ವೈಭವ್ ಸೂರ್ಯವಂಶಿ ಡೆಬ್ಯೂ ಮಾಡಿದ ಇಂಗ್ಲೆಂಡ್ ವಿರುದ್ದದ 2ನೇ ಟಿ20 ಪಂದ್ಯದಲ್ಲಿ ಭಾರತ ರನ್ ಸಿಡಿಸಿದೆ. ಮ್ಯಾಂಚೆಸ್ಟರ್‌ನಲ್ಲಿ ಈ ಟಾರ್ಗೆಟನ್ನು ಟೀಂ ಇಂಡಿಯಾ ಯಶಸ್ವಿಯಾಗಿ ಡಿಫೆಂಡ್ ಮಾಡುತ್ತಾ?
ಮ್ಯಾಂಚೆಸ್ಟರ್ (ಜು.04) ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟಿ20 ಪಂದ್ಯ ಹಲವು ಕಾರಣಗಳಿಂದ ಕುತೂಹಲ ಹೆಚ್ಚಿಸಿತು. ಒಂದೆಡೆ 15ರ ಪೋರ ವೈಭವ್ ಸೂರ್ಯವಂಶಿ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಅಭಿಷೇಕ್ ಅಬ್ಬರಿಸಿದರೆ, ವೈಭವ್ ಸೂರ್ವಂಶಿ ಅಬ್ಬರಿಸುವ ಸೂಚನೆ ನೀಡಿದರೂ ಬಿಗ್ ಸ್ಕೋರ್ ಬರಲಿಲ್ಲ. ಇಶಾನ್ ಕಿಶನ್, ನಾಯಕ ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ ಬ್ಯಾಟಿಂಗ್ ಕೊಡುಗೆಯಿಂದ ಭಾರತ 7 ವಿಕೆಟ್ ನಷ್ಟಕ್ಕೆ 190 ರನ್ ಸಿಡಿಸಿತು.
ವೈಭವ್ ಸೂರ್ಯವಂಶಿ ದಾಖಲೆ
ವೈಭವ್ ಸೂರ್ಯವಂಶಿ ಭಾರತದ ಪರ ಡೆಬ್ಯೂ ಮಾಡಿದ ಅತೀ ಕಿರಿಯ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದರು. ಇನ್ನು ಆರಂಭದಲ್ಲೇ 2 ಸಿಕ್ಸರ್ ಸಿಡಿಸಿ ಅಬ್ಬರಿಸಿದ ವೈಭವ್ 14 ರನ್ ಸಿಡಿಸಿ ಔಟಾದರು. ಇತ್ತ ಅಭಿಷೇಕ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. 24 ಎಸೆತದಲ್ಲಿ 43 ರನ್ ಸಿಡಿಸಿ ಔಟಾದರು.
ಇಶಾನ್ ಕಿಶನ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಜೊತೆಯಾಟದಿಂದ ಆರಂಭಿಕ ಆಘಾತದಿಂದ ಭಾರತ ಬೌನ್ಸ್ ಬ್ಯಾಕ್ ಮಾಡಿತ್ತು. ಇಶಾನ್ ಕಿಶನ್ 49 ರನ್ ಸಿಡಿಸಿದರೆ, ಶ್ರೇಯಸ್ ಅಯ್ಯರ್ 37 ರನ್ ಸಿಡಿಸಿದರು. ಆದರೆ ಶಿವಂ ದುಬೆ ನಿರಾಸೆ ಮೂಡಿಸಿದರು. ಕೇವಲ 5 ರನ್ ಸಿಡಿಸಿ ನಿರ್ಗಮಿಸಿದರು. ಅಂತಿಮ ಹಂತದಲ್ಲಿ ತಿಲಕ್ ವರ್ಮಾ ಸ್ಫೋಟಕ ಬ್ಯಾಟಿಂಗ್ ತಂಡಕ್ಕೆ ನೆರವಾಯಿತು. ತಿಲಕ್ ವರ್ಮಾ 11 ಎಸೆತದಲ್ಲಿ ಅಜೇಯ 24 ರನ್ ಸಿಡಿಸಿದರು. ಭಾರತ 7 ವಿಕೆಟ್ ನಷ್ಟಕ್ಕೆ 190 ರನ್ ಸಿಡಿಸಿತು.
ವೈಯುಕ್ತಿಕ ಅರ್ಧಶತಕ ವಿಲ್ಲದೆ ಭಾರತ ಸಿಡಿಸಿದ ಗರಿಷ್ಠ ಟೋಟಲ್ (ಟಿ20)
- 208 ರನ್ vs ನ್ಯೂಜಿಲೆಂಡ್, 2019
- 191 ರನ್ vs ವೆಸ್ಟ್ ಇಂಡೀಸ್, 2022
- 190 ರನ್ vs ವೆಸ್ಟ್ ಇಂಡೀಸ್, 2017
- 190 ರನ್ vs ಇಂಗ್ಲೆಂಡ್, 2026


