Asianet Suvarna News Asianet Suvarna News

U19 Women's T20 World Cup: ಪ್ರಶಸ್ತಿಗಾಗಿ ಭಾರತ - ಇಂಗ್ಲೆಂಡ್‌ ಫೈಟ್

* ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಫೈನಲ್‌ ಪ್ರವೇಶಿಸಿದ ಭಾರತ
* ಪ್ರಶಸ್ತಿಗಾಗಿ ಭಾರತ ಹಾಗೂ ಇಂಗ್ಲೆಂಡ್ ನಡುವೆ ಬಿಗ್‌ ಫೈಟ್
* ಜನವರಿ 29ರಂದು ನಡೆಯಲಿರುವ ಫೈನಲ್ ಪಂದ್ಯ

U19 Womens T20 World Cup India take on England in Final clash kvn
Author
First Published Jan 28, 2023, 12:04 PM IST

ಪಾಚೆಫ್‌ಸ್ಟ್ರೋಮ್‌(ದ.ಆಫ್ರಿಕಾ): ಪಾರ್ಶವಿ ಚೋಪ್ರಾರ ತ್ರಿವಳಿ ವಿಕೆಟ್‌ ಬಳಿಕ ಶ್ವೇತಾ ಸೆಹ್ರಾವತ್‌ರ ಸ್ಫೋಟಕ ಅರ್ಧಶತಕದ ನೆರವಿನಿಂದ ನ್ಯೂಜಿಲೆಂಡ್‌ ವಿರುದ್ಧದ ಸೆಮಿಫೈನಲ್‌ನಲ್ಲಿ 8 ವಿಕೆಟ್‌ ಜಯ ಸಾಧಿಸಿದ ಭಾರತ, ಚೊಚ್ಚಲ ಆವೃತ್ತಿಯ ಮಹಿಳಾ ಅಂಡರ್‌-19 ಟಿ20 ವಿಶ್ವಕಪ್‌ ಫೈನಲ್‌ಗೇರಿತು. ಜನವರಿ 29ರಂದು ನಡೆಯಲಿರುವ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಸೆಣಸಾಡಲಿವೆ.

ಟಾಸ್‌ ಗೆದ್ದು ಮೊದಲು ಬೌಲ್‌ ಮಾಡಿದ ಭಾರತ, ನ್ಯೂಜಿಲೆಂಡನ್ನು 20 ಓವರಲ್ಲಿ 9 ವಿಕೆಟ್‌ಗೆ 107 ರನ್‌ಗೆ ನಿಯಂತ್ರಿಸಿತು. ಪಾರ್ಶವಿ 4 ಓವರಲ್ಲಿ 20 ರನ್‌ಗೆ 3 ವಿಕೆಟ್‌ ಕಿತ್ತರು. 16ರ ಲೆಗ್‌ ಸ್ಪಿನ್ನರ್‌ ಸತತ 3 ವಿಕೆಟ್‌ ಕಬಳಿಸಿ 13ನೇ ಓವರಲ್ಲಿ ಕಿವೀಸ್‌ 74 ರನ್‌ಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿತು.ಭಾರತ 108 ರನ್‌ ಗುರಿಯನ್ನು 14.2 ಓವರಲ್ಲಿ 2 ವಿಕೆಟ್‌ ಕಳೆದುಕೊಂಡು ಬೆನ್ನತ್ತಿತು. ಶ್ವೇತಾ 45 ಎಸೆತದಲ್ಲಿ ಔಟಾಗದೆ 61 ರನ್‌ ಸಿಡಿಸಿದರು.

ಸ್ಕೋರ್‌: ನ್ಯೂಜಿಲೆಂಡ್‌: 20 ಓವರಲ್ಲಿ 107/9(ಪ್ಲಿಮ್ಮರ್‌ 35, ಪಾರ್ಶವಿ 3-20)

ಭಾರತ 14.2 ಓವರಲ್ಲಿ 110/2(ಶ್ವೇತಾ 61, ಸೌಮ್ಯ 22, ಬ್ರೌನಿಂಗ್‌ 2-18)

100 ರನ್‌ ಬೆನ್ನತ್ತದ ಆಸೀಸ್‌!

ಪಾಚೆಫ್‌ಸ್ಟ್ರೋಮ್‌: 2ನೇ ಸೆಮೀಸ್‌ನಲ್ಲಿ ಇಂಗ್ಲೆಂಡ್‌ ನೀಡಿದ್ದ 100 ರನ್‌ ಗುರಿಯನ್ನು ಬೆನ್ನತ್ತುವಲ್ಲಿ ಆಸ್ಪ್ರೇಲಿಯಾ ವಿಫಲವಾಯಿತು. ಇಂಗ್ಲೆಂಡ್‌ 19.5 ಓವರಲ್ಲಿ 99 ರನ್‌ಗೆ ಆಲೌಟ್‌ ಆದರೆ, ಆಸೀಸ್‌ 18.4 ಓವರಲ್ಲಿ 96 ರನ್‌ಗೆ ಸರ್ವಪತನ ಕಂಡಿತು. ಭಾನುವಾರ ನಡೆಯಲಿರುವ ಫೈನಲಲ್ಲಿ ಇಂಗ್ಲೆಂಡ್‌ ಹಾಗೂ ಭಾರತ ಸೆಣಸಲಿವೆ.

