Asianet Suvarna News Asianet Suvarna News

Vijay Hazare Trophy: ತಿಣುಕಾಡಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ

ವಿಜಯ್‌ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಸೆಮೀಸ್‌ ಪ್ರವೇಶಿಸಿದ ಕರ್ನಾಟಕ
ಕ್ವಾರ್ಟರ್‌ ಫೈನಲ್‌ನಲ್ಲಿ ಪಂಜಾಬ್ ಎದುರು ರೋಚಕ ಜಯ
ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ ಕರ್ನಾಟಕ ತಂಡ

Vijay Hazare Trophy Karnataka win against Punjab and Enter Semi Final kvn
Author
First Published Nov 29, 2022, 8:09 AM IST

ಅಹಮದಾಬಾದ್‌(ನ.29): 236 ರನ್‌ ಗುರಿ ಬೆನ್ನತ್ತಲು ಕೊನೆ ಓವರ್‌ವರೆಗೂ ತಿಣುಕಾಡಿದ ಕರ್ನಾಟಕ, ಪಂಜಾಬ್‌ ವಿರುದ್ಧ ಹಾಗೂ ಹೀಗೂ 4 ವಿಕೆಟ್‌ ಗೆಲುವು ಸಾಧಿಸಿ ವಿಜಯ್‌ ಹಜಾರೆ ಏಕದಿನ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿತು. ಪ್ರಚಂಡ ಲಯದಲ್ಲಿರುವ ಕರ್ನಾಟಕದ ಬೌಲರ್‌ಗಳು, ಬ್ಯಾಟಿಂಗ್‌ನಲ್ಲೂ ಕೊಡುಗೆ ನೀಡಬೇಕಾದ ಪರಿಸ್ಥಿತಿ ಮುಂದುವರಿದಿದ್ದು, ಸೆಮೀಸ್‌ನಲ್ಲಿ ರಾಜ್ಯ ತಂಡ ಸೌರಾಷ್ಟ್ರ ಸವಾಲನ್ನು ಎದುರಿಸಬೇಕಿದೆ.

ಟಾಸ್‌ ಸೋತು ಬ್ಯಾಟಿಂಗ್‌ ಇಳಿಸಲ್ಪಟ್ಟಪಂಜಾಬ್‌ಗೆ ಯುವ ಆರಂಭಿಕ ಅಭಿಷೇಕ್‌ ಶರ್ಮಾ ಅವರ ಶತಕ ಆಸರೆಯಾಯಿತು. 13ನೇ ಓವರಲ್ಲಿ 34ಕ್ಕೆ 3 ವಿಕೆಟ್‌ ಕಳೆದುಕೊಂಡಿದ್ದ ಪಂಜಾಬ್‌ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ಅಭಿಷೇಕ್‌ ನೆರವಾದರು. ಮೊದಲು ಅನ್ಮೋಲ್‌ ಜೊತೆ 4ನೇ ವಿಕೆಟ್‌ಗೆ 76 ರನ್‌ ಸೇರಿಸಿದ ಅಭಿಷೇಕ್‌ ಬಳಿಕ, 5ನೇ ವಿಕೆಟ್‌ಗೆ ಸನ್ವೀರ್‌ ಸಿಂಗ್‌ ಜೊತೆ 5ನೇ ವಿಕೆಟ್‌ಗೆ 77 ರನ್‌ ಜೊತೆಯಾಟದಲ್ಲಿ ಭಾಗಿಯಾದರು. 123 ಎಸೆತದಲ್ಲಿ 12 ಬೌಂಡರಿ, 2 ಸಿಕ್ಸರ್‌ನೊಂದಿಗೆ 109 ರನ್‌ ಗಳಿಸಿದರು. ಪಂಜಾಬ್‌ 50 ಓವರಲ್ಲಿ 235 ರನ್‌ಗೆ ಆಲೌಟ್‌ ಆಯಿತು.

