Asianet Suvarna News Asianet Suvarna News

Vijay Hazare Trophy: ತಮಿಳುನಾಡು ವಿರುದ್ಧ ಕರ್ನಾಟಕಕ್ಕೆ ಸೋಲು

ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕಕ್ಕೆ ಮೊದಲ ಸೋಲು
ಬ್ಯಾಟಿಂಗ್ ವಿಭಾಗದ ವೈಫಲ್ಯ ಕಂಡ ಮನೀಷ್ ಟೀಮ್
ತಮಿಳುನಾಡು ತಂಡಕ್ಕೆ 8 ವಿಕೆಟ್ ಗೆಲುವು

Vijay Hazare Trophy Karnataka face defeat against Tamilnadu san
Author
Thiruvananthapuram, First Published Dec 9, 2021, 5:22 PM IST

ತಿರುವನಂತಪುರಂ (ಡಿ.09): ಬ್ಯಾಟಿಂಗ್ ನಲ್ಲಿ ನಿರಾಶಾದಾಯಕ ನಿರ್ವಹಣೆ ನೀಡಿದ ನಾಲ್ಕು ಬಾರಿಯ ಚಾಂಪಿಯನ್ ಕರ್ನಾಟಕ ತಂಡ (Karnataka) ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಏಕದಿನ ಟೂರ್ನಿಯಲ್ಲಿ ಮೊದಲ ಸೋಲು ಕಂಡಿದೆ. ಸಾಂಪ್ರದಾಯಿಕ ಎದುರಾಳಿ ತಮಿಳುನಾಡು ತಂಡದ ವಿರುದ್ಧ ಮನೀಷ್ ಪಾಂಡೆ ನೇತೃತ್ವದ ಕರ್ನಾಟಕ ತಂಡ 8 ವಿಕೆಟ್ ಗಳ ಸೋಲು ಕಂಡಿತು. ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ (Greenfield International Stadium) ಗುರುವಾರ ನಡೆದ ಎಲೈಟ್ ಬಿ ಗುಂಪಿನ 2ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ, ಎಂ.ಸಿದ್ಧಾರ್ಥ್ (M Siddharth) ಹಾಗೂ ಸಾಯಿ ಕಿಶೋರ್ (Sai Kishore) ಬೌಲಿಂಗ್ ದಾಳಿಯ ಮುಂದೆ ಪರದಾಡಿ 36.3 ಓವರ್ ಗಳಲ್ಲಿ ಕೇವಲ 122 ರನ್ ಗೆ ಆಲೌಟ್ ಆಯಿತು. ಪ್ರತಿಯಾಗಿ ತಮಿಳುನಾಡು ತಂಡ ಬಾಬಾ ಇಂದ್ರಜಿತ್ (Baba Indrajith) ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ 28 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 123 ರನ್ ಬಾರಿಸಿ ಸತತ 2ನೇ ಗೆಲುವು ಕಂಡಿತು.

ಆರಂಭಿಕರಾದ ನಾಯಕ ಎನ್.ಜಗದೀಶನ್ (16) ಹಾಗೂ ಸಾಯಿ ಸುದರ್ಶನ್ (18) ವಿಕೆಟ್ ಗಳನ್ನು ಬೇಗನೆ ಕಳೆದುಕೊಂಡರೂ ತಮಿಳುನಾಡು ತಂಡ ಹಿನ್ನಡೆ ಕಾಣಲಿಲ್ಲ. ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಬಾಬಾ ಇಂದ್ರಜಿತ್ (51*ರನ್, 74 ಎಸೆತ, 6 ಬೌಂಡರಿ) ಹಾಗೂ ಅನುಭವಿ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ (31* ರನ್, 33 ಎಸೆತ, 3 ಬೌಂಡರಿ) ಮುರಿಯದ (Washington Sundar) ಮೂರನೇ ವಿಕೆಟ್ ಗೆ 65 ರನ್ ಜೊತೆಯಾಟವಾಡುವ ಮೂಲಕ ತಂಡದ ಗೆಲುವಿಗೆ ನೆರವಾದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡಕ್ಕೆ ವೇಗಿಗಳಾದ ಸಂದೀಪ್ ವಾರಿಯರ್ (Sandeep Warrier)ಹಾಗೂ ರಘುಪತಿ ಸಿಲಂಬರಸನ್ (R Silambarasan) ನಿಖರ ದಾಳಿಯ ಮೂಲಕ ಕರ್ನಾಟಕ ಬ್ಯಾಟ್ಸ್ ಮನ್ ಗಳ ರನ್ ವೇಗಕ್ಕೆ ಕಡಿವಾಣ ಹಾಕಿದರು. 14 ಎಸೆತಗಳಲ್ಲಿ 6 ರನ್ ಬಾರಿಸಿದ್ದ ಸಿದ್ಧಾರ್ಥ್ ಕೆವಿ ( KV Siddharth) 6ನೇ ಓವರ್ ನಲ್ಲಿ ರಘುಪತಿ ಸಿಲಂಬರಸನ್ ಗೆ ವಿಕೆಟ್ ಒಪ್ಪಿಸಿದಾಗ ರಾಜ್ಯ ತಂಡ ಹಿನ್ನಡೆ ಕಂಡಿತು.


