ದುಬೈ(ಜೂ.07): ಕೊರೋನಾ ವೈರಸ್ ಕಾರಣ ಕ್ರಿಕೆಟ್ ಚಟುವಟಿಕೆ ಸ್ಥಗಿತಗೊಂಡಿದೆ. ಇದೀಗ ಅನ್‌ಲಾಕ್1 ಆರಂಭವಾಗುತ್ತಲೇ ಹಲವು ಕ್ಷೇತ್ರಗಳ ಪುನರ್ ಆರಂಭಕ್ಕೆ ಅನುಮತಿ ನೀಡಲಾಗಿದೆ. ಇದರ ಬೆನ್ನಲ್ಲೇ ಬಿಸಿಸಿಐ ಐಪಿಎಲ್ ಆಯೋಜನೆ ಕುರಿತು ನೀಲ ನಕ್ಷೆ ರೆಡಿ ಮಾಡುತ್ತಿದೆ. ಈಗಾಗಲೇ ದುಬೈ ಕ್ರಿಕೆಟ್, ಬಿಸಿಸಿಐ ಜೊತೆ  ಮಾತುಕತೆ ನಡೆಸಿತ್ತು. ದುಬೈನಲ್ಲಿ 2020ರ ಐಪಿಎಲ್ ಆಯೋಜಿಸಲು ಆಹ್ವಾನ ನೀಡಿತ್ತು. ಇದೀಗ ಬಿಸಿಸಿಐಗೆ ಈ ರೀತಿ ಆಫರ್ ನೀಡಿರುವುದನ್ನು UAE ಖಚಿತ ಪಡಿಸಿದೆ.

ಐಪಿಎಲ್ ನಡೆಯುತ್ತಾ? ಸಿಹಿ ಸುದ್ದಿ ನೀಡಿದ ಬಿಸಿಸಿಐ

2014ರಲ್ಲಿ ಆರಂಭಿಕ ಹಂತದ ಐಪಿಎಲ್ ಪಂದ್ಯಗಳನ್ನು ದುಬೈ ಆಯೋಜಿಸಿತ್ತು. ಇನ್ನು ಹಲವು ದ್ವಿಪಕ್ಷೀಯ ಸರಣಿಗಳಿಗೆ ದುಬೈ ತಟಸ್ಥ ಮೈದಾನವಾಗಿದೆ. ಹಲವು ಟೂರ್ನಿಗಳನ್ನು ದುಬೈ ಯಶಸ್ವಿಯಾಗಿ ಆಯೋಜಿಸಿದೆ. ಹೀಗಾಗಿ ಐಪಿಎಲ್ ಆಯೋಜನೆಗೆ, ಬಿಸಿಸಿಐಗೆ ಆಹ್ವಾನ ನೀಡಲಾಗಿತ್ತು. ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಕಾರಣ ಭಾರತದಲ್ಲಿ ಐಪಿಎಲ್ ಆಯೋಜನೆ ಕಷ್ಟವಾದರೆ ದುಬೈ ಸಿದ್ದವಿದೆ ಎಂದು ಮಾತುಕತೆಯಲ್ಲಿ ಹೇಳಿತ್ತು. 

ದುಬೈ ಆಹ್ವಾನಕ್ಕೆ ಬಿಸಿಸಿಐ ಯಾವುದೇ ಪ್ರತಿಕ್ರೆಯ ನೀಡಿಲ್ಲ. ಕಾರಣ ಆಟಾಗಾರರು, ಸಿಬ್ಬಂಧಿ ಹಾಗೂ ಪ್ರೇಕ್ಷಕರ ಆರೋಗ್ಯದ ದೃಷ್ಟಿಯಿಂದ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಕೊರೋನಾ ನಿಯಂತ್ರಣಕ್ಕೆ ಬಂದರೆ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಬಿಸಿಸಿಐ ಐಪಿಎಲ್ ಆಯೋಜಿಸಲು ಚಿಂತಿಸುತ್ತಿದೆ. ಆದರೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಭವಿಷ್ಯದ ಮೇಲೆ ಐಪಿಎಲ್ ಟೂರ್ನಿ ನಿಂತಿದೆ.