ಮೊದಲು ಬ್ಯಾಟ್‌ ಮಾಡಿದ ಭಾರತ 7 ವಿಕೆಟ್‌ ಕಳೆದುಕೊಂಡು ಗಳಿಸಿದ್ದು 251 ರನ್. ಬಾಂಗ್ಲಾಕ್ಕೆ ಇದು ದೊಡ್ಡ ಗುರಿಯೇನೂ ಆಗಿರಲಿಲ್ಲ. ಆದರೆ ಭಾರತದ ಬೌಲರ್‌ಗಳ ಮುಂದೆ ಬಾಂಗ್ಲಾ ಬ್ಯಾಟರ್‌ಗಳು ರನ್‌ ಗಳಿಸಲು ತಿಣುಕಾಡಿದರು. ತಂಡ 45.5 ಓವರ್‌ಗಳಲ್ಲಿ 167ಕ್ಕೆ ಗಂಟುಮೂಟೆ ಕಟ್ಟಿತು.

ಬ್ಲೂಮ್‌ಫಂಟೀನ್‌(ದ.ಆಫ್ರಿಕಾ): ದಾಖಲೆಯ 6ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಟೀಂ ಇಂಡಿಯಾ, ಈ ಬಾರಿ ಅಂಡರ್‌-19 ವಿಶ್ವಕಪ್‌ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಿದೆ. ಶನಿವಾರ ಮಾಜಿ ಚಾಂಪಿಯನ್‌ ಬಾಂಗ್ಲಾದೇಶ ವಿರುದ್ಧ ಭಾರತ 84 ರನ್‌ ಗೆಲುವು ಸಾಧಿಸಿತು.

ಮೊದಲು ಬ್ಯಾಟ್‌ ಮಾಡಿದ ಭಾರತ 7 ವಿಕೆಟ್‌ ಕಳೆದುಕೊಂಡು ಗಳಿಸಿದ್ದು 251 ರನ್. ಬಾಂಗ್ಲಾಕ್ಕೆ ಇದು ದೊಡ್ಡ ಗುರಿಯೇನೂ ಆಗಿರಲಿಲ್ಲ. ಆದರೆ ಭಾರತದ ಬೌಲರ್‌ಗಳ ಮುಂದೆ ಬಾಂಗ್ಲಾ ಬ್ಯಾಟರ್‌ಗಳು ರನ್‌ ಗಳಿಸಲು ತಿಣುಕಾಡಿದರು. ತಂಡ 45.5 ಓವರ್‌ಗಳಲ್ಲಿ 167ಕ್ಕೆ ಗಂಟುಮೂಟೆ ಕಟ್ಟಿತು.

ಸಾನಿಯಾಗೆ ಮಲಿಕ್ ಮದುವೆಯಾಗಲು ಸ್ವಲ್ಪವೂ ಇಷ್ಟವಿರಲಿಲ್ಲ, ಆದ್ರೂ ಪಾಕ್ ಕ್ರಿಕೆಟಿಗನ ಬಲೆಗೆ ಬಿದ್ದಿದ್ದು ಹೇಗೆ?

ಕೇವಲ 50ಕ್ಕೆ 4 ಪ್ರಮುಖ 4 ವಿಕೆಟ್ ಕಳೆದುಕೊಂಡ ಬಾಂಗ್ಲಾಕ್ಕೆ ಆರಿಫುಲ್‌ ಇಸ್ಲಾಂ(41), ಶಿಹಾಬ್‌(54) ಆಸರೆಯಾದರು. 5ನೇ ವಿಕೆಟ್‌ಗೆ 77 ರನ್‌ ಜೊತೆಯಾಟವಾಡಿದರು. ಆದರೆ ಇವರಿಬ್ಬರ ನಿರ್ಗಮನದ ಬಳಿಕ ಕುಸಿತಕ್ಕೊಳಗಾದ ಬಾಂಗ್ಲಾ ಮತ್ತೆ ಚೇತರಿಸಿಕೊಳ್ಳಲಿಲ್ಲ. ಸೌಮಿ ಪಾಂಡೆ 24ಕ್ಕೆ 4, ಮುಶೀರ್‌ ಖಾನ್‌ 35ಕ್ಕೆ 2 ವಿಕೆಟ್‌ ಕಿತ್ತರು.

