ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ, ಜಿಂಬಾಬ್ವೆಯ 7 ಅಡಿ ಎತ್ತರದ ವೇಗದ ಬೌಲರ್ ಬ್ಲೆಸಿಂಗ್ ಮುಜರಬಾನಿಯ ಕಠಿಣ ಸವಾಲನ್ನು ಎದುರಿಸಲು ಸಜ್ಜಾಗಿದ್ದಾರೆ. ಜೋಫ್ರಾ ಆರ್ಚರ್ ಅವರನ್ನು ಎದುರಿಸಿದ ಅನುಭವವಿದ್ದರೂ, ಮುಜರಬಾನಿಯ ಎತ್ತರ ಮತ್ತು ಹರಾರೆ ಪಿಚ್‌ನ ಬೌನ್ಸ್ ವೈಭವ್‌ಗೆ ಹೊಸ ಅಗ್ನಿಪರೀಕ್ಷೆಯಾಗಲಿದೆ.

ಹರಾರೆ ಸ್ಪೋರ್ಟ್ಸ್ ಕ್ಲಬ್ ನೆಟ್ಸ್‌ನಲ್ಲಿ 7 ಅಡಿ ಎತ್ತರದ ಆ ಕ್ರಿಕೆಟ್ ದೈತ್ಯ ಆತ ಎಸೆಯುತ್ತಿದ್ದ ಒಂದೊಂದು ಎಸೆತವೂ ಒಂದು ವಿಷಯವನ್ನು ಸ್ಪಷ್ಟಪಡಿಸುತ್ತಿತ್ತು. ಅವನು ಯಾವುದೋ ನಿರ್ದಿಷ್ಟ ಸ್ಟ್ಯಾಟರ್ಜಿಯೊಂದಿಗೆ ಬಂದಿದ್ದಾನೆ. ನಾವು ಹೇಳ್ತಿರೋದು ಜಿಂಬಾಬ್ವೆಯ ಅತ್ಯಂತ ಅಪಾಯಕಾರಿ ಫಾಸ್ಟ್ ಬೌಲರ್ ಬ್ಲೆಸಿಂಗ್ ಮುಜರಬಾನಿ ಬಗ್ಗೆ. ಭಾರತೀಯ ಕ್ರಿಕೆಟ್‌ನ ಹೊಸ ಸಂವೇದನೆ ವೈಭವ್ ಸೂರ್ಯವಂಶಿ ಈಗ ಜಿಂಬಾಬ್ವೆ ಮೈದಾನದಲ್ಲಿ ಅಂತಹದ್ದೇ ಒಂದು ಕಠಿಣ ಸವಾಲನ್ನು ಎದುರಿಸಲು ರೆಡಿಯಾಗಿದ್ದಾರೆ.

ನಡೆಯುತ್ತಾ ಜಟಾಪಟಿ?

ಜೋಫ್ರಾ ಆರ್ಚರ್ ಅವರ ಬೆಂಕಿಯಂತಹ ಬಾಲ್‌ಗಳನ್ನು ಎದುರಿಸಿದ ಅನುಭವ ವೈಭವ್‌ಗಿದೆ. ಆದರೆ, ಮುಜರಬಾನಿಯ ಎತ್ತರ ಹಾಗೂ ಅಬ್ಬರದ ರನ್‌-ಅಪ್ ಭಾರತದ ಯುವ ಬ್ಯಾಟಿಂಗ್ ಲೈನ್‌ಅಪ್‌ಗೆ, ವಿಶೇಷವಾಗಿ ವೈಭವ್ ಸೂರ್ಯವಂಶಿಗೆ ದೊಡ್ಡ ಪರೀಕ್ಷೆಯಾಗಲಿದೆ. ಇದು ಯುವ ರಕ್ತದ ಉತ್ಸಾಹ ಮತ್ತು ಅನುಭವದ ನಡುವಿನ ರೋಮಾಂಚಕ ಜಟಾಪಟಿಯಾಗೋದ್ರಲ್ಲಿ ಡೌಟೇ ಇಲ್ಲ!

ಆರ್ಚರ್ ಎತ್ತರ, ವಿಭಿನ್ನ ಸವಾಲು!

