Asianet Suvarna News Asianet Suvarna News

ರಾಬಿನ್ ಉತ್ತಪ್ಪ ಕುಟುಂಬಕ್ಕೆ ಹೊಸ ಅತಿಥಿ ಆಗಮನ, ಸಂತಸ ಹಂಚಿಕೊಂಡ ಅನುಭವಿ ಕ್ರಿಕೆಟಿಗ

ಅನುಭವಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಕುಟುಂಬಕ್ಕೆ ಹೊಸ ಅತಿಥಿ ಸೇರ್ಪಡೆ
ಹೆಣ್ಣುಮಗುವಿಗೆ ಜನ್ಮ ನೀಡಿದ ಉತ್ತಪ್ಪ ಪತ್ನಿ ಶೀತಲ್
ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಮಗುವಿನ ಫೋಟೋ ಹಂಚಿಕೊಂಡ ಉತ್ತಪ್ಪ

Veteran Cricketer Robin Uthappa blessed with a baby girl kvn
Author
Bengaluru, First Published Jul 14, 2022, 6:06 PM IST

ಬೆಂಗಳೂರು(ಜು.14): ಭಾರತ ಕ್ರಿಕೆಟ್ ತಂಡದ ಅನುಭವಿ ಕ್ರಿಕೆಟಿಗ, ಕನ್ನಡಿಗ ರಾಬಿನ್ ಉತ್ತಮ ಅವರ ಕುಟುಂಬ ಹೊಸ ಅತಿಥಿಯನ್ನು ಸ್ವಾಗತಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಸ್ಟಾರ್ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರ ಪತ್ನಿ ಶೀತಲ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ರಾಬಿನ್ ಉತ್ತಪ್ಪ ಅವರ ಕುಟುಂಬದಲ್ಲೀಗ ಸಂಭ್ರಮ ಮೆನ ಮಾಡಿದೆ. ರಾಬಿನ್ ಉತ್ತಪ್ಪ ತಮ್ಮ ಪತ್ನಿ, ಮಗ ಹಾಗೂ ಮುದ್ದಾದ ನವಜಾತ ಮಗುವಿನ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಕೆ ಎಲ್ ರಾಹುಲ್, ಪೀಯೂಸ್ ಚಾವ್ಲಾ, ಇರ್ಫಾನ್ ಪಠಾಣ್ ಸೇರಿದಂತೆ ಹಲವು ಕ್ರಿಕೆಟಿಗರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ತಮ್ಮ ಕುಟುಂಬದ ಜತೆಗಿನ ಫೋಟೋದೊಂದಿಗೆ ರಾಬಿನ್ ಉತ್ತಪ್ಪ, ಹೃದಯ ತುಂಬಿ ಬಂದಿದೆ, ನಾವಿಂದು ನಮ್ಮ ಕುಟುಂಬದ ಜತೆಯಾದ ಹೊಸ ದೇವತೆಯನ್ನು ಪರಿಚಯಿಸಲು ಇಷ್ಟಪಡುತ್ತಿದ್ದೇವೆ. ಹೊಸ ಮಗುವಿಗೆ ಟ್ರಿನಿಟಿ ಥಿಯಾ ಉತ್ತಪ್ಪ ಎಂದು ಹೆಸರಿಟ್ಟಿದ್ದೇವೆ. ನೀವು ಜಗತ್ತಿಗೆ ಬರಲು ನಮ್ಮನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ನಾವು ಕೃತಜ್ಞರಾಗಿದ್ದೇವೆ. ನಿಮ್ಮ ಹೆತ್ತವರು ಹಾಗೂ ಸಹೋದರರನ್ನಾಗಿ ನಮ್ಮನ್ನು ಆರ್ಶೀವದಿಸಿದ್ದಕ್ಕೆ ಧನ್ಯವಾದಗಳು ಎಂದು ಉತ್ತಪ್ಪ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ರಾಬಿನ್ ಉತ್ತಪ್ಪ ಕ್ರಿಕೆಟ್ ವಿಚಾರಕ್ಕೆ ಬರುವುದಾದರೇ, 2006ರಲ್ಲಿ ಇಂಗ್ಲೆಂಡ್ ಎದುರು ಏಕದಿನ ಕ್ರಿಕೆಟ್‌ ಭಾರತ ಪರ ಪಾದಾರ್ಪಣೆ ಮಾಡಿದ್ದರು. 2007ರಲ್ಲಿ ಧೋನಿ ನೇತೃತ್ವದ ಟೀಂ ಇಂಡಿಯಾ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗುವಲ್ಲಿ ರಾಬಿನ್ ಉತ್ತಪ್ಪ ಕೂಡಾ ಮಹತ್ವದ ಪಾತ್ರವಹಿಸಿದ್ದರು. ರಾಬಿನ್ ಉತ್ತಪ್ಪ ಭಾರತ ಕ್ರಿಕೆಟ್ ತಂಡದ ಪರ 46 ಏಕದಿನ ಹಾಗೂ 13 ಟಿ20 ಪಂದ್ಯಗಳನ್ನಾಡಿ ಕ್ರಮವಾಗಿ 934 ಹಾಗೂ 249 ರನ್ ಬಾರಿಸಿದ್ದಾರೆ. ಇದಷ್ಟೆ ಅಲ್ಲದೇ 205 ಐಪಿಎಲ್ ಪಂದ್ಯಗಳನ್ನಾಡಿ ರಾಬಿನ್ ಉತ್ತಪ್ಪ 4,952 ರನ್‌ ಬಾರಿಸಿದ್ದಾರೆ. ಇನ್ನು ರಾಬಿನ್ ಉತ್ತಪ್ಪ ಕಳೆದೆರಡು ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಭಾಗವಾಗಿದ್ದಾರೆ. 2021ರಲ್ಲಿ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಾಲ್ಕನೇ ಬಾರಿಗೆ ಐಪಿಎಲ್ ಚಾಂಪಿಯನ್ ಅಗುವಲ್ಲಿ ಕೂಡಾ ಉತ್ತಪ್ಪ ಮಹತ್ವದ ಪಾತ್ರವನ್ನು ವಹಿಸಿದ್ದರು.

ಮುಂದಿನ 3 ತಿಂಗಳೊಳಗಾಗಿ ಕೆ ಎಲ್ ರಾಹುಲ್ - ಆತಿಯಾ ಶೆಟ್ಟಿ ಮದುವೆ ಫಿಕ್ಸ್..?

2021ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಬಿನ್ ಉತ್ತಪ್ಪ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. 2021ನೇ ಸಾಲಿನ ಐಪಿಎಲ್‌ನಲ್ಲಿ ಉತ್ತಮ ಗಮನಾರ್ಹ ಪ್ರದರ್ಶನ ತೋರಿದ್ದರಿಂದ 2022ನೇ ಸಾಲಿನ ಐಪಿಎಲ್ ಮೆಗಾ ಹರಾಜಿನಲ್ಲಿ ಮತ್ತೊಮ್ಮೆ ಉತ್ತಪ್ಪ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ಈ ವರ್ಷ ರಾಬಿನ್ ಉತ್ತಪ್ಪ ಕೆಲ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದರಾದರೂ, ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲರಾದರು. ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಆಡಿದ 14 ಪಂದ್ಯಗಳ ಪೈಕಿ 12 ಪಂದ್ಯಗಳಲ್ಲಿ ಸಿಎಸ್‌ಕೆ ತಂಡವನ್ನು ಪ್ರತಿನಿಧಿಸಿದ್ದರು. 

Follow Us:
Download App:
  • android
  • ios