ಐಪಿಎಲ್ ಇತಿಹಾಸದ 2ನೇ ಅತ್ಯಂತ ವೇಗದ ಎಸೆತ ಎಸೆದ ಉಮ್ರಾನ್ ಮಲಿಕ್!
ಸನ್‌ರೈಸರ್ಸ್ ಹೈದರಾಬಾದ್‌ನ ಉಮ್ರಾನ್ ಮಲಿಕ್ ಪ್ರತಿ ಬಾರಿಯೂ ತಮ್ಮ ವೇಗದ ಬೌಲಿಂಗ್‌ನಿಂದ ಅಚ್ಚರಿ ಮೂಡಿಸಿದ್ದಾರೆ. ಗುರುವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ, ಉಮ್ರಾನ್ ಮಲಿಕ್ 157 KMPH ವೇಗದಲ್ಲಿ ಬೌಲಿಂಗ್ ಮಾಡಿದರು, ಇದು ಈ ಋತುವಿನ ವೇಗದ ಎಸೆತವೂ ಅಗಿದೆ.
ಮುಂಬೈ (ಮೇ. 5): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರಲ್ಲಿ ದೆಹಲಿ ಕ್ಯಾಪಿಟಲ್ಸ್ (Delhi Capitals ) ಮತ್ತು ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡಗಳು ಗುರುವಾರ ಮುಖಾಮುಖಿಯಾಗಿದ್ದವು. ಸಾಕಷ್ಟು ರನ್ ಹರಿದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 21 ರನ್ ಗಳಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿತು.
ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಉಮ್ರಾನ್ ಮಲಿಕ್ (Umran Malik) ಐಪಿಎಲ್ ಇತಿಹಾಸದಲ್ಲಿ ಎರಡನೇ ವೇಗದ ಎಸೆತವನ್ನು ಎಸೆದ ಇತಿಹಾಸವನ್ನು ನಿರ್ಮಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಉಮ್ರಾನ್ ಮಲಿಕ್ ಗಂಟೆಗೆ 157 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದರು. ಇದು ಹಾಲಿ ಋತುವಿನ ಅತ್ಯಂತ ವೇಗದ ಎಸೆತವೂ ಆಗಿದೆ.
ಉಮ್ರಾನ್ ಮಲಿಕ್ ಐಪಿಎಲ್ 2022 ರಲ್ಲಿ ಸತತವಾಗಿ ತಮ್ಮ ವೇಗದ ಬೌಲಿಂಗ್ ಮೂಲಕ ಗಮನಸೆಳೆದಿದ್ದಾರೆ. ಅದಲ್ಲದೆ, ಅವರ ವೇಗದ ಬೌಲಿಂಗ್ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಗುರುವಾರ ಉಮ್ರಾನ್ ಮಲಿಕ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೆಯ ಓವರ್ ಬೌಲ್ ಮಾಡಿದಾಗ ಚೆಂಡುಗಳು ಬೆಂಕಿ ಉಂಡೆಯ ರೀತಿ ಬ್ಯಾಟ್ಸ್ ಮನ್ ಕಡೆ ಬಂದವು. ಈ ಓವರ್‌ನ ಹೆಚ್ಚಿನ ಎಸೆತವೂ 150ಕ್ಕಿಂತ ಹೆಚ್ಚಿನ ವೇಗವನ್ನು ಹೊಂದಿತ್ತು.
ಉಮ್ರಾನ್ ಮಲಿಕ್ಎಸೆದ ಕೊನೇ ಓವರ್
19.1: 153 KMPH
19.2: 145 KMPH
19.3: 154 KMPH
19.4: 157 KMPH
19.5: 156 KMPH
ಉಮ್ರಾನ್ ಮಲಿಕ್ ತಮ್ಮ ವೇಗದ ಬೌಲಿಂಗ್ ನಿಂದ ಗಮನಸೆಳೆದರೂ, ಅವರ ಎಸೆತಗಳಲ್ಲಿ ಬ್ಯಾಟ್ಸ್ ಮನ್ ಗಳು ಧಾರಾಳವಾಗಿ ರನ್ ಗಳಿಸಿದರು. ಅದರಲ್ಲೂ 20ನೇ ಓವರ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 19 ರನ್ ಗಳಿಸಿತು. 157 KMPH ಎಸೆತದಲ್ಲಿ ಡೆಲ್ಲಿಯ ಬ್ಯಾಟ್ಸ್ ಮನ್ ರೋವ್ ಮನ್ ಪಾವೆಲ್ ಆಕರ್ಷಕ ಬೌಂಡರಿಯನ್ನೂ ಸಿಡಿಸಿದರು.