ವೈಭವ್ ಸೂರ್ಯವಂಶಿ ಇತ್ತೀಚೆಗೆ ತಮ್ಮ ಬಿಡುವಿಲ್ಲದ, ನಿರ್ಭೀತ ಬ್ಯಾಟಿಂಗ್‌ನಿಂದ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ಇಂಗ್ಲೆಂಡ್‌ನ ದಂತಕಥೆ ಜೋಫ್ರಾ ಆರ್ಚರ್ ಅವರ ಸ್ಪೀಡ್ ಎದುರಿಸಿದ ಅನುಭವ ಅವರಲ್ಲಿದೆ. ಆದರೆ, ಜಿಂಬಾಬ್ವೆ ನೆಲದಲ್ಲಿ ಇಂಟರ್ನ್ಯಾಷನಲ್ ಕಾಂಪಿಟೇಷನ್ ಸಂಪೂರ್ಣ ವಿಭಿನ್ನವಾಗಿರುತ್ತದೆ. ಮುಜರಬಾನಿಯ 7 ಅಡಿ ಎತ್ತರವೇ ಅವರಿಗೆ ಪ್ಲಸ್ ಪಾಯಿಂಟ್. ಅದು ಪಿಚ್‌ನಿಂದ ಎಕ್ಸ್‌ಟ್ರಾ ಮತ್ತು ಡೇಂಜರಸ್ ಬೌನ್ಸ್ ನೀಡುತ್ತದೆ. ಇದನ್ನು ಗೆಸ್ ಮಾಡುವುದು ಯಾವುದೇ ಯಂಗ್ ಬ್ಯಾಟ್ಸ್‌ಮನ್‌ಗೆ ಸುಲಭವಲ್ಲ. ಆರ್ಚರ್‌ ಬಳಿ ಸ್ಪೀಡ್ ಮತ್ತು ಸ್ವಿಂಗ್ ಇದ್ದರೆ, ಮುಜರಬಾನಿ ಬ್ಯಾಟ್ಸ್‌ಮನ್‌ನ ಎದೆ ಹಾಗೂ ಹೆಲ್ಮೆಟ್‌ಗೆ ಟಾರ್ಗೆಟ್ ಮಾಡಿ ಬಾಲ್ ಎಸೆಯುವ ಮಾಸ್ಟರ್!

ಹರಾರೆಯಲ್ಲಿ ವೈಭವ್‌ಗೆ 'ರಿಯಲ್ ಟೆಸ್ಟ್!

ಅಂಡರ್-19 ಹಂತದಲ್ಲೇ ತಮ್ಮ ಮಾಸ್ಟರ್ ಕ್ಲಾಸ್ ಬ್ಯಾಟಿಂಗ್ ತೋರಿಸಿರುವ ವೈಭವ್‌ಗೆ ಹರಾರೆ ಪಿಚ್‌ಗಳು ಹೊಸ ಪಾಠ ಕಲಿಸಲಿವೆ. ಇಲ್ಲಿನ ಪಿಚ್‌ಗಳಲ್ಲಿ ಆರಂಭಿಕ ಓವರ್‌ಗಳಲ್ಲಿ ಡಬಲ್ ಬೌನ್ಸ್ ಮತ್ತು ಸೀಮ್ ಮೂವ್‌ಮೆಂಟ್ ಇರುತ್ತದೆ. ವೈಭವ್ ಅವರನ್ನು ಫ್ರಂಟ್ ಫುಟ್‌ಗೆ ಬರದಂತೆ ತಡೆದು, ಶಾರ್ಟ್-ಪಿಚ್ ಬಾಲ್‌ಗಳಿಂದ ಪರೀಕ್ಷಿಸುವುದು ಮುಜರಬಾನಿಯ ಪ್ಲಾನ್. ಹೀಗಾಗಿ ವೈಭವ್ ಬ್ಯಾಟಿಂಗ್ ಸ್ಟ್ರಾಟಜಿ ಕ್ಲಿಯರ್ ಆಗಿರಬೇಕು. ಆರಂಭದಲ್ಲಿ ಮುಜರಬಾನಿ ಸ್ಪೆಲ್‌ಗೆ ಗೌರವ ಕೊಟ್ಟು ಎಚ್ಚರಿಕೆಯಿಂದ ಆಡಬೇಕು. ಅವರ ಸ್ಪೀಡ್ ಬಳಸಿ ಕಟ್ ಅಥವಾ ಪುಲ್ ಶಾಟ್‌ಗಳ ಮೇಲೆ ಡಿಪೆಂಡ್ ಆಗಬೇಕಾಗುತ್ತದೆ. ವೈಭವ್ ವಿಕೆಟ್ ಒಪ್ಪಿಸದೇ ಈ ೬.೮ ಅಡಿಯ ಬೌಲರ್‌ನ ಆರಂಭಿಕ ಓವರ್‌ಗಳನ್ನು ದಾಟಿದರೆ, ಮ್ಯಾಚ್ ಇಂಡಿಯಾ ಕಡೆ ಶಿಫ್ಟ್ ಆಗುವುದು ಖಚಿತ.

ಟಿ20 ವರ್ಲ್ಡ್ ಕಪ್‌ ನೆನಪಿಸುವ ಪ್ರದರ್ಶನ!

