ಅಂಡರ್‌-19 ಏಷ್ಯಾಕಪ್‌: ಗುಡುಗಿದ 13 ವರ್ಷದ ವೈಭವ್ ಸೂರ್ಯವನ್ಶಿ, ಲಂಕಾವನ್ನು ಬಗ್ಗುಬಡಿದು ಭಾರತ ಫೈನಲ್‌ಗೆ ಲಗ್ಗೆ

ಅಂಡರ್‌-19 ಏಷ್ಯಾಕಪ್‌ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ದಾಖಲೆಯ 9ನೇ ಬಾರಿ ಭಾರತ ಫೈನಲ್ ಪ್ರವೇಶಿಸಿದೆ. ಪ್ರಶಸ್ತಿ ಸುತ್ತಿನಲ್ಲಿ ಭಾರತ ತಂಡವು ಬಾಂಗ್ಲಾದೇಶ ಎದುರು ಕಾದಾಡಲಿದೆ. 

Vaibhav Suryavanshi Steers India Into U 19 Asia Cup Final for 9th time kvn

ಶಾರ್ಜಾ(ಯುಎಇ): 8 ಬಾರಿ ಚಾಂಪಿಯನ್‌ ಭಾರತ ಅಂಡರ್‌-19 ಏಷ್ಯಾಕಪ್‌ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ದಾಖಲೆಯ 9ನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಶುಕ್ರವಾರ ನಡೆದ 11ನೇ ಆವೃತ್ತಿಯ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತ 7 ವಿಕೆಟ್‌ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ 6ನೇ ಬಾರಿ ಪ್ರಶಸ್ತಿ ಸುತ್ತಿಗೇರುವ ಲಂಕಾ ಕನಸು ಭಗ್ನಗೊಂಡಿತು.

ಮೊದಲು ಬ್ಯಾಟ್‌ ಮಾಡಿದ ಲಂಕಾ 46.2 ಓವರ್‌ಗಳಲ್ಲಿ 173 ರನ್‌ಗೆ ಸರ್ವಪತನ ಕಂಡಿತು. ಲಾಕ್ವಿನ್‌ ಅಬೇಸಿಂಘೆ 69, ಶಾರುಜನ್‌ ಷಣ್ಮುಗನಾಥನ್‌ 42 ರನ್‌ ಗಳಿಸಿದ್ದು ಬಿಟ್ಟರೆ ಇತರರು ವೈಫಲ್ಯ ಅನುಭವಿಸಿದರು. ಚೇತನ್‌ ಶರ್ಮಾ 3, ಆಯುಶ್‌ ಮಾಥ್ರೆ, ಕಿರಣ್‌ ತಲಾ 2 ವಿಕೆಟ್‌ ಕಿತ್ತರು.

ಅಡಿಲೇಡ್ ಟೆಸ್ಟ್‌ನಲ್ಲಿ ಸಿರಾಜ್ 181.6 kph ವೇಗದಲ್ಲಿ ಬೌಲಿಂಗ್? ಇದು ನಿಜಾನಾ?

ಸುಲಭ ಗುರಿಯನ್ನು ಭಾರತ ಕೇವಲ 21.4 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟದಲ್ಲಿ ಬೆನ್ನತ್ತಿ ಗೆಲುವು ತನ್ನದಾಗಿಸಿಕೊಂಡಿತು. 13 ವರ್ಷದ ವೈಭವ್‌ ಸೂರ್ಯವಂಶಿ(36 ಎಸೆತಗಳಲ್ಲಿ 67) ಸತತ 2ನೇ ಅರ್ಧಶತಕ ಬಾರಿಸಿದರು. ಆಯುಶ್‌ 34, ನಾಯಕ ಮೊಹಮದ್‌ ಅಮಾನ್‌ ಔಟಾಗದೆ 25 ರನ್‌ ಸಿಡಿಸಿದರು.

