ಮ್ಯಾಂಚೆ​ಸ್ಟರ್‌(ಜು.20): ಕೊರೋನಾ ಸೋಂಕು ಹರಡಬ​ಹುದು ಎನ್ನುವ ಭೀತಿ​ಯಿಂದ ಚೆಂಡಿಗೆ ಎಂಜಲು ಹಾಕಿ ಉಜ್ಜಬಾರದು ಎನ್ನುವ ನಿಯ​ಮ​ವನ್ನು ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಸಮಿತಿ (ಐ​ಸಿಸಿ) ಜಾರಿ ಮಾಡಿದೆ. 

ಆದರೆ ಇಲ್ಲಿ ವಿಂಡೀಸ್‌ ವಿರುದ್ಧ ನಡೆ​ಯುತ್ತಿರುವ 2ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಆಟ​ಗಾರ ಡೊಮಿ​ನಿಕ್‌ ಸಿಬ್ಲಿ ಆಕ​ಸ್ಮಿಕವಾಗಿ ಚೆಂಡಿಗೆ ಎಂಜಲು ಹಾಕಿದರು. ತಕ್ಷಣ ಅಂಪೈರ್‌ ಸ್ಯಾನಿ​ಟೈ​ಸರ್‌ ಬಳಸಿ ಚೆಂಡನ್ನು ಸ್ವಚ್ಛಗೊಳಿ​ಸಿದ ಪ್ರಸಂಗ ನಡೆ​ಯಿತು. ಎಂಜಲು ಬಳಕೆ ಮಾಡಿ​ದರೆ 2 ಬಾರಿ ಅಂಪೈರ್‌ಗಳು ಎಚ್ಚರಿಕೆ ನೀಡ​ಲಿದ್ದು, 3ನೇ ಬಾರಿ ತಪ್ಪಾದರೆ ಪೆನಾಲ್ಟಿ ರೂಪ​ದಲ್ಲಿ ಎದು​ರಾಳಿ ತಂಡಕ್ಕೆ 5 ರನ್‌ ಸೇರ್ಪಡೆಗೊಳ್ಳ​ಲಿದೆ.

ಬಾಂಗ್ಲಾ ಕ್ರಿಕೆ​ಟಿ​ಗರ ಅಭ್ಯಾಸ: ಒಮ್ಮೆಗೆ ಒಬ್ಬ​ರಿಗೆ ಪ್ರವೇಶ!

ಢಾಕಾ: ಕೊರೋನಾ ಸೋಂಕಿನ ಭೀತಿ​ಯಿಂದಾಗಿ ಕ್ರಿಕೆಟ್‌ ಅಭ್ಯಾಸ ನಿಲ್ಲಿ​ಸಿದ್ದ ಬಾಂಗ್ಲಾ​ದೇಶ ಕ್ರಿಕೆ​ಟಿ​ಗರು ಭಾನುವಾರದಿಂದ ಅಭ್ಯಾಸ ಪುನ​ರಾಂಭಿ​ಸಿ​ದ್ದಾರೆ. 9 ಆಟ​ಗಾ​ರರು ಅಭ್ಯಾ​ಸಕ್ಕೆ ಮರ​ಳಿದ್ದು, ಕೋವಿಡ್‌-19 ಮಾರ್ಗ​ಸೂಚಿ ಪ್ರಕಾರ, ಒಮ್ಮೆಗೆ ಒಬ್ಬ ಕ್ರಿಕೆ​ಟಿಗ ಮಾತ್ರ ಕ್ರೀಡಾಂಗಣಕ್ಕೆ ಪ್ರವೇಶಿಸ​ಬೇಕು ಎಂದು ಬಾಂಗ್ಲಾ​ದೇಶ ಕ್ರಿಕೆಟ್‌ ಮಂಡಳಿ (ಬಿ​ಸಿ​ಬಿ​) ಸೂಚಿ​ಸಿದೆ. 

2ನೇ ಟೆಸ್ಟ್‌: ರೋಚಕ ಘಟ್ಟದತ್ತ ಆಂಗ್ಲೋ-ವಿಂಡೀಸ್ ಟೆಸ್ಟ್

ಒಬ್ಬ ಕ್ರಿಕೆ​ಟಿಗನ ಜೊತೆ ಒಬ್ಬ ಟ್ರೈನರ್‌ಗೆ ಮಾತ್ರ ಕ್ರೀಡಾಂಗಣ ಪ್ರವೇ​ಶಿ​ಸಲು ಅವ​ಕಾಶ ಸಿಗ​ಲಿದೆ. ಕೆಲ ಆಟ​ಗಾ​ರರು ಢಾಕಾ​ದಲ್ಲಿ ಅಭ್ಯಾಸ ನಡೆ​ಸಿ​ದರೆ, ಇನ್ನೂ ಕೆಲ​ವರು ಸೈಲ್ಹೆಟ್‌ನಲ್ಲಿ ನೆಟ್ಸ್‌ ಅಭ್ಯಾಸ ನಡೆ​ಸಿ​ದರು. ಆಟ​ಗಾರ ಹಾಗೂ ಟ್ರೈನರ್‌ ಪ್ರತ್ಯೇಕ ನೀರಿನ ಬಾಟಲ್‌, ಆಸನ, ಟಾಯ್ಲೆಟ್‌ಗಳನ್ನು ಬಳಕೆ ಮಾಡು​ವಂತೆ ಸೂಚಿ​ಸ​ಲಾ​ಗಿದೆ.