ಬ್ಲೆಸಿಂಗ್ ಮುಜರಬಾನಿ ಸಧಾರಣ ಬೌಲರ್ ಅಲ್ಲ; ಗ್ಲೋಬಲ್ ವೇದಿಕೆಯಲ್ಲಿ ತಮ್ಮ ತಾಕತ್ತು ತೋರಿಸಿದವರು. ಕಳೆದ ಟಿ20 ವರ್ಲ್ಡ್ ಕಪ್‌ನಲ್ಲಿ ಮುಜರಬಾನಿ ತೀಕ್ಷ್ಣ ಬೌಲಿಂಗ್‌ಗೆ ವಿಶ್ವದ ಟಾಪ್ ಬ್ಯಾಟ್ಸ್‌ಮನ್‌ಗಳೇ ಶರಣಾಗಿದ್ದರು. ಐಸಿಸಿ ಟೂರ್ನಿಗಳಲ್ಲಿ ಜಿಂಬಾಬ್ವೆಗೆ ಸಾಲು ಸಾಲು ಗೆಲುವು ತಂದುಕೊಟ್ಟಿರುವ ಮುಜರಬಾನಿ, ಆಸ್ಟ್ರೇಲಿಯಾ ವಿರುದ್ಧ ನೀಡಿದ್ದ ಪರ್ಫಾರ್ಮೆನ್ಸ್ ಅನ್ನು ಫ್ಯಾನ್ಸ್ ಇಂದಿಗೂ ಮರೆತಿಲ್ಲ. ಈ ಬಿಗ್ ಮ್ಯಾಚ್ ಎಕ್ಸ್‌ಪೀರಿಯನ್ಸ್ ಅನ್ನು ಈಗ ಭಾರತದ ವಿರುದ್ಧ ಬಳಸಲಿದ್ದಾರೆ.

ಪವರ್‌ಪ್ಲೇ ಹಾಗೂ ಡೆತ್ ಓವರ್‌ಗಳ ಕಿಂಗ್!

ಮುಜರಬಾನಿ ಬೌಲಿಂಗ್‌ನಲ್ಲಿ ಮೂರು ಮೇಜರ್ ಪ್ಲಸ್ ಪಾಯಿಂಟ್‌ಗಳಿವೆ ಅವುಗಳೆನೆಂದರೆ,

1. ಅಕ್ಯುರೇಟ್ ಲೈನ್: ಒಂದೇ ಲೆಂಗ್ತ್‌ನಲ್ಲಿ ಕಂಟಿನ್ಯೂಯಸ್ ಆಗಿ ಬೌಲಿಂಗ್ ಮಾಡಿ ಬ್ಯಾಟ್ಸ್‌ಮನ್‌ಗೆ ರನ್ ಗಳಿಸಲು ಅವಕಾಶವನ್ನೇ ಕೊಡಲ್ಲ.

2. ಪವರ್‌ಪ್ಲೇ ಕಂಟ್ರೋಲ್: ಹೊಸ ಚೆಂಡಿನಲ್ಲಿ ಬೌನ್ಸ್ ತಂದು ಬ್ಯಾಟ್ಸ್‌ಮನ್‌ಗಳು ಮುಕ್ತವಾಗಿ ಕೈ ಬೀಸದಂತೆ ಕಟ್ಟುಹಾಕುತ್ತಾರೆ.

3. ಡೆತ್ ಓವರ್ ಯಾರ್ಕರ್ಸ್: ಕೊನೆಯ ಓವರ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳು ರಿಸ್ಕ್ ತಗೊಂಡಾಗ, 140+ ಕಿಮೀ ಸ್ಪೀಡ್‌ನಲ್ಲಿ ಬರುವ ಇವರ ನಿಖರ ಯಾರ್ಕರ್‌ಗಳು ನೇರವಾಗಿ ಸ್ಟಂಪ್ಸ್ ಹಾರಿಸುತ್ತವೆ.

ಹರಾರೆಯಲ್ಲಿ ಮಹಾ ಯುದ್ಧ!

ಈ ಸರಣಿಯಲ್ಲಿ ಕ್ರಿಕೆಟ್ ಪ್ರಿಯರಿಗೆ ಫುಲ್ ಎಂಟರ್‌ಟೇನ್‌ಮೆಂಟ್ ಕಾಯ್ತಿದೆ. ಒಂದೆಡೆ ಕಳೆದುಕೊಳ್ಳಲು ಏನೂ ಇಲ್ಲದೆ, ಸಾಧಿಸಲು ಇಡೀ ಆಕಾಶವೇ ಮುಂದಿರುವ ಭಾರತದ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ. ಇನ್ನೊಂದೆಡೆ ತವರು ಮೈದಾನದಲ್ಲಿ ಯುವ ಭಾರತೀಯರನ್ನು ಕಟ್ಟಿಹಾಕಲು ಕಾಯುತ್ತಿರುವ ಅನುಭವಿ ಅಸ್ತ್ರ ಬ್ಲೆಸಿಂಗ್ ಮುಜರಬಾನಿ. ಜೋಫ್ರಾ ಆರ್ಚರ್ ಸವಾಲಿನ ನಂತರ, ಮುಜರಬಾನಿಯ ಈ ಕಠಿಣ ಪರೀಕ್ಷೆ ವೈಭವ್ ಕರಿಯರ್‌ಗೆ ಹೊಸ ದಿಕ್ಕು ನೀಡಬಹುದು. ವೈಭವ್ ಈ ಎತ್ತರದ ಸವಾಲನ್ನು ಮೆಟ್ಟಿ ನಿಲ್ತಾರಾ ಅಥವಾ ಮುಜರಬಾನಿ ಬೌನ್ಸರ್‌ಗಳಿಗೆ ವಿಕೆಟ್ ಒಪ್ಪಿಸ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ!