸರಾಸರಿಯಲ್ಲಿ 2 ಶತಕ ಹಾಗೂ 14 ಅರ್ಧಶತಕ ಸಹಿತ 2477 ರನ್ ಸಿಡಿಸಿದ್ದರು.