ಐಪಿಎಲ್ ಇತಿಹಾಸದಲ್ಲಿ ಅತಿವೇಗದ ಎಸೆದ ಎಸೆದ ದಾಖಲೆ ಶಾನ್ ಟೈಟ್ ಹೆಸರಿನಲ್ಲಿದೆ. ಆಸ್ಟ್ರೇಲಿಯಾದ ಶಾನ್ ಟೈಟ್ 157.71 KMPH ಅಲ್ಲಿ ಬೌಲಿಂಗ್ ಮಾಡಿರುವುದು ಐಪಿಎಲ್ ದಾಖಲೆ. ಉಮ್ರನ್ ಮಲಿಕ್ ಅವರ ಎಸೆತ ( 157.00 KMPH) 2ನೇ ಸ್ಥಾನಕ್ಕೇರಿದ್ದರೆ, ದಕ್ಷಿಣ ಆಫ್ರಿಕಾದ ವೇಗಿ ಹಾಗೂ ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ಆನ್ರಿಚ್ ನೋರ್ಜೆ (156.22 KMPH) ಮೂರನೇ ಸ್ಥಾನದಲ್ಲಿದ್ದಾರೆ.
IPLನಲ್ಲಿ ಹಲ್ಚಲ್ ಎಬ್ಬಿಸಿದ ‘ಜಮ್ಮು ಎಕ್ಸ್ಪ್ರೆಸ್’ ಉಮ್ರಾನ್ ಮಲಿಕ್..!
ಉಮ್ರಾನ್ ಮಲಿಕ್ IPL 2022 ರಲ್ಲಿ ಬಿರುಗಾಳಿಯ ವೇಗದಲ್ಲಿ ನಿರಂತರವಾಗಿ ಬೌಲಿಂಗ್ ಮಾಡಿದ್ದಾರೆ. ಅವರು ಬಹುತೇಕ ಎಲ್ಲಾ ಪಂದ್ಯಗಳಲ್ಲಿ ವೇಗದ ಬೌಲಿಂಗ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಐಪಿಎಲ್‌ನಲ್ಲಿ ಸಂದರ್ಶನವೊಂದರಲ್ಲಿ, ಉಮ್ರಾನ್ ಮಲಿಕ್ ಅವರು ಶೀಘ್ರದಲ್ಲೇ 155 ರ ವೇಗವನ್ನು ದಾಟಲು ಬಯಸುವುದಾಗಿ ಹೇಳಿದ್ದರು ಮತ್ತು ಅವರು ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಅದನ್ನು ಮಾಡಿದ್ದಾರೆ.
T20 World Cup: ವೇಗಿ ಉಮ್ರಾನ್ ಮಲಿಕ್ ಟೀಂ ಇಂಡಿಯಾ ನೆಟ್ ಬೌಲರ್
ಆದರೆ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಉಮ್ರಾನ್ ಮಲಿಕ್ ದುಬಾರಿ ಎನಿಸಿದರು. ಉಮ್ರಾನ್ ಮಲಿಕ್ ಗುರುವಾರ ತಮ್ಮ ನಾಲ್ಕು ಓವರ್‌ಗಳಲ್ಲಿ 52 ರನ್‌ಗಳನ್ನು ಬಿಟ್ಟುಕೊಟ್ಟರು. ಡೇವಿಡ್ ವಾರ್ನರ್ ತಮ್ಮ ಒಂದು ಓವರ್‌ನಲ್ಲಿ 21 ರನ್ ಗಳಿಸಿದರೆ, ರೋವ್‌ಮನ್ ಪೊವೆಲ್ 19 ರನ್ ದೋಚಿದರು. ವಿಶ್ವ ಕ್ರಿಕೆಟ್ ನಲ್ಲಿ ಅತಿವೇಗದ ಎಸೆತಗಳನ್ನು ಎಸೆದ ದಾಖಲೆ ಪಾಕಿಸ್ತಾನದ ಶೋಯೆಬ್ ಅಖ್ತರ್ ಹೆಸರಲ್ಲಿದೆ. 2002ಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು 161 ಕಿಲೋಮೀಟರ್ ವೇಗದಲ್ಲಿ ಎಸೆತ ಹಾಕಿದ್ದರು. ಇದು ವಿಶ್ವದಾಖಲೆ ಎನಿಸಿದೆ.