ಮಹಿಳಾ ಟಿ20 ವಿಶ್ವಕಪ್‌ಗೆ ಮಹಿಳಾ ಅಂಪೈರ್‌, ರೆಫ್ರಿ!

ದುಬೈ: ಇದೇ ಮೊದಲ ಬಾರಿಗೆ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಕೇವಲ ಮಹಿಳಾ ಅಂಪೈರ್‌ಗಳು, ರೆಫ್ರಿಗಳು ಕಾರ‍್ಯನಿರ್ವಹಿಸಲಿದ್ದಾರೆ. ಶುಕ್ರವಾರ ಈ ವಿಷಯ ಬಹಿರಂಗಪಡಿಸಿದ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ), ಕ್ರಿಕೆಟ್‌ನಲ್ಲಿ ಮಹಿಳೆಯರ ಬೆಳವಣಿಗೆಗೆ ಇದು ಮಹತ್ವದ ಹೆಜ್ಜೆ ಎಂದಿದೆ. 

U19 Women's T20 World Cup: ಶ್ವೇತಾ ಶೆರಾವತ್‌ ಭರ್ಜರಿ ಬ್ಯಾಟಿಂಗ್, ಫೈನಲ್‌ಗೆ ಲಗ್ಗೆಯಿಟ್ಟ ಭಾರತ..!

3 ಮ್ಯಾಚ್‌ ರೆಫ್ರಿಗಳು, 10 ಅಂಪೈರ್‌ಗಳು ಕಾರ‍್ಯನಿರ್ವಹಿಸಲು ಆಯ್ಕೆಯಾಗಿದ್ದು ಇದರಲ್ಲಿ ಭಾರತದ ರೆಫ್ರಿ ಜಿ.ಎಸ್‌.ಲಕ್ಷ್ಮಿ, ಅಂಪೈರ್‌ಗಳಾದ ವೃಂದಾ ರಾಠಿ ಹಾಗೂ ಜನನಿ ನಾರಾಯಣನ್‌ ಸಹ ಇದ್ದಾರೆ. ಫೆ.10ರಿಂದ 26ರ ವರೆಗೂ ದ.ಆಫ್ರಿಕಾದಲ್ಲಿ ವಿಶ್ವಕಪ್‌ ನಡೆಯಲಿದೆ.

ಗುಜರಾತ್‌ ಮಹಿಳಾ ಐಪಿಎಲ್‌ ತಂಡಕ್ಕೆ ಮಿಥಾಲಿ ಮೆಂಟರ್‌?

ನವದೆಹಲಿ: ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್‌ ಚೊಚ್ಚಲ ಆವೃತ್ತಿಯ ವುವೆಮ್ಸ್‌ ಪ್ರೀಮಿಯರ್‌ ಲೀಗ್‌ ಟಿ20 ಟೂರ್ನಿಯಲ್ಲಿ ಗುಜರಾತ್‌ ಜೈಂಟ್ಸ್‌ ತಂಡದ ಮಾರ್ಗದರ್ಶಕಿಯಾಗಿ ಕಾರ‍್ಯನಿರ್ವಹಿಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಭಾರತ ಪರ 89 ಟಿ20 ಪಂದ್ಯಗಳನ್ನಾಡಿರುವ ಮಿಥಾಲಿ 2364 ರನ್‌ ಗಳಿಸಿದ್ದಾರೆ. 2022ರ ಜೂನ್‌ನಲ್ಲಿ ಅವರು ಅಂ.ರಾ.ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದರು.

50 ಓವರಲ್ಲಿ ಕ್ರಿಕೆಟಲ್ಲಿ ಬೆಂಗ್ಳೂರಿನ ಗಗನ್‌ 344!

ಬೆಂಗಳೂರು: ಕೆಎಸ್‌ಸಿಎ ದ್ವಿತೀಯ ದರ್ಜೆ ಅಂಡರ್‌-14 ಬಿ.ಟಿ.ರಾಮಯ್ಯ ಶೀಲ್ಡ್‌ 50 ಓವರ್‌ ಕ್ರಿಕೆಟ್‌ ಟೂರ್ನಿಯಲ್ಲಿ ಬೆಂಗಳೂರಿನ ಗಿರಿಧನ್ವ ಶಾಲೆಯ ಗಗನ್‌ ಸಾಯಿ 150 ಎಸೆತದಲ್ಲಿ 344 ರನ್‌ ಸಿಡಿಸಿ ಗಮನ ಸೆಳೆದಿದ್ದಾರೆ. ಫ್ಲಾರೆನ್ಸ್‌ ಪಬ್ಲಿಕ್‌ ಶಾಲೆ ವಿರುದ್ಧದ ಅವರ ಇನ್ನಿಂಗ್ಸಲ್ಲಿ 59 ಬೌಂಡರಿ, 10 ಸಿಕ್ಸರ್‌ಗಳಿದ್ದವು. ಗಿರಿಧನ್ವ ಶಾಲೆ 50 ಓವರಲ್ಲಿ 5 ವಿಕೆಟ್‌ಗೆ 603 ರನ್‌ ಗಳಿಸಿತು. ಫ್ಲಾರೆನ್ಸ್‌ ಶಾಲೆ 16.4 ಓವರಲ್ಲಿ 69 ರನ್‌ಗೆ ಆಲೌಟ್‌ ಆಗಿ 534 ರನ್‌ ಸೋಲು ಅನುಭವಿಸಿತು.

Follow Us:
Download App:
  • android
  • ios