ಸ್ಕೋರ್‌: ಶ್ರೀಲಂಕಾ 46.2 ಓವರ್‌ಗಳಲ್ಲಿ 173/10 (ಲಾಕ್ವಿನ್‌ 69, ಶಾರುಜನ್‌ 42, ಚೇತನ್‌ 3-34), ಭಾರತ 21.4 ಓವರ್‌ಗಳಲ್ಲಿ 175/3 (ವೈಭವ್‌ 67, ಆಯುಶ್‌ 34, ಪ್ರವೀಣ್‌ 1-27) ಪಂದ್ಯಶ್ರೇಷ್ಠ: ವೈಭವ್‌ ಸೂರ್ಯವಂಶಿ

ನಾಳೆ ಬಾಂಗ್ಲಾ ವಿರುದ್ಧ ಫೈನಲ್‌

ಭಾರತ ತಂಡ ಫೈನಲ್‌ನಲ್ಲಿ ಭಾನುವಾರ ಬಾಂಗ್ಲಾದೇಶ ವಿರುದ್ಧ ಸೆಣಸಾಡಲಿದೆ. ಶುಕ್ರವಾರದ ಮತ್ತೊಂದು ಸೆಮೀಸ್‌ನಲ್ಲಿ ಪಾಕಿಸ್ತಾನ ವಿರುದ್ಧ ಬಾಂಗ್ಲಾ 7 ವಿಕೆಟ್‌ ಗೆಲುವು ಸಾಧಿಸಿತು. ಹಾಲಿ ಚಾಂಪಿಯನ್‌ ಬಾಂಗ್ಲಾ ಸತತ 2ನೇ ಬಾರಿ ಫೈನಲ್‌ ಪ್ರವೇಶಿಸಿದೆ.

ಪಿಂಕ್‌ ಬಾಲ್ ಟೆಸ್ಟ್‌ನಲ್ಲಿ ಪರದಾಡಿದ ಟೀಂ ಇಂಡಿಯಾ; ಮೊದಲ ದಿನವೇ ಸಾಧಾರಣ ಮೊತ್ತಕ್ಕೆ ಆಲೌಟ್!

ರಾಷ್ಟ್ರೀಯ ವನಿತಾ ಏಕದಿನ: ಕರ್ನಾಟಕಕ್ಕೆ 2ನೇ ಗೆಲುವು

ಗುರುಗ್ರಾಮ(ಹರ್ಯಾಣ): ರಾಷ್ಟ್ರೀಯ ಹಿರಿಯ ಮಹಿಳೆಯರ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ಸತತ 2ನೇ ಗೆಲುವು ಸಾಧಿಸಿದೆ. ಆರಂಭಿಕ ಪಂದ್ಯದಲ್ಲಿ ಮೇಘಾಲಯವನ್ನು ಮಣಿಸಿದ್ದ ರಾಜ್ಯ ತಂಡ, ಶುಕ್ರವಾರ ಚಂಡೀಗಢ ವಿರುದ್ಧ 7 ವಿಕೆಟ್‌ಗಳಿಂದ ಜಯಗಳಿಸಿತು. ಇದರೊಂದಿಗೆ ‘ಇ’ ಗುಂಪಿನಲ್ಲಿ 8 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ.

ಮೊದಲು ಬ್ಯಾಟ್‌ ಮಾಡಿದ 40.2 ಓವರ್‌ಗಳಲ್ಲಿ 104 ರನ್‌ಗೆ ಆಲೌಟಾಯಿತು. ಶಿವಾಂಗಿ 30, ಆರಾಧನಾ ಬಿಷ್ತ್‌ 20 ರನ್‌ ಗಳಿಸಿದರು. ಮೋನಿಕಾ ಪಟೇಲ್‌ 20 ರನ್‌ಗೆ 5 ವಿಕೆಟ್‌ ಕಿತ್ತರು. ಸುಲಭ ಗುರಿ ಬೆನ್ನತ್ತಿದ ಕರ್ನಾಟಕ 23 ಓವರ್‌ಗಳಲ್ಲೇ ಗೆಲುವು ತನ್ನದಾಗಿಸಿಕೊಂಡಿತು. ವೃಂದಾ ದಿನೇಶ್‌ 44, ಶುಭಾ ಸತೀಶ್‌ 22 ರನ್‌ ಗಳಿಸಿದರು. ಮುಂದಿನ ಪಂದ್ಯದಲ್ಲಿ ರಾಜ್ಯ ತಂಡ ಡಿ.8ಕ್ಕೆ ರಾಜಸ್ಥಾನ ವಿರುದ್ಧ ಸೆಣಸಾಡಲಿದೆ.

Latest Videos
Follow Us:
Download App:
  • android
  • ios