ಸಿನಿಮಾ ನಟ, ರಿಯಾಲಿಟಿ ಶೋ ಸ್ಟಾರ್ ಆಗಿದ್ದ ವರುಣ್ ಚಕ್ರವರ್ತಿ ಇದೀಗ ಟೀಂ ಇಂಡಿಯಾ ಹೀರೋ
ವರುಣ್ ಚಕ್ರವರ್ತಿ ಮಿಸ್ಟ್ರಿ ಸ್ಪಿನ್ ಮೋಡಿ ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿ ತಂದುಕೊಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ. ಈಗ ವರುಣ್ ಟೀಂ ಇಂಡಿಯಾದ ಹೀರೋ. ಆದೆರೆ ಇದಕ್ಕೂ ಮೊದಲು ವರುಣ್ ಸಿನಿಮಾದಲ್ಲಿ ನಟನಾಗಿ, ರಿಯಾಲಿಟಿ ಶೋದಲ್ಲಿ ಸ್ಟಾರ್ ಆಗಿ ಮಿಂಚಿದ್ದಾರೆ.

ಚೆನ್ನೈ(ಮಾ.12) ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆದ್ದು ಇತಿಹಾಸ ಬರೆದಿದೆ. ಸ್ಪಿನ್ ಮೋಡಿ ಮೂಲಕ ಭಾರತಕ್ಕೆ ಭರ್ಜರಿ ಯಶಸ್ಸು ತಂದುಕೊಡ್ಡ ವರುಣ್ ಚಕ್ರವರ್ತಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಎಲ್ಲೆಡೆ ವರುಣ್ ಚಕ್ರವರ್ತಿ ಸ್ಪಿನ್ ದಾಳಿ, ವಿಕೆಟ್ ಕಬಳಿಸಿದ ರೀತಿಗಳು ಚರ್ಚೆಯಾಗುತ್ತಿದೆ. ಕ್ರಿಕೆಟ್ ದಿಗ್ಗದರು ವರುಣ್ ಚಕ್ರವರ್ತಿ ಸ್ಪಿನ್ ಕೊಂಡಾಡಿದ್ದಾರೆ. ವರುಣ್ ಚಕ್ರವರ್ತಿ ಟೀಂ ಇಂಡಿಯಾ ಹೀರೋ ಆಗಿ ಮಿಂಚಿದ್ದಾರೆ. ಆದರೆ ವರುಣ್ ಚಕ್ರವರ್ತಿ ಕಾಲಿಟ್ಟಲೆಲ್ಲಾ ಹೀರೋ ಆಗಿದ್ದಾರೆ. ಹೌದು, ಕ್ರಿಕೆಟ್‌ಗೂ ಮೊದಲು ವರುಣ್ ಚಕ್ರವರ್ತಿ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಿಯಾಲಿಟಿ ಶೋನಲ್ಲಿ ಸ್ಟಾರ್ ಆಗಿ ಮಿಂಚಿದ್ದಾರೆ.
ವರುಣ್ ಚಕ್ರವರ್ತಿ ಕರಿಯರ್ ಹಲವು ಕ್ಷೇತ್ರಗಳ ಮೂಲಕ ಹಾದು ಹೋಗುತ್ತಿದೆ. ಟೀಂ ಇಂಡಿಯಾದಲ್ಲಿ ಮಿಂಚುತ್ತಿರುವ ವರುಣ್ ಚಕ್ರವರ್ತಿ ಸಿನಿಮಾದಲ್ಲೂ ನಟಿಸಿದ್ದಾರೆ. ತಮಿಳಿನ ಪ್ರಮುಖ ಸಿನಿಮಾ ಜೀವಾದಲ್ಲಿ ವರುಣ್ ಚಕ್ರವರ್ತಿ ಸಹ ನಟನಾಗಿ ನಟಿಸಿದ್ದಾರೆ. ಈ ಸಿನಿಮಾ ಕ್ರಿಕೆಟಿಗ ಜರ್ನಿ ಕುರಿತಾಗಿತ್ತು. ಈ ಸಿನಿಮಾದಲ್ಲಿ ತಂಡದ ಸಹ ಆಟಗಾರನಾಗಿ, ನಟನಾಗಿ ವರುಣ್ ಚಕ್ರವರ್ತಿ ಮಿಂಚಿದ್ದಾರೆ. ಪಾತ್ರ ಸಣ್ಣದಾಗಿತ್ತು. ಆದರೆ ಸಿನಿಮಾ ಕ್ಷೇತ್ರದಲ್ಲೂ ತಾನು ಸೈ ಎನಿಸಿಕೊಂಡಿದ್ದ ವರುಣ್ ಚಕ್ರವರ್ತಿ ಇದೀಗ ಭಾರತದ ಉತ್ತಮ ಸ್ಪಿನರ್ ಆಗಿ ಗುರುತಿಸಿಕೊಂಡಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ: ಟೀಕಾಕಾರರು ಕ್ಲೀನ್‌ಬೌಲ್ಡ್!