ಈ ಹಂತದಲ್ಲಿ ಜೊತೆಯಾದ ರೋಹನ್ ಕದಮ್ (37) ಹಾಗೂ ನಾಯಕ ಮನೀಷ್ ಪಾಂಡೆ (40) 3ನೇ ವಿಕೆಟ್ ಗೆ ಅಮೂಲ್ಯ 67 ರನ್ ಜೊತೆಯಾಟವಾಡುವ ಮೂಲಕ ಚೇತರಿಕೆ ನೀಡಿದ್ದರು. ಜೊತೆಯಾಟ ಉತ್ತಮವಾಗಿ ಸಾಗುತ್ತಿದ್ದ ಹಂತದಲ್ಲಿ ದಾಳಿಗಿಳಿದ ಅನುಭವಿ ಸ್ಪಿನ್ನರ್ ವಾಷಿಂಗ್ಟನ್ ಸುಂದರ್, ರೋಹನ್ ಕದಮ್ (Rohan Kadam) ಅವರನ್ನು ಎಲ್ ಬಿ ಬಲೆಗೆ ಬೀಳಿಸಿದರೆ, ತಂಡದ ಮೊತ್ತ 100ರನ್ ಗಡಿ ದಾಟಿದ ಬೆನ್ನಲ್ಲಿಯೇ ಮನೀಷ್ ಪಾಂಡೆ, ಎಂ.ಸಿದ್ಧಾರ್ಥ್(M Siddharth) ಎಸೆತಕ್ಕೆ ಬೌಲ್ಡ್ ಆಗಿ ಹೊರನಡೆದರು.

Vijay Hazare Trophy: ಪುದುಚೇರಿ ವಿರುದ್ಧ ಬೃಹತ್ ಗೆಲುವು ಸಾಧಿಸಿದ ಕರ್ನಾಟಕ
19 ರನ್ ಗೆ 7 ವಿಕೆಟ್ ಕಳೆದುಕೊಂಡ ಕರ್ನಾಟಕ
ಒಂದು ಹಂತದಲ್ಲಿ 3 ವಿಕೆಟ್ ಗೆ 103 ರನ್ ಗಳೊಂದಿಗೆ ಸವಾಲಿನ ಮೊತ್ತ ಪೇರಿಸುವ ವಿಶ್ವಾಸದಲ್ಲಿದ್ದ ಕರ್ನಾಟಕ ತಂಡಕ್ಕೆ ಸಾಯಿಕಿಶೋರ್ (28ಕ್ಕೆ 3) ಹಾಗೂ ಎಂ.ಸಿದ್ಧಾರ್ಥ್ (23ಕ್ಕೆ 4) ಆಘಾತ ನೀಡಿದರು. ಕೇವಲ 19 ರನ್ ಗಳ ಅಂತರದಲ್ಲಿ 7 ವಿಕೆಟ್ ಗಳನ್ನು ಕಳೆದುಕೊಂಡ ರಾಜ್ಯ ತಂಡ 122 ರನ್ ಗಳಿಗೆ ಆಲೌಟ್ ಆಯಿತು.

Vijay Hazare Trophy: ತಮಿಳುನಾಡು ವಿರುದ್ಧ ಅಲ್ಪ ಮೊತ್ತಕ್ಕೆ ಕುಸಿದ ಕರ್ನಾಟಕ
ಅನುಭವಿ ಬ್ಯಾಟ್ಸ್ ಮನ್ ಕರುಣ್ ನಾಯರ್ ಸತತ 2ನೇ ಪಂದ್ಯದಲ್ಲಿ ತಮ್ಮ ವೈಫಲ್ಯ ಮುಂದುವರಿಸಿದರೆ, ಕಳೆದ ಪಂದ್ಯದಲ್ಲಿ ಮಿಂಚಿನ ಅರ್ಧಶತಕ ಸಿಡಿಸಿದ್ದ ಶರತ್ ಶ್ರೀನಿವಾಸ್ ಕೇವಲ 3 ರನ್ ಬಾರಿಸಿ ಸಾಯಿ ಕಿಶೋರ್ ಗೆ ವಿಕೆಟ್ ಒಪ್ಪಿಸಿದರು. ಅನುಭವಿ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಜೆ.ಸುಚಿತ್ ಎದುರಿಸಿದ ಮೊದಲ ಎಸೆತದಲ್ಲಿಯೇ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ತಮಿಳುನಾಡು ಪರವಾಗಿ ಸಾಯಿ ಕಿಶೋರ್ (Sai Kishore) ಹಾಗೂ ಎಂ.ಸಿದ್ದಾರ್ಥ್ ಅಲ್ಲದೆ, ಸಂದೀಪ್ ವಾರಿಯರ್, ರಘುಪತಿ ಸಿಲಂಬರಸನ್ ಹಾಗೂ ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಉರುಳಿಸಿದರು.

Follow Us:
Download App:
  • android
  • ios