ಕರ್ನಾಟಕ ಆರಂಭದಲ್ಲೇ ಮಯಾಂಕ್‌ ವಿಕೆಟ್‌ ಕಳೆದುಕೊಂಡಿತು. ಆರ್‌.ಸಮಥ್‌ರ್‍ ನಿಧಾನಗತಿಯಲ್ಲಿ ಬ್ಯಾಟ್‌ ಮಾಡಿದರೂ ಕ್ರೀಸ್‌ನಲ್ಲಿ ನೆಲೆಯೂರಿದರು. ನಿಕಿನ್‌ ಜೋಸ್‌, ಮನೀಶ್‌ ಪಾಂಡೆ, ಶ್ರೇಯಸ್‌ ಗೋಪಾಲ್‌, ಮನೋಜ್‌ ಭಾಂಡ್ಗೆ ಅವರಿಂದ ಉಪಯುಕ್ತ ಕೊಡುಗೆ ಮೂಡಿಬಂತು. ಕೊನೆಯಲ್ಲಿ ಕೆ.ಗೌತಮ್‌ 2 ಎಸೆತದಲ್ಲಿ 6 ರನ್‌ ಗಳಿಸಿ ತಂಡವನ್ನು 4 ಎಸೆತ ಬಾಕಿ ಇರುವಂತೆ ಗೆಲುವಿನ ದಡ ಸೇರಿಸಿದರು.

ರುತುರಾಜ್‌ ಗಾಯಕ್ವಾಡ್‌ ಮಹಾದಾಖಲೆ, ಒಂದೇ ಓವರ್‌ನಲ್ಲಿ 43 ರನ್‌, 7 ಸಿಕ್ಸರ್‌ !

ಸ್ಕೋರ್‌: 
ಪಂಜಾಬ್‌ 50 ಓವರಲ್ಲಿ 235/10(ಅಭಿಷೇಕ್‌ 109, ಸನ್ವೀರ್‌ 39, ವಿದ್ವತ್‌ 4-40, ರೋನಿತ್‌ 2-48) 
ಕರ್ನಾಟಕ 49.2 ಓವರಲ್ಲಿ 238/6(ಸಮರ್ಥ್ 71, ಶ್ರೇಯಸ್‌ 42, ಸನ್ವೀರ್‌ 2-28)

ಋುತುರಾಜ್‌ ದ್ವಿಶತಕ, ಪರಾಗ್‌ ಸ್ಫೋಟಕ ಶತಕ!

ಅಹಮದಾಬಾದ್‌: ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಅಮೋಘ ಬ್ಯಾಟಿಂಗ್‌ ಪ್ರದರ್ಶನಗಳಿಗೆ ಸಾಕ್ಷಿಯಾದವು. ಉತ್ತರ ಪ್ರದೇಶ ವಿರುದ್ಧ ಋುತುರಾಜ್‌ ಗಾಯಕ್ವಾಡ್‌ರ 220 ರನ್‌ಗಳ ನೆರವಿನಿಂದ 5 ವಿಕೆಟ್‌ಗೆ 330 ರನ್‌ ಕಲೆಹಾಕಿದ ಮಹಾರಾಷ್ಟ್ರ, 58 ರನ್‌ಗಳ ಗೆಲುವು ಸಾಧಿಸಿತು. ಆರ್ಯನ್‌ ಜುಯಲ್‌ರ 159 ರನ್‌ ಹೋರಾಟ ವ್ಯರ್ಥವಾಯಿತು. ಇನ್ನು ಜಮ್ಮು-ಕಾಶ್ಮೀರ ನೀಡಿದ್ದ 351 ರನ್‌ ಗುರಿಯನ್ನು ಅಸ್ಸಾಂ ಕೇವಲ 3 ವಿಕೆಟ್‌ ಕಳೆದುಕೊಂಡು 23 ಎಸೆತ ಬಾಕಿ ಇರುವಂತೆ ತಲುಪಿತು. ರಿಯಾನ್‌ ಪರಾಗ್‌ 116 ಎಸೆತದಲ್ಲಿ 12 ಬೌಂಡರಿ, 12 ಸಿಕ್ಸರ್‌ನೊಂದಿಗೆ 174 ರನ್‌ ಸಿಡಿಸಿದರು. ಹಾಲಿ ಚಾಂಪಿಯನ್‌ ತಮಿಳುನಾಡು ಸೌರಾಷ್ಟ್ರ ವಿರುದ್ಧ 44 ರನ್‌ ಸೋಲುಂಡಿತು. ಸೌರಾಷ್ಟ್ರ 293 ರನ್‌ ಗಳಿಸಿದರೆ, ತಮಿಳುನಾಡು 249ಕ್ಕೆ ಆಲೌಟ್‌ ಆಯಿತು.

Follow Us:
Download App:
  • android
  • ios