ಸಿನಿಮಾ ಕ್ಷೇತ್ರದಲ್ಲೇ ಮುಂದುವರಿಯುತ್ತಿದ್ದರೆ, ವರುಣ್ ಚಕ್ರವರ್ತಿ ಇದೀಗ ಬೆಳ್ಳಿ ಪರದೆಯ ಸ್ಟಾರ್ ಆಗುವದರಲ್ಲಿ ಅನುಮಾನವರಿಲ್ಲ. ಕಾರಣ ಆ ಪ್ರತಿಭೆ ವರುಣ್ ಚಕ್ರವರ್ತಿ ಬಳಿ ಇತ್ತು. 2014ರಲ್ಲಿ ವರುಣ್ ಚಕ್ರವರ್ತಿ ತಮಿಳು ಸಿನಿಮಾದಲ್ಲಿ ಕಾಣಿಸಿಕೊಂಡ ಬಳಿಕ ಸುಮ್ಮನೆ ಕೂರಲಿಲ್ಲ. ಅಷ್ಟೇ ವೇಗವಾಗಿ ರಿಯಾಲಿಟಿ ಶೋಗೂ ಎಂಟ್ರಿಕೊಟ್ಟಿದ್ದರು. ಅಡುಗೆ ಕುರಿತು ಜನಪ್ರಿಯ ರಿಯಾಲಿಟಿ ಶೋ ಕೂಕು ಕೊಮಾಲಿಯಲ್ಲಿ ವರುಣ್ ಚಕ್ರವರ್ತಿ ಕಾಣಿಸಿಕೊಂಡಿದ್ದರು.
ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡ ವರುಣ್ ಚಕ್ರವರ್ತಿ ತಮಿಳುನಾಡಿನಲ್ಲಿ ಮನೆ ಮಾತಾಗಿದ್ದರು. ಆದರೆ ಅಷ್ಟೇ ವೇಗದಲ್ಲಿ ವರುಣ್ ಚಕ್ರವರ್ತಿ ತಮಿಳುನಾಡು ರಣಜಿ ತಂಡಕ್ಕೆ ಆಯ್ಕೆಯಾಗುವ ಮೂಲಕ ಕರಿಯರ್ ಬದಲಿಸಿದ್ದರು. ಬಳಿಕ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡದಲ್ಲಿ ಮಿಂಚಿದ್ದಾರೆ. ಟೀಂ ಇಂಡಿಯಾಗೆ ಆಯ್ಕೆಯಾಗುವ ಮೂಲಕ 10 ವರ್ಷಗಳ ಹಿಂದೆ ಕ್ರಿಕೆಟ್‌ನಲ್ಲಿ ಸಣ್ಣ ಪಾತ್ರ ಮಾಡಿದ್ದ ವರುಣ್ ಚಕ್ರವರ್ತಿ ದಿಗ್ಗಜರ ಜೊತೆಗೆ ಡ್ರೆಸ್ಸಿಂಗ್ ರೂಂ ಹಂಚಿಕೊಂಡು ಸಂಭ್ರಮಪಟ್ಟಿದ್ದರು.
ಈ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ವರುಣ್ ಚಕ್ರವರ್ತಿ ಅದ್ಭುತ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಟ್ಟಿಹಾಕಿದ್ದರು. ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ದ ವರುಣ್ ಚಕ್ರವರ್ತಿ ಸೇರಿದಂತೆ ಟೀಂ ಇಂಡಿಯಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿತ್ತು. ಈ ಮೂಲಕ ನ್ಯೂಜಿಲೆಂಡ್ ತಂಡವನ್ನು 251 ರನ್‌ಗೆ ನಿಯಂತ್ರಿಸಿತ್ತು. ಬಳಿಕ 4 ವಿಕೆಟ್ ಗೆಲುವು ದಾಖಲಿಸಿತ್ತು.
ಕಪ್ ಗೆಲ್ಲದಿದ್ರೂ ಆರ್‌ಸಿಬಿ ಬೆಂಗಳೂರಿಗರ ಹೃದಯಲ್ಲಿದೆ ಯಾಕೆ? ತೇಜಸ್ವಿ ಸೂರ್ಯ ಬಿಚ್ಚಿಟ್ಟ ಫ್ಯಾನ್ಸ್ ಸೀಕ್ರೆಟ್