ಡೆಲ್ಲಿ(ಮಾ.08): ವಿಜಯ್‌ ಹಜಾರೆ ಟೂರ್ನಿಯ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಕರ್ನಾಟಕ ಎದುರು ಟಾಸ್ ಗೆದ್ದ ಕೇರಳ ಬೌಲಿಂಗ್‌ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಇದೀಗ ಕರ್ನಾಟಕ ಮೊದಲ ಬ್ಯಾಟಿಂಗ್‌ ಮಾಡಲು ಕಣಕ್ಕಿಳಿಯಲಿದೆ.

ಇಲ್ಲಿನ ಪಾಲಮ್‌ ಎ ಸ್ಟೇಡಿಯಂನಲ್ಲಿ ಆರಂಭಗೊಂಡ ಎರಡನೇ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಭಾರತದ ಎರಡು ಬಲಿಷ್ಠ ತಂಡಗಳು ಅಂತಿಮ ನಾಲ್ಕರ ಘಟ್ಟಕ್ಕಾಗಿ ಸೆಣಸಾಡಲಿವೆ. ಕರ್ನಾಟಕ ತಂಡಕ್ಕೆ ಸ್ಟಾರ್ ಆಟಗಾರ ಮನೀಶ್‌ ಪಾಂಡೆ ಹಾಗೂ ಕೃಷ್ಣಪ್ಪ ಗೌತಮ್‌ ತಂಡ ಕೂಡಿಕೊಂಡಿರುವುದು ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಭರ್ಜರಿ ಫಾರ್ಮ್‌ನಲ್ಲಿರುವ ದೇವದತ್ ಪಡಿಕ್ಕಲ್‌, ರವಿಕುಮಾರ್ ಸಮರ್ಥ್ ಹಾಗೂ ಸಿದ್ಧಾರ್ಥ್ ಮೇಲೆ ತಂಡ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟಿದೆ.

ವಿಜಯ್‌ ಹಜಾರೆ ಏಕದಿನ ಟೂರ್ನಿ ಕರ್ನಾಟಕ-ಕೇರಳ ಕ್ವಾರ್ಟರ್‌ ಫೈಟ್‌

ಇನ್ನು ಕೇರಳ ತನ್ನ ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್‌ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿದ್ದು, ಅನುಭವಿ ಆಟಗಾರ ರಾಬಿನ್ ಉತ್ತಪ್ಪ, ಯುವ ಪ್ರತಿಭೆಗಳಾದ ಮೊಹಮ್ಮದ್ ಅಜರುದ್ದೀನ್‌, ವಿಷ್ಣು ವಿನೋದ್‌ರನ್ನು ನೆಚ್ಚಿಕೊಂಡಿದೆ 

ತಂಡಗಳು ಹೀಗಿವೆ

ಕರ್ನಾಟಕ:

ಕೇರಳ: