Asianet Suvarna News Asianet Suvarna News

ರುತುರಾಜ್‌ ಗಾಯಕ್ವಾಡ್‌ ಮಹಾದಾಖಲೆ, ಒಂದೇ ಓವರ್‌ನಲ್ಲಿ 43 ರನ್‌, 7 ಸಿಕ್ಸರ್‌ !

ಅಹಮದಾಬಾದ್‌ನಲ್ಲಿ ನಡೆದ ವಿಜಯ್‌ ಹಜಾರೆ ಟ್ರೋಫಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ನಾಯಕ ಹಾಗೂ ಆರಂಭಿಕ ಆಟಗಾರ ರುತುರಾಜ್‌ ಗಾಯಕ್ವಾಡ್‌ ಈ ಮಹಾದಾಖಲೆಯನ್ನು ನಿರ್ಮಾಣ ಮಾಡಿದ್ದಾರೆ.

Maharashtra captain Ruturaj Gaikwad smashes List A record with seven sixes in 43 run over san
Author
First Published Nov 28, 2022, 5:18 PM IST

ಅಹಮದಾಬಾದ್‌ (ನ.28): ಯುವ ಬ್ಯಾಟ್ಸ್‌ಮನ್‌ ರುತುರಾಜ್‌ ಗಾಯಕ್ವಾಡ್‌ ಸೋಮವಾರ ವಿಜಯ್‌ ಹಜಾರೆ ಟ್ರೋಫಿಯ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಯಾರೂ ನಿರೀಕ್ಷೆ ಮಾಡದ ಮಹಾದಾಖಲೆಯೊಂದನ್ನು ನಿರ್ಮಾಣ ಮಾಡಿದ್ದಾರೆ. ಉತ್ತರ ಪ್ರದೇಶ ವಿರುದ್ಧ ನಡೆಯುತ್ತಿರುವ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ರುತುರಾಜ್‌ ಗಾಯಕ್ವಾಡ್‌ ಒಂದೇ ಓವರ್‌ನಲ್ಲಿ 7 ಸಿಕ್ಸರ್‌ ಸಿಡಿಸಿದ್ದು ಮಾತ್ರವಲ್ಲದೆ, 43 ರನ್‌ ದಾಖಲೆ ಮಾಡಿದ್ದಾರೆ. ಆ ಮೂಲಕ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ 7 ಸಿಕ್ಸರ್‌ ಸಿಡಿಸಿದ ಹಾಗೂ 43 ರನ್ ಬಾರಿಸಿದ ವಿಶ್ವದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ರುತುರಾಜ್‌ ಗಾಯಕ್ವಾಡ್ ಮಹಾರಾಷ್ಟ್ರ ಬ್ಯಾಟಿಂಗ್‌ನ 49ನೇ ಓವರ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಶಿವ ಸಿಂಗ್‌ ಎಸೆದ ಈ ಓವರ್‌ನಲ್ಲಿ ನೋಬಾಲ್‌ ಸೇರಿದಂತೆ ಅವರು ಎಸೆದ ಎಲ್ಲಾ ಏಳೂ ಎಸೆತಗಳಲ್ಲ ರುತುರಾಜ್‌ ಗಾಯಕ್ವಡ್‌ ಸಿಕ್ಸರ್‌ ಬಾರಿಸಿದ್ದರು. ಆ ಮೂಲಕ ಓವರ್‌ವೊಂದರಲ್ಲಿ ಎಸೆದ ಏಳೂ ಎಸೆತವನ್ನು ಸಿಕ್ಸರ್‌ ಸಿಡಿಸಿದ ವಿಶ್ವದ ಏಕಮಾತ್ರ ಬ್ಯಾಟ್ಸ್‌ಮನ್‌ ಎನಿಸಿದರು. ಇದರಿಂದಾಗಿ ತಮ್ಮ 159 ಎಸೆತಗಳ ಇನ್ನಿಂಗ್ಸ್‌ನಲ್ಲಿ ಅವರು 220 ರನ್‌ ಬಾರಿಸಿದರು. ಇದರಲ್ಲಿ 10 ಬೌಂಡರಿಗಳು ಹಾಗೂ ಬರೋಬ್ಬರಿ 16 ಸಿಕ್ಸರ್‌ಗಳು ಸೇರಿದ್ದವು. 

ರುತುರಾಜ್‌ ಗಾಯಕ್ವಾಡ್‌ ಅವರ ಮಹಾದಾಖಲೆಯ ಕಾರಣದಿಂದಾಗಿ ಮಹಾರಾಷ್ಟ್ರ ತಂಡ 5 ವಿಕೆಟ್‌ಗೆ 330 ರನ್‌ಗಳ ದೊಡ್ಡ ಮೊತ್ತ ಪೇರಿಸಿದರೆ, ಪ್ರತಿಯಾಗಿ ಉತ್ತರ ಪ್ರದೇಶ ತಂಡ 47.4 ಓವರ್‌ಗಳಲ್ಲಿ 272 ರನ್‌ಗೆ ಆಲೌಟ್‌ ಆಯಿತು. 58 ರನ್‌ಗಳ ದೊಡ್ಡಗೆಲುವಿನೊಂದಿಗೆ ಮಹಾರಾಷ್ಟ್ರ ತಂಡ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಮಹಾರಾಷ್ಟ್ರ ತಂಡದ ಬ್ಯಾಟಿಂಗ್‌ನಲ್ಲಿ ಇನ್ನಿಂಗ್ಸ್‌ ಆರಂಭಿಸಿದ ರುತುರಾಜ್‌ ಗಾಯಕ್ವಾಡ್‌ ಬದಲಾಗಿ ಯಾರೊಬ್ಬರೂ ಕನಿಷ್ಠ ಅರ್ಧಶತಕ ಕೂಡ ಬಾರಿಸಿರಲಿಲ್ಲ. ಅಂಕಿತ್‌ ಭಾವ್ನೆ ಹಾಗೂ ಅಜಿಮ್‌ ಕಾಜಿ ತಲಾ 37 ರನ್‌ ಬಾರಿಸಿದರು. ಉತ್ತರ ಪ್ರದೇಶ ತಂಡದ ಪರವಾಗಿ ವೇಗಿ ಕಾರ್ತಿಕ್‌ ತ್ಯಾಗಿ 66 ರನ್‌ ನೀಡಿ 3 ವಿಕೆಟ್‌ ಉರುಳಿಸಿದ್ದರು.

Vijay Hazare Trophy ಜಾರ್ಖಂಡ್‌ ಮಣಿಸಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ

ಹಾಗಂತ ರುತುರಾಜ್‌ ಗಾಯಕ್ವಾಡ್‌ (Ruturaj Gaikwad) ಯಾವುದೇ ದುರ್ಬಲ ತಂಡದ ವಿರುದ್ಧ ಈ ಇನ್ನಿಂಗ್ಸ್‌ ಆಡಿಲ್ಲ. ಇನ್ನು ಉತ್ತರ ಪ್ರದೇಶ (Uttar Pradesh) ತಂಡದ ಬೌಲಿಂಗ್ ಕೂಡ ಅಷ್ಟೆಲ್ಲಾ ಕೆಟ್ಟದಾಗಿರಲಿಲ್ಲ. ಈ ಪಂದ್ಯದಲ್ಲಿ ಆಡಿದ ಐವರು ಬೌಲರ್‌ಗಳ ಪೈಕಿ ನಾಲ್ವರು ಐಪಿಎಲ್‌ನಲ್ಲಿ (IPL) ಆಡಿದ ಬೌಲರ್‌ಗಳಾಗಿದ್ದಾರೆ. ಅವರೆಂದರೆ ಅಂಕಿತ್‌ ರಜಪೂತ್‌, ಶಿವಂ ಮಾವಿ, ಕಾರ್ತಿಕ್‌ ತ್ಯಾಗಿ ಹಾಗೂ ಕರಣ್‌ ಶರ್ಮ. ಇಷ್ಟೆಲ್ಲಾ ಬೌಲರ್‌ಗಳಿದ್ದ ನಡುವೆಯೂ ರುತುರಾಜ್‌ ಗಾಯಕ್ವಾಡ್‌ ದಾಖಲೆಯ ಬ್ಯಾಟಿಂಗ್‌ ನಡೆಸಿದ್ದಾರೆ.

Vijay Hazare Trophy ರಾಜಸ್ಥಾನ ಬಗ್ಗುಬಡಿದು ಪ್ರೀ ಕ್ವಾರ್ಟರ್‌ ಫೈನಲ್‌ಗೇರಿದ ಕರ್ನಾಟಕ..!

ಲಿಸ್ಟ್‌ ಎ  (List A Cricket) ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ 43 ರನ್‌ ಬಂದಿರುವುದು 2ನೇ ಬಾರಿ: ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ 43 ರನ್‌ ದಾಖಲಾಗಿರುವುದು ಇದು 2ನೇ ಬಾರಿ. ಇದಕ್ಕೂ ಮುನ್ನ 2018-19ರಲ್ಲಿ ನ್ಯೂಜಿಲೆಂಡ್‌ನ (New Zealnd) ದೇಶೀಯ ಕ್ರಿಕೆಟ್‌ನಲ್ಲಿ  ಒಂದೇ ಓವರ್‌ನಲ್ಲಿ 43 ರನ್‌ ದಾಖಲಾಗಿತ್ತು. ಸೆಂಟ್ರಲ್‌ ಡಿಸ್ಟ್ರಿಕ್ಟ್‌ ಬೌಲರ್‌ ವಿಲ್ಲಿಯಮ್‌ ಲುಡಿಕ್‌ (Ruturaj Gaikwad) ಒಂದೇ ಓವರ್‌ನಲ್ಲಿ 43 ರನ್‌ ನೀಡಿದ್ದರು. ಆ ಓವರ್‌ನಲ್ಲಿ ಲುಡಿಕ್‌ ಎರಡು ನೋಬಾಲ್‌ಗಳನ್ನು ಎಸೆದಿದ್ದರೆ, ನಾರ್ತರ್ನ್‌ ಡಿಸ್ಟ್ರಿಕ್ಸ್‌ ಬ್ಯಾಟ್ಸ್‌ಮನ್‌ಗಳಾದ ಜೋಯ್‌ ಕಾರ್ಟರ್‌, ಬ್ರೆಟ್‌ ಹ್ಯಾಂಪ್ಟನ್‌ ಜೊತೆಯಾಗಿ 6 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಅದರೊಂದಿಗೆ ಅದೇ ಓವರ್‌ನಲ್ಲಿ 1 ಬೌಂಡರಿ ಹಾಗೂ 1 ಸಿಂಗಲ್‌ ಕೂಡ ತೆಗೆದುಕೊಳ್ಳಲಾಗಿತ್ತು.

 

Follow Us:
Download App:
  • android
  • ios