ಚೆನ್ನೈ(ಮಾ.18): ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ತಮ್ಮ ಪ್ರಾಬಲ್ಯ ಮುಂದುವರೆಸಿರುವ ಕರ್ನಾಟಕ ಮಹಿಳಾ ತಂಡ ಹ್ಯಾಟ್ರಿಕ್‌ ಗೆಲುವು ಸಾಧಿಸಿದೆ. 

ಬುಧವಾರ ತಮಿಳುನಾಡು ವಿರುದ್ಧ ನಡೆದ ಪಂದ್ಯದಲ್ಲಿ ವೇದಾ ಕೃಷ್ಣಮೂರ್ತಿ ಗಳಿಸಿದ ಅಮೋಘ ಶತಕದ ನೆರವಿನಿಂದ ಕರ್ನಾಟಕ 86 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಎಲೈಟ್‌ ‘ಇ’ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ನಾಕೌಟ್‌ ಹಂತಕ್ಕೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ನಿಕಿ ಪ್ರಸಾದ್‌ ಆಲ್ರೌಂಡ್‌ ಪ್ರದರ್ಶನ ಕರ್ನಾಟಕ ತಂಡದ ಗೆಲುವಿನಲ್ಲಿ ತಮ್ಮದೇ ಆದ ಮಹತ್ವದ ಕಾಣಿಕೆ ನೀಡಿದ್ದಾರೆ.  

ಕೊನೆಯ ಪಂದ್ಯದಲ್ಲೂ ಸೋಲಿನ ಕಹಿಯುಂಡ ಮಿಥಾಲಿ ಪಡೆ

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಕರ್ನಾಟಕ ವೇದಾ(103) ಹಾಗೂ ಶುಭಾ(60)ರ ಆಕರ್ಷಕ ಆಟದ ನೆರವಿನಿಂದ 50 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 294 ರನ್‌ ಪೇರಿಸಿತು. ಈ ಬೃಹತ್‌ ಮೊತ್ತ ಬೆನ್ನತ್ತಿದ್ದ ತಮಿಳುನಾಡು 208 ರನ್‌ಗಳಿಗೆ ಆಲೌಟ್‌ ಆಯಿತು.

ಸ್ಕೋರ್‌: 
ಕರ್ನಾಟಕ: 294/6,
ತಮಿಳುನಾಡು 208/10