ನವ​ದೆ​ಹ​ಲಿ(ಡಿ.02): ಕಳೆ​ದೆ​ರಡು ಟೆಸ್ಟ್‌ ಸರ​ಣಿ​ಗ​ಳಲ್ಲಿ ಕೆಳ ಕ್ರಮಾಂಕ​ದಲ್ಲಿ ಬ್ಯಾಟಿಂಗ್‌​ನಲ್ಲಿ ವೇಗಿ ಉಮೇಶ್‌ ಯಾದವ್‌ ಅಭಿ​ಮಾ​ನಿ​ಗ​ಳನ್ನು ರಂಜಿ​ಸಿ​ದ್ದ​ರು. ಇತ್ತೀ​ಚೆಗೆ ಸುದ್ದಿ​ಗೋ​ಷ್ಠಿ​ಯಲ್ಲಿ ನಾಯಕ ವಿರಾ​ಟ್‌ ಕೊಹ್ಲಿ ಬಳಿ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ಪ್ರಶ್ನಿ​ಸಿ​ದಾಗ, ‘7ನೇ ಕ್ರಮಾಂಕದ ತನ​ಕವೂ ನಮ್ಮ ಬ್ಯಾಟಿಂಗ್‌ ಬಲ​ವಾ​ಗಿದೆ. ಇಷ್ಟೇ ವೇಗಿ ಉಮೇಶ್ ಯಾದವ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ನೀಡಲಿದ್ದೇವೆ ಎಂದಿದ್ದಾರೆ. 

ಇದನ್ನೂ ಓದಿ: RCBಗೆ ಹೊಸ ಆರಂಭಿಕ ಬ್ಯಾಟ್ಸ್‌ಮನ್; KKR ರೀತಿಯಲ್ಲೇ ಪ್ರಯೋಗ!

ಉಮೇಶ್‌ ಬ್ಯಾಟಿಂಗ್‌ ಪರಿ ನೋಡಿ​ದರೆ 3ನೇ ಕ್ರಮಾಂಕ ಅಥವಾ ಪಿಂಚ್‌ ಹಿಟ್ಟರ್‌ ಆಗಿ ಬ್ಯಾಟ್‌ ಮಾಡುವ ಸಾಧ್ಯ​ತೆ​ಯಿ​ದೆ​’ ಎಂದು ತಮಾಷೆ ಮಾಡಿ​ದ್ದ​ರು. ದಕ್ಷಿಣ ಆಫ್ರಿಕಾ ವಿರುದ್ಧ ರಾಂಚಿ ಟೆಸ್ಟ್‌​ನಲ್ಲಿ 10 ಎಸೆ​ತ​ಗ​ಳಲ್ಲಿ 31 ರನ್‌ ಗಳಿ​ಸಿ​ದ್ದು, ಟೆಸ್ಟ್‌ ಕ್ರಿಕೆ​ಟ್‌​ನಲ್ಲೇ ಅತಿ​ವೇಗದ 30 ಪ್ಲಸ್‌ ರನ್‌ ದಾಖಲೆ ಬರೆ​ದಿದ್ದರು. ಎದು​ರಿ​ಸಿದ ಮೊದ​ಲೆ​ರಡು ಎಸೆ​ತ​ಗ​ಳನ್ನು ಸಿಕ್ಸರ್‌ಗಟ್ಟಿ ಸಚಿನ್‌ ತೆಂಡುಲ್ಕರ್ ದಾಖಲೆ ಸರಿ​ಗ​ಟ್ಟಿ​ದ್ದರು.

ಇದನ್ನೂ ಓದಿ: ಉಮೇಶ್ ಯಾದವ್ ಲಾಸ್ಟ್ ಓವರ್- ಇಲ್ಲಿದೆ ಟ್ವಿಟರ್ ಪ್ರತಿಕ್ರಿಯೆ!

ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ವೇಗಿಯಾಗಿರುವ ಉಮೇಶ್ ಯಾದವ್ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಕೆಕೆಆರ್ ತಂಡ ಸುನಿಲ್ ನರೈನ್ ಆರಂಭಿಕನಾಗಿ ಕಣಕ್ಕಿಳಿಸಿದ ರೀತಿಯಲ್ಲೇ, ಆರ್‌ಸಿಬಿ ಉಮೇಶ್ ಕಣಕ್ಕಿಳಿಸಲು ಚಿಂತನೆ ನಡೆಸಿದೆ ಎನ್ನಲಾಗಿತ್ತು. ಇದರ ಬೆನ್ನಲ್ಲೇ ಕೊಹ್ಲಿ ತಮಾಷೆ ಕುತೂಹಲವನ್ನು ಹೆಚ್ಚಿಸಿದೆ.