ಪೋಚೆಫ್‌ ಸ್ಟ್ರೋಮ್‌(ಫೆ.04): ಅಂಡರ್ 19 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳ ಸಂಘಟಿತ ಪ್ರದರ್ಶನಕ್ಕೆ ತತ್ತರಿಸಿದ ಪಾಕಿಸ್ತಾನ ಕೇವಲ 172 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಪ್ರಿಯಂ ಗರ್ಗ್‌ ಪಡೆಗೆ ಸುಲಭ ಗುರಿ ನೀಡಿದೆ.

ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಆದರೆ ಭಾರತೀಯ ಬೌಲರ್‌ಗಳು ಪಾಕಿಸ್ತಾನಕ್ಕೆ ಆಘಾತ ನೀಡುವಲ್ಲಿ ಯಶಸ್ವಿಯಾದರು. ಎರಡನೇ ಓವರ್‌ನಲ್ಲೇ ಮೊಹಮ್ಮದ್ ಹೌರಾರಿಯಾರನ್ನು ಪೆವಿಲಿಯನ್ನಿಗಟ್ಟುವಲ್ಲಿ ಸುಶಾಂತ್ ಯಶಸ್ವಿಯಾದರು. ಫಹಾದ್ ಮುನೀರ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಮೂರನೇ ವಿಕೆಟ್‌ಗೆ ಹೈದರ್ ಅಲಿ ಹಾಗೂ ನಾಯಕ ರೋಹಿಲ್ ನಜೀರ್ 62 ರನ್‌ಗಳ ಜತೆಯಾಟ ನಿಭಾಯಿಸಿರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿ ಜೈಸ್ವಾಲ್ ಸಫಲರಾದರು.  

ಅಂಡರ್-19 ವಿಶ್ವಕಪ್: ಇಂದು ಭಾರತ-ಪಾಕ್‌ ಸೆಮೀಸ್‌!

ಹೈದರ್ ಅಲಿ 56 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ನಜೀರ್ 62 ರನ್ ಗಳಿಸಿದರು. ಇನ್ನು ಮೊಹಮ್ಮದ್ ಹ್ಯಾರಿಸ್ 21 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಪಾಕಿಸ್ತಾನ ಉಳಿದ್ಯಾವ ಆಟಗಾರರು ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ.

ಭಾರತ ಪರ ಸುಶಾಂತ್ ಮಿಶ್ರಾ 3 ವಿಕೆಟ್ ಪಡೆದರೆ, ಕಾರ್ತಿಕ್ ತ್ಯಾಗಿ, ರವಿ ಬಿಷ್ಣೋಯಿ ತಲಾ 2 ವಿಕೆಟ್ ಪಡೆದರು. ಇನ್ನು ಅಥರ್ವ ಅಂಕೋಲ್ಕರ್ ಹಾಗೂ ಯಶಸ್ವಿ ಜೈಸ್ವಾಲ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.