ಉದಯ್‌, ಆದರ್ಶ್‌ ಆಸರೆ: 31 ರನ್‌ ಗಳಿಸುವಷ್ಟರಲ್ಲೇ ಇಬ್ಬರನ್ನು ಕಳೆದುಕೊಂಡ ಭಾರತಕ್ಕೆ ಚೇತರಿಕೆ ನೀಡಿದ್ದು ಆದರ್ಶ್‌ ಸಿಂಗ್‌ ಮತ್ತು ನಾಯಕ ಉದಯ್‌ ಸಹರನ್‌. 3ನೇ ವಿಕೆಟ್‌ಗೆ ಇವರಿಬ್ಬರು 116 ರನ್ ಸೇರಿಸಿದರು. ಆದರ್ಶ್‌ 76ಕ್ಕೆ ಔಟಾದರೆ, ನಾಯಕನ ಕೊಡುಗೆ 64 ರನ್‌. ಆ ಬಳಿಕ ಸಚಿನ್ ದಾಸ್‌ 26, ಪ್ರಿಯಾನ್ಶು 23, ಅವಾನಿಶ್‌ 23 ರನ್‌ ಕೊಡುಗೆ ನೀಡಿದರು. ಮಾರುಫ್‌ ಮ್ರಿದಾ 5 ವಿಕೆಟ್‌ ಗೊಂಚಲು ಪಡೆದರು.

ಸ್ಕೋರ್‌: 
ಭಾರತ 50 ಓವರಲ್ಲಿ 251/7(ಆದರ್ಶ್‌ 76, ಉದಯ್‌ 64, ಮಾರುಫ್‌ 5-43) 
ಬಾಂಗ್ಲಾದೇಶ 45.5 ಓವರಲ್ಲಿ 167/10 (ಶಿಹಾಬ್‌ 54, ಆರಿಫುಲ್‌ 41, ಸೌಮಿ 4-24, ಮುಶೀರ್‌ 2-35) 
ಪಂದ್ಯಶ್ರೇಷ್ಠ: ಆದರ್ಶ್‌ ಸಿಂಗ್‌

ಭಾರತದ ಮುಂದಿನ ಪಂದ್ಯ

ಜ.25ಕ್ಕೆ, ಐರ್ಲೆಂಡ್‌ ವಿರುದ್ಧ

ಸಾರಾ ಸುದ್ದಿ ನಡುವೆ ಭಾರತೀಯರಿಗೆ ಶಾಕ್‌ ಕೊಟ್ಟ ಸನಾ, ಯಾರೀಕೆ ಸಾನಿಯಾ ಮಿರ್ಜಾ ಸವತಿ?

ಇಂದಿನ ಪಂದ್ಯಗಳು

ನ್ಯೂಜಿಲೆಂಡ್‌-ನೇಪಾಳ

ಶ್ರೀಲಂಕಾ-ಜಿಂಬಾಬ್ವೆ

ಇಂಗ್ಲೆಂಡ್‌, ಪಾಕ್‌ಗೆ ಜಯ

ಟೂರ್ನಿಯಲ್ಲಿ ಮಾಜಿ ಚಾಂಪಿಯನ್‌ಗಳಾದ ಇಂಗ್ಲೆಂಡ್‌, ಪಾಕಿಸ್ತಾನ ಶುಭಾರಂಭ ಮಾಡಿದವು. ಸ್ಕಾಟ್ಲೆಂಡ್‌ ವಿರುದ್ಧ ಇಂಗ್ಲೆಂಡ್‌ 7 ವಿಕೆಟ್‌, ಅಫ್ಘಾನಿಸ್ತಾನ ವಿರುದ್ಧ ಪಾಕ್‌ 181 ರನ್‌ ಜಯಗಳಿಸಿದವು.

ಐಪಿಎಲ್‌ ಸ್ಥಳಾಂತರ ಬಗ್ಗೆ ನಿರ್ಧಾರವಾಗಿಲ್ಲ: ಶುಕ್ಲಾ

ನವದೆಹಲಿ: ಮುಂಬರುವ ಐಪಿಎಲ್‌ ಎಲ್ಲಿ ನಡೆಸಬೇಕು ಎಂಬುದರ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ಅವರು, ಐಪಿಎಲ್‌ ಭಾರತದಲ್ಲೋ ಅಥವಾ ಸ್ಥಳಾಂತರಗೊಳ್ಳಲಿದೆಯೋ ಎಂಬುದು ಸರ್ಕಾರದೊಂದಿನ ಚರ್ಚೆ ನಂತರ ಗೊತ್ತಾಗಲಿದೆ. ಈಗ ಮಾತುಕತೆ ನಡೆಯುತ್ತಿದೆ ಎಂದಿದ್ದಾರೆ. ಇನ್ನು, ಈ ಬಾರಿ ಡಬ್ಲ್ಯುಪಿಎಲ್‌ಗೆ ಬೆಂಗಳೂರು ಮತ್ತು ಡೆಲ್ಲಿ ನಗರಗಳು ಆತಿಥ್ಯ ವಹಿಸಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.